70 ರ ದಶಕದಲ್ಲೇ ಪ್ಯಾನ್ ಇಂಡಿಯಾ ನಟಿಯಾಗಿ 5 ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದ ನಟಿ ಲಕ್ಷ್ಮಿ!

Published : Dec 14, 2022, 04:34 PM IST

ಕಳೆದ ವರ್ಷಗಳಿಂದ ದಕ್ಷಿಣ ಭಾರತೀಯ ಚಿತ್ರಗಳು ಬಾಲಿವುಡ್ ಚಿತ್ರಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿವೆ. ಪ್ಯಾನ್ ಇಂಡಿಯಾದ ಹವಾ ಎಲ್ಲೆಡೆ ಹರಡುತ್ತಿದೆ. ಪ್ರಭಾಸ್ ಅವರ 'ಬಾಹುಬಲಿ' ಹಿಂದಿ ಬೆಲ್ಟ್‌ನಲ್ಲಿ ದಾಖಲೆಗಳನ್ನು ಮುರಿದಾಗಿನಿಂದ 'ಪ್ಯಾನ್ ಇಂಡಿಯಾ' ಪದ ಜನಪ್ರಿಯವಾಗಲು ಪ್ರಾರಂಭಿಸಿತು. ಪ್ರಭಾಸ್ ಜೊತೆಗೆ ರಾಮ್ ಚರಣ್, ಯಶ್, ಜೂನಿಯರ್ ಎನ್‌ಟಿಆರ್ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿ ಹೊರಹೊಮ್ಮಿದರು. ಆದರೆ 70 ಮತ್ತು 80 ರ ದಶಕದಲ್ಲಿ, ದಕ್ಷಿಣದ ಚಲನಚಿತ್ರಗಳನ್ನು ಹೊರತುಪಡಿಸಿ ಹಿಂದಿ ಚಲನಚಿತ್ರಗಳಲ್ಲೂ ಹೆಸರು ಮಾಡಿದವರಲ್ಲಿ ಕನ್ನಡದ  ನಟಿ ಲಕ್ಷ್ಮಿ (Lakshmi) ಅವರು ಒಬ್ಬರು.  

PREV
16
70 ರ ದಶಕದಲ್ಲೇ ಪ್ಯಾನ್ ಇಂಡಿಯಾ ನಟಿಯಾಗಿ 5 ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದ ನಟಿ ಲಕ್ಷ್ಮಿ!

ಬಾಲ ಕಲಾವಿದೆಯಾಗಿ ವೃತ್ತಿ ಜೀವನ (Career) ಆರಂಭಿಸಿದ ಲಕ್ಷ್ಮಿ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮ ಮೊದಲ ಚಿತ್ರ 'ಜೂಲಿ' ಮೂಲಕ ಪ್ರಾಬಲ್ಯ ಮೆರೆದರು. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಅನೇಕ ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದರು. ಎಲ್ಲಾ ಐದು ಭಾಷೆಗಳಲ್ಲಿ ಫಿಲ್ಮ್‌ಫೇರ್ ಗೆದ್ದ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟೇ ಅಲ್ಲ, ಈ ಭಾಷೆಗಳ ಸಿನಿಮಾಗಳಲ್ಲಿ ಸ್ವತಃ ಅವರೇ ಡಬ್ಬಿಂಗ್ ಮಾಡುತ್ತಿದ್ದರು.

26

 1961ರಲ್ಲಿ ತಮಿಳಿನಲ್ಲಿ ‘ಶ್ರೀ ವಲ್ಲಿ’ ಸಿನಿಮಾದಲ್ಲಿ ನಟಿಸಿದಾಗ ಅವರ ವಯಸ್ಸು ಕೇವಲ 9 ವರ್ಷ. ತಮ್ಮ 16 ನೇ ವಯಸ್ಸಿನಲ್ಲಿ, ಅವರು ತಮಿಳು ಚಲನಚಿತ್ರ 'ಜೀವನಂಸಂ' (1968) ನಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ಇದಾದ ನಂತರ ಆಕೆ ಹಿಂದಿರುಗಿ ನೋಡಲೇ ಇಲ್ಲ. ಅದೇ ವರ್ಷದಲ್ಲಿ ಅವರು ತೆಲುಗಿನಲ್ಲಿ 'ಬಾಂಧವ್ಯಲು' ಮತ್ತು ಕನ್ನಡದಲ್ಲಿ 'ಗೋದಳ್ಳಿ ಸಿಐಡಿ 999' ಚಿತ್ರದ ಮೂಲಕ ಕನ್ನಡ ಚಿತ್ರಲೋಕಕ್ಕೂ ಕಾಲಿಟ್ಟರು. 

