ತಂದೆ ಆಗ್ತಿದ್ದಾರಾ ನಟ ವಿಕ್ಕಿ ಕೌಶಲ್? ಕತ್ರಿನಾ ಕೈಫ್ ಪ್ರೆಗ್ನೆಂಟ್ ಸುದ್ದಿ ವೈರಲ್

First Published Jan 7, 2023, 10:51 AM IST

ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎನ್ನುವ ಸುದ್ದಿ ವೈರಲ್ ಆಗಿದೆ. 

ಬಾಲಿವುಡ್ ಸ್ಟಾರ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯಾಗಿ ಒಂದು ವರ್ಷವಾಗಿದೆ. 2021 ಡಿಸೆಂಬರ್ ನಲ್ಲಿ ವಿಕ್ಕಿ ಮತ್ತು ಕತ್ರಿನಾ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಒಂದು ವರ್ಷದ ಮೇಲೆ ಕತ್ರಿನಾ ಗರ್ಭಿಣಿ ಆಗಿದ್ದಾರೆ ಎನ್ನವ ಸುದ್ದಿ ವೈರಲ್ ಆಗಿದೆ. 

ಅಂದಹಾಗೆ ಕತ್ರಿನಾ ಪ್ರಗ್ನೆಂಟ್ ಸ್ಟೋರಿ ವೈರಲ್ ಆಗಿರುವುದು ಅವರ ಲುಕ್‌ನಿಂದ. ಇತ್ತೀಚಿಗಷ್ಟೆ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಜೋಡಿ ಮುಂಬೈನ ಪ್ರಸಿದ್ಧ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕತ್ರಿನಾ ಕೈಫ್ ಬೇಬಿ ಬಂಪ್ ಕಾಣುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕತ್ರಿನಾ ಫೋಟೋ ನೋಡಿದ ಅನೇಕರು ಪ್ರಗ್ನೆಂಟ್ ಎಂದು ಹೇಳುತ್ತಿದ್ದಾರೆ. ಗರ್ಭಿಣಿ ಆಗಿದ್ದರಿಂದ ಕತ್ರಿನಾ ಮತ್ತು ವಿಕ್ಕಿ ವಿನಾಯಕನ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

Latest Videos


ಅಂದಹಾಗೆ ಕತ್ರಿನಾ ಜೊತೆ ದೇವಸ್ಥಾನಕ್ಕೆ ಪತಿ ವಿಕ್ಕಿ ಕೌಶಲ್, ವೀಣಾ ಕೌಶಲ್  ತೆರಳಿದ್ದರು. ಮೂವರು ದೇವರಿಗೆ ಭಕ್ತಿಯಿಂದ ನಮಸ್ಕಾರ ಮಾಡುತ್ತಿರುವ ಫೋಟೋಗಳು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲವ್ ಆಗಿದೆ. ಕತ್ರಿನಾ ಸಂಪ್ರದಾಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು.  

ಅಂದಹಾಗೆ ಕತ್ರಿನಾ ಗರ್ಭಿಣಿ ಎನ್ನುವ ಸುದ್ದಿ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಕತ್ರಿನಾ ಕೈಫ್ ಗರ್ಭಿಣಿ ಸ್ಟೋರಿ ವೈರಲ್ ಆಗಿತ್ತು. ಹಾಗಾಗಿ ಅನೇಕರು ಇದು ಕೇವಲ ವದಂತಿ ಅಷ್ಟೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಗರ್ಭಿಣಿ ಆಗಿದ್ದರೆ ಖಂಡಿತವಾಗಿಯೂ ವಿಕ್ಕಿ ದಂಪತಿ ಬಹಿರಂಗ ಪಡಿಸುತ್ತಿದ್ದರು ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ. 

ವಿಕ್ಕಿ ಕೌಶಲ್ ಕೊನೆಯದಾಗಿ ಗೋವಿಂದ ಮೇರಾ ನಾಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದು. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು ಭೂಮಿ ಪಡ್ನೇಕರ್ ಜೊತೆ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 16ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆಗಿದೆ. ಸದ್ಯ ಎರಡು ಸಿನಿಮಾಗಳಲ್ಲಿ ವಿಕ್ಕಿ ಕೌಶಲ್ ಬ್ಯುಸಿಯಾಗಿದ್ದಾರೆ. 

ಕತ್ರಿನಾ ಕೈಫ್ ಕೊನೆಯದಾಗಿ ಫೋನ್ ಭೂತ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಟೈಗರ್-3 ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ.   

click me!