ಪ್ರೀತಿಸಿದವಳ ಸಾವು, ಬ್ರೇಕಪ್, ಕೊನೆಗೆ ಮಂಗಳೂರು ಹುಡ್ಗೀನ ಮದ್ವೆಯಾದ ಬಾಲಿವುಡ್ ನಟ ವಿವೇಕ್ ಒಬೆರಾಯ್

Published : Nov 23, 2024, 07:50 PM ISTUpdated : Nov 25, 2024, 07:53 AM IST

ಬಾಲಿವುಡ್ ನಟ ವಿವೇಕ್ ಒಬೆರಾಯ್ ಮದುವೆಯಾಗಿದ್ದು, ಕರ್ನಾಟಕದ ಸಚಿವರ ಮಗಳು ಪ್ರಿಯಾಂಕ ಆಳ್ವಾ ಅವರನ್ನ. ಅಷ್ಟಕ್ಕೂ ವಿವೇಕ್, ಪ್ರಿಯಾಂಕಾಗೆ ಬೋಲ್ಡ್ ಆಗಿದ್ದು ಹೇಗೆ ಗೊತ್ತಾ?  

PREV
19
ಪ್ರೀತಿಸಿದವಳ ಸಾವು, ಬ್ರೇಕಪ್, ಕೊನೆಗೆ ಮಂಗಳೂರು ಹುಡ್ಗೀನ ಮದ್ವೆಯಾದ ಬಾಲಿವುಡ್ ನಟ ವಿವೇಕ್ ಒಬೆರಾಯ್

ಬಾಲಿವುಡ್ ನಟ ವಿವೇಕ್ ಒಬೆರಾಯ್  (Vivek Oberoi)ಮದುವೆಯಾಗಿದ್ದು ಪ್ರಿಯಾಂಕಾ ಆಳ್ವಾ ಅವರನ್ನ. ಆದರೆ ಪ್ರಿಯಾಂಕಾ ವಿವೇಕ್ ಜೀವನದಲ್ಲಿ ಬರೋ ಮುನ್ನ ಒಂದೆರಡು ರಿಲೇಶನ್’ಶಿಪ್ ನಲ್ಲಿದ್ರು . ಅದು ಕೂಡ ಟ್ರೂ ಲವ್. ವಿವೇಕ್ ಒಬೆರಾಯ್ ಯಾರಿಗೂ ಚೀಟ್ ಮಾಡಿಲ್ಲ, ಬ್ರೇಕ್ ಅಪ್ ಮಾಡ್ಕೊಂಡಿಲ್ಲ. ಆದರೆ ಪ್ರೀತಿಸಿದ ಇಬ್ಬರು ಹುಡುಗೀರು ಸಹ ಅವರಾಗಿಯೇ ಬಿಟ್ಟು ಹೋಗಿದ್ದಾರೆ. 
 

29

ಇತ್ತೀಚೆಗೆ, ವಿವೇಕ್ ಒಬೆರಾಯ್ ಇಂಟರ್ವ್ಯೂ ಒಂದರಲ್ಲಿ ತಮ್ಮ ಲವ್ ಲೈಫ್ (love life)ಬಗ್ಗೆ, ಹಾರ್ಟ್ ಬ್ರೇಕ್ ಬಗ್ಗೆ, ಮದುವೆ ಬಗ್ಗೆ, ಪ್ರಿಯಾಂಕಾ ಆಳ್ವಾರನ್ನು ಯಾಕೆ ಇಷ್ಟಪಟ್ಟರು ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲ್ಲಿದೆ ನೋಡಿ ವಿವೇಕ್ ಓಬೆರಾಯ್ ಸಂಪೂರ್ಣ ರಿಲೇಶನ್ ಶಿಪ್ ಸ್ಟೋರಿ. 

