ರಾಜಮೌಳಿ ಸಿನಿಮಾಗೆ ಅವರೇ ಕರ್ತ, ಕರ್ಮ, ಕ್ರಿಯೆ. ಎಷ್ಟೇ ದೊಡ್ಡ ಸ್ಟಾರ್ ಹೀರೋ ಆದ್ರೂ ಅವರ ಮಾತು ಕೇಳ್ಬೇಕು. ಸಿನಿಮಾ ಎರಡು ವರ್ಷ ಆದ್ರೂ, ಮೂರು ವರ್ಷ ಆದ್ರೂ ಬೇರೆ ಸಿನಿಮಾ ಮಾಡಬಾರದು. ಗೆಟಪ್, ಸೆಟಪ್ ಬದಲಾಯಿಸಬಾರದು. ಸ್ಟಾರ್ ಹೀರೋಗಳ ಹಿಂದೆ ನಿರ್ದೇಶಕರು ಬೀಳೋದು ಸಹಜ. ಆದ್ರೆ ರಾಜಮೌಳಿ ಜೊತೆ ಸಿನಿಮಾ ಮಾಡೋಕೆ ಸ್ಟಾರ್‌ಗಳೇ ಕ್ಯೂ ಕಟ್ಟುತ್ತಾರೆ. ಅವರು ಮುಂದೆ ಯಾರಿಗೆ ಚಾನ್ಸ್ ಕೊಡ್ತಾರೆ ಅಂತ ಕಾಯುತ್ತಿರುತ್ತಾರೆ.