1996ರಲ್ಲಿ ವಿಜಯ್ ಮತ್ತು ಸಂಗೀತ ಮೊದಲು ಭೇಟಿಯಾಗಿದ್ದು. ಯುಕೆಯಲ್ಲಿದ್ದ ಸಂಗೀತ ವಾರ ವಾರವೂ ವಿಜಯ್ ಸಿನಿಮಾ ಸೆಟ್‌ಗೆ ಭೇಟಿ ನೀಡುತ್ತಿದ್ದರು. ಅಲ್ಲಿಂದಾನೇ ಈ ಜೋಡಿಯಲ್ಲಿ ಪ್ರೀತಿ ಚಿಗರೊಡೆಯಿತು. ಮದುವೆಯೂ ಆಯಿತು. ಸಂಸಾರವೂ ಎಲ್ಲರ ದೃಷ್ಟಿ ತಾಗುವಂತೆಯೇ ಇತ್ತು. ಯಾವುದೇ ಅಸಮಾಧಾನವೂ ಕಂಡಿರಲಿಲ್ಲ 23 ವರ್ಷಗಳ ಮ್ಯಾರೀಡ್ ಲೈಫಿನಲ್ಲಿ.