ಮುಂದಿನ ತಿಂಗಳೇ ವಿಜಯ್‌ ದೇವರಕೊಂಡ-ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ನಟನ ಟೀಮ್ ಹೇಳಿದ್ದೇನು?

First Published | Jan 9, 2024, 1:39 PM IST

ಸದ್ಯ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಹರಿದಾಡ್ತಿರೋದು ಒಂದೇ ಸುದ್ದಿ. ಅದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ವಿಚಾರ. ಇಬ್ಬರೂ ಇದೇ ಫೆಬ್ರವರಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ  ಈ ಬಗ್ಗೆ ವಿಜಯ್ ದೇವರಕೊಂಡ ತಂಡ ಪ್ರತಿಕ್ರಿಯಿಸಿದೆ. 

ಸದ್ಯ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಹರಿದಾಡ್ತಿರೋದು ಒಂದೇ ಸುದ್ದಿ. ಅದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ವಿಚಾರ. ಈ ಸೆಲೆಬ್ರಿಟಿ ಜೋಡಿ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಇದೇ ಫೆಬ್ರವರಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.

ವಿಜಯ್ ಮತ್ತು ರಶ್ಮಿಕಾ ತಮ್ಮ ಡೇಟಿಂಗ್ ವದಂತಿಗಳಿಂದಾಗಿ ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. ಆದರೆ ಇತ್ತೀಚಿಗೆ ಇಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದಾಗಿ ಇಬ್ಬರೂ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋದು ಹೆಚ್ಚು ಸ್ಪಷ್ಟವಾಗಿದೆ.

Tap to resize

ವರದಿಗಳ ಪ್ರಕಾರ, ಫೆಬ್ರವರಿಯಲ್ಲಿ ವಿಜಯ್ ದೇವರಕೋಡ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ವಿಜಯ್ ದೇವರಕೊಂಡ ತಂಡವು ನಿಶ್ಚಿತಾರ್ಥದ ವದಂತಿಗಳಿಗೆ ಪ್ರತಿಕ್ರಿಯಿಸಿದೆ. ಈ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಇದಕ್ಕೂ ಮೊದಲು, ದೀಪಾವಳಿ ಸಂದರ್ಭದಲ್ಲಿ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ Instagram ನಲ್ಲಿ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶುಭ ಹಾರೈಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವಿನ ಫೋಟೋದಲ್ಲಿನ ಹೋಲಿಕೆ ಎಲ್ಲರ ಗಮನ ಸೆಳೆದಿತ್ತು.

ವಿಜಯ್ ದೇವರಕೊಂಡ ಅವರ ಬಂಗಲೆಯ ಟೆರೇಸ್‌ನಲ್ಲಿ ಪೋಸ್ ನೀಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ರಶ್ಮಿಕಾ ಪೋಸ್ಟ್ ಮಾಡಿದ ಬ್ಯಾಕ್‌ಗ್ರೌಂಡ್ ಫೋಟೋ ಸಹ ಇದೇ ಆಗಿತ್ತು. ಹೀಗಾಗಿ ಈ ಪೋಸ್ಟ್ ವೈರಲ್ ಆಗಿದ್ದು, ಇವರಿಬ್ಬರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಅಭಿಮಾನಿಗಳು ಊಹೆ ಮಾಡಿದ್ದರು.

ಇತ್ತೀಚೆಗೆ, ಕುಶಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ವಿಜಯ್ ದೇವರಕೊಂಡ 'ನಾನು ನನ್ನದೇ ಆದ ವೈವಾಹಿಕ ಜೀವನವನ್ನು ಹೊಂದಲು ಆಶಿಸುತ್ತೇನೆ. ಮದುವೆ ಎಂಬುದು ಪ್ರತಿಯೊಬ್ಬರೂ ಜೀವನದಲ್ಲಿ ಅನುಭವಿಸಬೇಕಾದ ಒಂದು ಅಧ್ಯಾಯವಾಗಿದೆ' ಎಂದು ತಿಳಿಸಿದ್ದರು. 

ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ, ನನ್ನ ಲೈಫ್​ಗೆ ಎಂಟ್ರಿ ಕೊಟ್ಟಿರುವುದಕ್ಕೆ ಧನ್ಯವಾದ ಎಂದು ಹೇಳಲು ಬಯಸುತ್ತೇನೆ ಎಂಬ ಬರಹ ಇರುವ ಪೋಸ್ಟ್​ ಹಾಕಿದ್ದರು.  

ಅಭಿಮಾನಿಯೊಬ್ಬರು 'ನೀವು ನಮ್ಮ ನ್ಯಾಷನಲ್ ಕ್ರಶ್ ಮೇಡಂ..  ಮುಂದೊಂದು ದಿನ ನನಗೆ ನಿಮ್ಮಂತಹ ಹೆಂಡತಿ ಸಿಗುತ್ತಾಳೆ ಎಂದು ನಾನು ಭಾವಿಸುತ್ತೇನೆ' ಎಂದು ಬರೆದು ರಶ್ಮಿಕಾರಿಗೆ ಟ್ಯಾಗ್​ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ,  'ಓಹ್.. ನಾನು ಮದುವೆಯಾದಾಗ, ನನ್ನ ಪತಿ ಕೂಡ ನನ್ನನ್ನು ಅದ್ಭುತ ಹೆಂಡತಿ ಎಂದು ಭಾವಿಸುತ್ತಾರೆ' ಎಂದು ಕಮೆಂಟ್ ಮಾಡಿದ್ದರು. 

'ಗೀತ ಗೋವಿಂದಂ' ಚಿತ್ರದ ಮೂಲಕ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಪರಿಚಯವಾಗಿದ್ದರು. ಈ ಸಿನಿಮಾ ಥಿಯೇಟರ್‌ನಲ್ಲಿ ಸಹ ಉತ್ತಮ ಪ್ರದರ್ಶನ ಕಂಡಿತ್ತು. ಚಿತ್ರದಲ್ಲಿ ಜೋಡಿಯ ಲಿಪ್‌ಲಾಕ್‌ ಹೆಚ್ಚು ಸುದ್ದಿಯಾಗಿತ್ತು.

ಆ ನಂತರ ಈ ಜೋಡಿ 'ಡಿಯರ್‌ ಕಾಮ್ರೇಡ್‌' ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದರು. ಆದರೆ, ಈ ಚಿತ್ರ ಥಿಯೇಟರ್‌ನಲ್ಲಿ ಸೋತು ಹೋಯಿತು. ಆದರೂ ಪ್ರೇಕ್ಷಕರ ಮನಸ್ಸಿಗೆ ವಿಜಯ್‌ ಹಾಗೂ ರಶ್ಮಿಕಾ ಜೋಡಿ ಇಷ್ಟವಾಯಿತು. ಇಬ್ಬರ ನಡುವೆ ಪ್ರೀತಿಯಿದೆ ಎಂದೇ ಎಲ್ಲರೂ ಮಾತನಾಡಿಕೊಂಡರು. ಇಬ್ಬರೂ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಗಾಸಿಪ್‌ ಸಹ ಎಲ್ಲೆಡೆ ಹಬ್ಬಿತ್ತು. 

Latest Videos

click me!