39

"ನಾನು ಸೀರಿಯಸ್ ಆಗಿ ಕೆಲವೇ ಸಂಬಂಧಗಳನ್ನು ಹೊಂದಿದ್ದೆ ಎಂದು ಹೇಳಿದ ವಿವೇಕ್ ಒಬೆರಾಯ್. ಕಾಲೇಜಿನಲ್ಲಿದ್ದ ಸಮಯವಂತೆ, ಆವಾಗ ಅವರು ಒಂದು ಬ್ಯುಸಿನೆಸ್ ಗೂ ಕೈ ಹಾಕಿದ್ದರು. ಜೊತೆಗೆ ಷೇರು ಮಾರುಕಟ್ಟೆಯಲ್ಲಿಯೂ ಹೂಡಿಕೆ ಮಾಡುತ್ತಿದ್ದರಂತೆ. ಹಾಗಾಗಿ ಪೂರ್ತಿಯಾಗಿ ಬ್ಯುಸಿಯಾಗಿದ್ದುದರಿಂದ ಸೀರಿಯಸ್ ರಿಲೇಶನ್ ಶಿಪ್ ನಲ್ಲಿರೋದಕ್ಕೆ ಬಯಸಿರಲಿಲ್ಲ ವಿವೇಕ್. 

49

ವಿವೇಕ್ ಗೆಳತಿ ಕ್ಯಾನ್ಸರ್ ನಿಂದ ನಿಧನ 
ಸೀರಿಯಸ್ ರಿಲೇಶನ್’ಶಿಪ್ ಬೇಡ್ವೇ ಬೇಡ ಅನ್ನೋದಕ್ಕೆ ಮುಖ್ಯ ಕಾರಣ ವಿವೇಕ್ ಒಬೆರಾಯ್ ಬಾಲ್ಯದ ಗೆಳತಿ ಕ್ಯಾನ್ಸರ್ ನಿಂದ ನಿಧನರಾಗಿದ್ದರಂತೆ. ಆಕೆ ಇವರ ಮೊದಲ ಪ್ರೀತಿ, ಆಕೆಯನ್ನು ಕಳೆದುಕೊಂಡ ನಂತ್ರ ಯಾವತ್ತೂ ಸೀರಿಯಸ್ ಆಗಿ ಲವ್ವಲ್ಲಿ ಬೀಳಲೇಬಾರದು ಎಂದು ಅಂದುಕೊಂಡಿದ್ದರಂತೆ ಇವರು. 

59

ಹಾಗಾಗಿ ಮುಂದೆ ಯಾವ ಸಂಬಂಧದಲ್ಲೂ ಗಂಭೀರವಾಗಿ ಇರಲಿಲ್ಲವಂತೆ, ಆದ್ರೆ ನಂತರ ಅವರಿಗೆ ಇಷ್ಟವಾಗಿದ್ದು, ಐಶ್ವರ್ಯ ರೈ (Aishwarya Rai), ಇಬ್ಬರು ಪ್ರೀತಿ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ. ಆದರೆ ಈ ಸಂಬಂಧ ಸಹ ಹೆಚ್ಚು ಸಮಯ ಉಳಿಯಲಿಲ್ಲ. ಇದಕ್ಕೆ ಸಲ್ಮಾನ್ ಖಾನ್ ಕಾರಣ ಎನ್ನಲಾಗಿದೆ. ಆದರೆ ಈ ಕುರಿತು ಮಾತನಾಡುವ ವಿವೇಕ್ ನಾನು ಯಾರನ್ನಾದರು ಲವ್ ಮಾಡಿದ್ರೆ ಅದನ್ನ ಸಂಪೂರ್ಣ ಹೃದಯದಿಂದ ಮಾಡಿದ್ದೆ, ತೋರಿಕೆಯ ಅಥವಾ ಟೈಮ್ ಪಾಸ್ ಪ್ರೀತಿ ನನ್ನದಾಗಿರಲಿಲ್ಲ ಎಂದಿದ್ದಾರೆ. 
 

69

ಐಶ್ವರ್ಯಾ ಮತ್ತು ವಿವೇಕ್ 2004ರ 'ಕ್ಯೂನ್ ಹೋ ಗಯಾ ನಾ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಚಿತ್ರದಿಂದ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು.ಆದಾಗ್ಯೂ, ಸಲ್ಮಾನ್ ಖಾನ್ ಅವರೊಂದಿಗಿನ ವಿವಾದದಿಂದಾಗಿ ವಿವೇಕ್ ಮತ್ತು ಐಶ್ವರ್ಯಾ ನಂತರ ಬೇರ್ಪಟ್ಟರು. ಇದಾದ ನಂತರ ವಿವೇಕ್ ಓಬೆರಾಯ್ ಯಾರನ್ನೂ ಲವ್ ಮಾಡದೇ ಇರಲು, ಮದುವೆಯಾಗದೇ ಇರಲು ನಿರ್ಧರಿಸಿದ್ದರಂತೆ. ಆದರೆ ನಂತ್ರ ಸಿಕ್ಕವರು ಪ್ರಿಯಾಂಕಾ ಆಳ್ವಾ. 
 