36

ಲಕ್ಷ್ಮಿ 1974 ರಲ್ಲಿ 'ಚಟ್ಟಕ್ಕರಿ' ಚಿತ್ರದ ಮೂಲಕ ಮಲಯಾಳಂಗೂ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಬೆಂಗಳೂರಿನ ಯಾವುದೇ ಥಿಯೇಟರ್‌ನಲ್ಲಿ 40 ವಾರಗಳಿಗಿಂತ ಹೆಚ್ಚು ಕಾಲ ಓಡಿದ ಮೊದಲ ಚಿತ್ರ ಇದು.

46

ನಾಲ್ಕೂ ಭಾಷೆಯಲ್ಲೂ ಅಪ್ರತಿಮ ನಾಯಕಿ ಎನಿಸಿಕೊಂಡ ಅವರ ಬಳಿ ಸಾಕಷ್ಟು ಸಿನಿಮಾಗಳಿದ್ದವು. ದಕ್ಷಿಣದಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಲಕ್ಷ್ಮಿ 1975ರಲ್ಲಿ ‘ಜೂಲಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ರಾತ್ರೋರಾತ್ರಿ ಹಿಂದಿ ಪ್ರೇಮಿಗಳ ಹೃದಯವನ್ನು ಆಳತೊಡಗಿದರು.

56

ಈ ಚಿತ್ರವು ಮಲಯಾಳಂನ 'ಚಟ್ಟಕ್ಕರಿ' ಚಿತ್ರದ ಹಿಂದಿ ರಿಮೇಕ್ ಆಗಿತ್ತು. ಈ ಚಿತ್ರಕ್ಕಾಗಿ ಲಕ್ಷ್ಮಿ 'ಅತ್ಯುತ್ತಮ ನಟಿ' ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸಹ ಪಡೆದರು. ಹಿಂದಿ ಇಂಡಸ್ಟ್ರಿಯಲ್ಲಿ ಆಕೆ ಮಾಡಿದ್ದು ಕೇವಲ ಐದು ಸಿನಿಮಾಗಳು. ಅವರ ಕೊನೆಯ ಹಿಂದಿ ಚಿತ್ರ 2004 ರಲ್ಲಿ ಬಿಡುಗಡೆಯಾದ 'ಹಲ್ಚಲ್'.

66

ಲಕ್ಷ್ಮಿ ಅವರು  ನಟನೆಯಲ್ಲಿ ಸಕ್ರಿಯವಾಗಿದ್ದಾರೆ. 2021ರಲ್ಲಿ ಅವರು ತಮ್ಮ ತೆಲುಗು ಚಿತ್ರ 'ಓ ಬೇಬಿ!' ನಲ್ಲಿ ಕಾಣಿಸಿಕೊಂಡಿದ್ದಾರೆ. 'ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ' ಪ್ರಶಸ್ತಿ ಪಡೆದಿದ್ದಾರೆ. 2022ರಲ್ಲಿ ಅವರ ಕನ್ನಡ ಚಿತ್ರ 'ಟ್ರೈಕಾನ್' ಬಿಡುಗಡೆಯಾಗಿದೆ. 70ರ ಹರೆಯದಲ್ಲೂ ಸೌತ್ ಸಿನಿಮಾಗಳಲ್ಲಿ ನಟಿಸಿ ಜನರ ಮನ ಗೆಲ್ಲುತ್ತಿದ್ದಾರೆ.

Read more Photos on
click me!

Recommended Stories