ಬೀದಿಯಲ್ಲೇ ಸೈಫೀನಾ ಚುಂಬನ: ಮನೆಯಲ್ಲಿ ಏನ್ಮಾಡ್ತಾರೆ ಇವರೆಂದ ನೆಟ್ಟಿಗರು!

Published : Dec 14, 2022, 05:03 PM IST

ಬಾಲಿವುಡ್‌ ಕರೀನಾ ಕಪೂರ್ (Kapreena Kapoor)  ಮತ್ತು ಸೈಫ್ ಅಲಿ ಖಾನ್ (Saif Ali Khan) ದಂಪತಿ ವೈಯಕ್ತಿಕ ಜೀವನದಲ್ಲಿ ಬ್ಯುಸಿ ಇದ್ದಾರೆ. ಕುಟುಂಬದ ಜೊತೆ ಸಮಯವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಸೈಫ್-ಕರೀನಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರೂ ಸಾರ್ವಜನಿಕವಾಗಿ ಪರಸ್ಪರ ಚುಂಬಿಸುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ ಇವರ ಮಗ ತೈಮೂರ್‌ (Taimur) ಸ್ಥಿತಿಯನ್ನು ನೋಡಿ ಜನ ಶಾಕ್‌ ಆಗಿದ್ದಾರೆ ಹಾಗೂ ತೀವ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. 

PREV
16
ಬೀದಿಯಲ್ಲೇ ಸೈಫೀನಾ ಚುಂಬನ: ಮನೆಯಲ್ಲಿ ಏನ್ಮಾಡ್ತಾರೆ ಇವರೆಂದ ನೆಟ್ಟಿಗರು!

ಕರೀನಾ ಕಪೂರ್‌ ಮತ್ತು ಸೈಫ್‌ ಆಲಿ ಖಾನ್‌ ದಂಪತಿ ವಾಕಿಂಗ್ ಮಾಡುವಾಗ ಇದ್ದಕ್ಕಿದ್ದಂತೆ ಒಬ್ಬರಿಗೊಬ್ಬರು ಚುಂಬಿಸಿ, ನಂತರ ಚಲಿಸುವುದನ್ನುವಾಕ್‌ ಮಾಡುತ್ತಿರುವುದು ಫೋಟೋಗಳಲ್ಲಿ ಕಾಣಬಹುದು. 

26

ಈ ಸಮಯದಲ್ಲಿ ಜೊತೆಯಲ್ಲಿದ  ಮಗ ತೈಮೂರ್ ಅಲಿಖಾನ್‌ನನ್ನು ಸೈಫ್‌ ಭುಜದ ಮೇಲೆ ತಲೆ ಕೆಳಗೆ ಮಾಡಿ ಗೋಣಿಚೀಲದಂತೆ ಎತ್ತಿಕೊಂಡಿದ್ದಾರೆ. ತೈಮೂರ್‌ ಈ ಸ್ಥಿತಿ ನೋಡಿ ಜನ ಶಾಕ್‌ ಆಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ

36

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಇಬ್ಬರಿಗೂ ಸದ್ಯಕ್ಕೆ ಯಾವುದೇ ಸಿನಿಮಾ ಆಫರ್‌ಗಳಿಲ್ಲ. ಇಬ್ಬರೂ ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿರಲು ಇದೇ ಕಾರಣ. ಇತ್ತೀಚೆಗಷ್ಟೇ ಈ ಜೋಡಿ ಶರ್ಮಿಳಾ ಟ್ಯಾಗೋರ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು

46

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಬಾಂದ್ರಾ ಅಪಾರ್ಟ್ಮೆಂಟ್ ಹೊರಗೆ ಕಾಣಿಸಿಕೊಂಡರು. ಈ ವೇಳೆ ಇಬ್ಬರೂ ಫಾರ್ಮಲ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಕರೀನಾ ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತರಾಗಿದ್ದಾಗ, ಸೈಫ್ ತೈಮೂರ್ ಅನ್ನು ಭುಜದ ಮೇಲೆ ತಲೆಕೆಳಗಾಗಿ ನೇತಾಡಿಸಿಕೊಂಡಿರುವುದನ್ನು ಫೋಟೋಗಳಲ್ಲಿ ಕಾಣಬಹುದು.
 

56

ತೈಮೂರ್‌ನ ಸ್ಥಿತಿ ನೋಡಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. 'ಇವರ ಚುಂಬನದಿಂದ ಮಗುವಿನ ಸ್ಥಿತಿ ಹದಗೆಟ್ಟಿತು' ಎಂದು ಒಬ್ಬರು ಬರೆದಿದ್ದಾರೆ. 'ತೈಮೂರ್ ಏನನ್ನೂ ನೋಡಲಾಗಲಿಲ್ಲ. ಅವನನ್ನು ತಲೆಕೆಳಗಾಗಿ ನೇತು ಹಾಕಿದರು' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಇವೆಲ್ಲವನ್ನೂ ಸಾರ್ವಜನಿಕವಾಗಿ ಮಾಡುವುದು ಅಗತ್ಯವೇ?' ಎಂದು  ಸೈಫ್-ಕರೀನಾ ಕಿಸ್ ಕುರಿತು ಪ್ರತಿಕ್ರಿಯಿಸಿ ಒಬ್ಬರು ಬರೆದಿದ್ದಾರೆ. 'ಮಗು ಬಿದ್ದರೆ ಬಿಳಲಿ ಕಿಸ್ ಮಾಡುವುದು ಹೆಚ್ಚು ಮುಖ್ಯ' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

66

ಕರೀನಾ ಕಪೂರ್ ಮೇಕಪ್ ಇಲ್ಲದೆ ಕಾಣಿಸಿಕೊಂಡಿರುವುದನ್ನು ಫೋಟೋಗಳಲ್ಲಿ ಕಾಣಬಹುದು ಮತ್ತು ಅವರು ಯಾರೊಂದಿಗೊ ಫೋನ್‌ನಲ್ಲಿ  ಮಾತನಾಡುತ್ತಿದ್ದಾರೆ

Read more Photos on
click me!

Recommended Stories