ರಶ್ಮಿಕಾ - ದೇವರಕೊಂಡ ಸೇರಿ ಬಾಲಿವುಡ್‌ನಲ್ಲಿ ಇವರು ಮಾಡಲಿಲ್ಲ ಕಮಾಲ್!

Published : Dec 14, 2022, 05:22 PM IST

2022ರಲ್ಲಿ ಬಾಲಿವುಡ್‌ಗೆ ಅನೇಕ ಹೊಸ ನಟರ ಪ್ರವೇಶ ನೀಡಿದ್ದಾರೆ. ಕೆಲವರು ಪ್ರಮುಖ ನಟಿಯಾಗಿ ಬಾಲಿವುಡ್‌ಗೆ ಕಾಲಿಟ್ಟರೆ, ಕೆಲವರು ಪೋಷಕ ಪಾತ್ರದಲ್ಲಿ ತಮ್ಮ ಕೌಶಲ್ಯದಿಂದ ಪ್ರೇಕ್ಷಕರನ್ನು ಸೆಳೆಯಲು ಬಂದರು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸಿನ ವಿಷಯದಲ್ಲಿ ಹೆಚ್ಚಿನ ಚೊಚ್ಚಲು ನಟರಿಗೆ ಯಶಸ್ಸು ಸಿಗಲಿಲ್ಲ. 3 ಜನ ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್‌ಗೆ ಬಂದಿದ್ದಾರೆ.  ಅದರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್‌ ದೇವರಕೊಂಡ (Vijay Devarkonda) ಸೇರಿದ್ದಾರೆ.  

PREV
18
ರಶ್ಮಿಕಾ - ದೇವರಕೊಂಡ ಸೇರಿ ಬಾಲಿವುಡ್‌ನಲ್ಲಿ ಇವರು ಮಾಡಲಿಲ್ಲ ಕಮಾಲ್!

ದಕ್ಷಿಣದ ಚಿತ್ರರಂಗದಲ್ಲಿ 'ಗೀತ ಗೋವಿಂದಂ' ಮತ್ತು 'ಅರ್ಜುನ್ ರೆಡ್ಡಿ' ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ವಿಜಯ್ ದೇವರಕೊಂಡ, ಪ್ಯಾನ್ ಇಂಡಿಯಾ ಚಿತ್ರ 'ಲೈಗರ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಪೂರಿ ಜಗನ್ನಾಥ್ ನಿರ್ದೇಶಿಸಿದ ಈ ಚಿತ್ರವು 25 ಆಗಸ್ಟ್ 2022 ರಂದು ಬಿಡುಗಡೆಯಾಯಿತು, ಅನನ್ಯ ಪಾಂಡೆ ಮತ್ತು ರಮ್ಯಾ ಕೃಷ್ಣನ್ ಸಹ ನಟಿಸಿದ್ದಾರೆ. ಚಿತ್ರ  ಸಂಪೂರ್ಣವಾಗಿ ಸೋತಿತು. ಅದು ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ಕೇವಲ  20.05 ಕೋಟಿಗಳಷ್ಟು ಮಾತ್ರ ಕಲೆಕ್ಷನ್‌ ಮಾಡಿತು. 

28

ರಶ್ಮಿಕಾ ಮಂದಣ್ಣ ಕೂಡ ದಕ್ಷಿಣದಿಂದ ಬಾಲಿವುಡ್‌ಗೆ ಬಂದಿದ್ದಾರೆ. ಸೌತ್‌ನಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಅವರ ಚೊಚ್ಚಲ ಚಿತ್ರ ವಿಫಲವಾಯಿತು. ವಿಕಾಸ್ ಬಹ್ಲ್ ನಿರ್ದೇಶನದ ಅವರ ಚೊಚ್ಚಲ ಚಿತ್ರ 'ಗುಡ್ ಬೈ', ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರಂತಹ ಹಿರಿಯ ತಾರೆಯರಿದ್ದರೂ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆತರಲು ಸಾಧ್ಯವಾಗಲಿಲ್ಲ ಮತ್ತು ಕೇವಲ 6.38 ಕೋಟಿ  ರೂ ಕಲೆಕ್ಷನ್‌ ಮಾಡಿದ ಈ ಚಿತ್ರವು 7 ಅಕ್ಟೋಬರ್ 2022 ರಂದು ಬಿಡುಗಡೆಯಾಯಿತು.