79

ವಿವೇಕ್ ಗೆ ಪ್ರಿಯಾಂಕಾ ಆಳ್ವಾ (Priyanka Alva) ಇಷ್ಟವಾಗಿದ್ದೆ ಒಂದು ರೋಚಕ ಕಥೆ . ವಿವೇಕ್ ತಮ್ಮ ತಾಯಿಯ ಆಜ್ಞೆಯ ಮೇರೆಗೆ ಪತ್ನಿ ಪ್ರಿಯಾಂಕಾ ಅವರನ್ನು ಭೇಟಿಯಾಗಿದ್ದರಂತೆ. ಅಮ್ಮ ಹೇಳಿದ್ದು ಇಷ್ಟೇ ಹುಡುಗಿ ಚೆನ್ನಾಗಿದ್ದಾಳೆ, ನೀನೊಮ್ಮೆ ಭೇಟಿಯಾಗು, ಇಷ್ಟ ಆಗದೇ ಇದ್ದರೆ, ಮತ್ತೆ ನಾನು ಯಾವತ್ತೂ ನಿನಗೆ ಮದುವೆಯಾಗು ಎಂದು ಒತ್ತಾಯ ಮಾಡಲ್ಲ ಅಂದಿದ್ದರಂತೆ. 
 

89

ಪ್ರಿಯಾಂಕಾ ಆಳ್ವಾ ಕರ್ನಾಟಕದ ಮಂತ್ರಿಗಳಾಗಿದ್ದ ಜೀವರಾಜ್ ಆಳ್ವಾ ಅವರ ಮಗಳು. ಇವರು ಮೂಲತಃ ಮಂಗಳೂರಿನವರು. ಪ್ರಿಯಾಂಕಾ ತಾಯಿ ನಂದಿನಿ ಕ್ಲಾಸಿಕ್ ಡ್ಯಾನ್ಸರ್. ಪ್ರಿಯಾಂಕರನ್ನು ಭೇಟಿಯಾಗಿದ್ದು ಕೇವಲ 2 ಗಂಟೆ ಮಾತ್ರ ಅಷ್ಟರಲ್ಲೇ ಆಕೆಯ ನೇರವಾದ ಮಾತು, ಸಿಂಪ್ಲಿಸಿಟಿ, ಬೋಲ್ಡ್ ನೆಸ್ ಎಲ್ಲವೂ ವಿವೇಕ್ ಗೆ ಇಷ್ಟವಾಗಿತ್ತಂತೆ.  
 

99

ಆವಾಗ್ಲೇ ಪ್ರಿಯಾಂಕಾಗೆ ಹೇಳಿದ್ದರಂತೆ, ನೀನು ಇಷ್ಟ ಆಗಿದ್ದಿ, ಮದ್ವೆ ಆದ್ರೆ ನಿನ್ನನ್ನೆ, ಇಲ್ಲಾಂದ್ರೆ ಮದ್ವೆ ಆಗಲ್ಲ ಎಂದು. ಕ್ನೆಗೆ ಪ್ರಿಯಾಂಕಾ ಕೂಡ ಇವರಿಗೆ ಓಕೆ ಎಂದಿದ್ದರು. ಕೊನೆಗೆ ವಿವೇಕ್ ,ಪ್ರಿಯಾಂಕಾ ಅವರನ್ನು ಬೆಂಗಳೂರಿನಲ್ಲಿ ವಿವಾಹವಾದರು. ಸದ್ಯ ಈ ಜೋಡಿ ಇಬ್ಬರು ಮಕ್ಕಳೊಂದಿಗೆ ಸುಂದರವಾಗಿ ಸಂಸಾರ ನಡೆಸುತ್ತಿದ್ದಾರೆ..
 

Read more Photos on
click me!

Recommended Stories