38

ಮಾಜಿ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಅವರ ಚೊಚ್ಚಲ ಚಿತ್ರ 'ಸಾಮ್ರಾಟ್ ಪೃಥ್ವಿರಾಜ್' ಈ ವರ್ಷ ಬಿಡುಗಡೆಯಾಯಿತು, ಇದರಲ್ಲಿ ಅಕ್ಷಯ್ ಕುಮಾರ್ ಅವರ ಜೊತೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 3 ಜೂನ್ 2022 ರಂದು ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಿದೆ ಎಂದು ಸಾಬೀತಾಯಿತು. ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೇವಲ 68.05 ಕೋಟಿ ರೂ ಕಲೆಕ್ಷನ್‌ ಮಾಡಿತು.

48

ಶ್ರೀಲಿ ಸೆಟಿಯಾ 2020ರಲ್ಲಿ ನೆಟ್‌ಫ್ಲಿಕ್ಸ್ ಚಿತ್ರ 'ಮಸ್ಕಾ' ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಆದರೆ ದೊಡ್ಡ ಪರದೆಯಲ್ಲಿ ಮತ್ತು ನಾಯಕಿಯಾಗಿ, ಅವರ ಮೊದಲ ಚಿತ್ರ 'ನಿಕಮ್ಮ' ಈ ವರ್ಷ ಬಿಡುಗಡೆಯಾಯಿತು. ಇದರಲ್ಲಿ ಅವರು ಅಭಿಮನ್ಯು ದಸ್ಸಾನಿ ಎದುರು ಕಾಣಿಸಿಕೊಂಡರು. ಸಬ್ಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಜೂನ್ 17, 2022 ರಂದು ಬಿಡುಗಡೆಯಾದ ಈ ಚಿತ್ರದ ಆಫೀಸ್ ಕಲೆಕ್ಷನ್ ಕೇವಲ 1.77 ಕೋಟಿ ರೂ.

58

'ಬೂಗೀ ವೂಗೀ' ಮತ್ತು 'ದಿಲ್ ದೋಸ್ತಿ ಡ್ಯಾನ್ಸ್' ರಿಯಾಲಿಟಿ ಶೋಗಳಲ್ಲಿ ಮತ್ತು 'ಪ್ಯಾರ್ ತುನೆ ಕ್ಯಾ ಕಿಯಾ' ದಂತಹ ಫಿಕ್ಷನ್ ಶೋಗಳಲ್ಲಿ ಟಿವಿಯಲ್ಲಿ ಕಾಣಿಸಿಕೊಂಡ ಶಾಂತನು ಮಹೇಶ್ವರಿ, ಈ ವರ್ಷ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಚೊಚ್ಚಲ ಯಶಸ್ಸು ಕಂಡಿತು. ಜನರು ಅವರ ಕೆಲಸವನ್ನು ಶ್ಲಾಘಿಸಿದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರವು ಸುಮಾರು 129.10 ಕೋಟಿ ಗಳಿಸಿತು. ಚಿತ್ರವು ಫೆಬ್ರವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

68

ಯೂಟ್ಯೂಬರ್-ನಟಿ ಪ್ರಜಕ್ತಾ ಕೋಲಿ ಅವರು ವರುಣ್ ಧವನ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ನೀತು ಕಪೂರ್ ಅಭಿನಯದ 'ಜಗ್ ಜಗ್ ಜಿಯೋ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು.ರಾಜ್ ಮೆಹ್ತಾ ನಿರ್ದೇಶಿಸಿದ ಈ ಚಿತ್ರವು 24 ಜೂನ್ 2022 ರಂದು ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 85.03 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು.

78

ದಿವಂಗತ ಗುಲ್ಶನ್ ಕುಮಾರ್ ಅವರ ಪುತ್ರಿ ಖುಶಾಲಿ ಕುಮಾರ್ ಈ ವರ್ಷ 'ಧೋಖಾ: ರೌಂಡ್ ದಿ ಕಾರ್ನರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 23 ಸೆಪ್ಟೆಂಬರ್ 2022 ರಂದು ಬಿಡುಗಡೆಯಾದ ಆರ್. ಮಾಧವನ್ ಅಭಿನಯದ ಚಿತ್ರವು ಕೇವಲ 2.75 ಕೋಟಿ ಗಳಿಸಿತು. ಈ ಚಿತ್ರವನ್ನು ಕೋಕಿ ಗುಲಾಟಿ ನಿರ್ದೇಶಿಸಿದ್ದಾರೆ.


 

88

ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಈ ವರ್ಷ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ಅಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದರು. 11 ಆಗಸ್ಟ್ 2022 ರಂದು ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೇವಲ 58.73 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. 

Read more Photos on
click me!

Recommended Stories