ಬ್ಯಾಕ್‌ ಟು ಬ್ಯಾಕ್ ಹಿಟ್ ಮೂವಿ ನೀಡಿದ್ದ ನಟಿ, ಆಕ್ಸಿಡೆಂಟ್‌ನಿಂದ ಸಿನಿ ಕೆರಿಯರ್ ಮುಗ್ದೇ ಹೋಯ್ತು!

First Published | Jan 9, 2024, 12:23 PM IST

ಆಕೆ ಬ್ಯಾಕ್-ಟು-ಬ್ಯಾಕ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಹಿಂದಿ ಚಿತ್ರರಂಗದ ಪ್ರಸಿದ್ಧ ನಟಿ. ಜಿತೇಂದ್ರ ಅವರೊಂದಿಗಿನ ನಟಿಯ ಕೆಮಿಸ್ಟ್ರಿ ಆ ಕಾಲದಲ್ಲಿ ಹೆಚ್ಚು ಸುದ್ದಿಯಾಗಿತ್ತು. ಆದರೆ ಆ ಒಂದು ಆಕ್ಸಿಡೆಂಟ್ ನಟಿಯ ಸಿನ್ಮಾ ಕೆರಿಯರ್‌ನ್ನು ಸಂಪೂರ್ಣವಾಗಿ ಹಾಳುಮಾಡಿತು. ಯಾರು ಆ ನಟಿ? 

ಆಕೆ ಬ್ಯಾಕ್-ಟು-ಬ್ಯಾಕ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಹಿಂದಿ ಚಿತ್ರರಂಗದ ಪ್ರಸಿದ್ಧ ನಟಿ. ಜಿತೇಂದ್ರ ಅವರೊಂದಿಗಿನ ನಟಿಯ ಕೆಮಿಸ್ಟ್ರಿ ಆ ಕಾಲದಲ್ಲಿ ಹೆಚ್ಚು ಸುದ್ದಿಯಾಗಿತ್ತು. ನಿರ್ಮಾಪಕರು, ನಿರ್ದೇಶಕರು ತಮ್ಮ ಚಿತ್ರದಲ್ಲಿ ಆಕೆಯೇ ನಟಿಸಬೇಕೆಂದು ಕಾಲ್‌ಶೀಟ್ ಹಿಡಿದು ಕಾಯುತ್ತಿದ್ದರು. ಆದರೆ ಆ ಒಂದು ಆಕ್ಸಿಡೆಂಟ್ ನಟಿಯ ವೃತ್ತಿಜೀವನವನ್ನು ಹಾಳುಮಾಡಿತು. ಸಿನಿಮಾವನ್ನು ಬಿಟ್ಟು ಬಿಡುವಂತೆ ಮಾಡಿತು.

80ರ ದಶಕದ ಆ ಜನಪ್ರಿಯ ನಟಿ ತಲ್ಲೂರಿ ರಾಮೇಶ್ವರಿ. ಕಪ್ಪು ಮೈಬಣ್ಣ ಹೊಂದಿದ್ದರೂ ರಾಮೇಶ್ವರಿ ತಮ್ಮ ಅದ್ಭುತ ನಟನೆಯಿಂದ ನಟನಾ ಲೋಕದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು. ಆದರೆ ನಟಿ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಸಿನಿಮಾರಂಗದಿಂದ ದೂರವಾಗಬೇಕಾಯಿತು.
ಸಿನಿಮಾಗಳಿಗೆ ಅನೇಕ ಚಲನಚಿತ್ರ ನಿರ್ಮಾಪಕರ ಮೊದಲ ಆಯ್ಕೆ ಆಕೆಯೇ ಆಗಿದ್ದರೂ ಅವರಿಗೆ ನಟಿಸಲು ಸಾಧ್ಯವಾಗಲ್ಲಿಲ್ಲ.

Tap to resize

ರಾಮೇಶ್ವರಿ 1975ರಲ್ಲಿ FTIIನಿಂದ ಪದವಿ ಪಡೆದರು. 1977ರಲ್ಲಿ ರಾಜಶ್ರೀ ಅವರ 'ದುಲ್ಹನ್ ವಹಿ ಜೋ ಪಿಯಾ ಮಾನ್ ಭಯೆ' ಮೂಲಕ ಸಿನಿಮಾದಲ್ಲಿ ದೊಡ್ಡ ಬ್ರೇಕ್ ಪಡೆದರು. ಚಿತ್ರವು ಸೂಪರ್‌ಹಿಟ್ ಆಗುವುದರ ಜೊತೆಗೆ ರಾಮೇಶ್ವರಿ ಟಾಪ್ ಹೀರೋಯಿನ್ ಅನಿಸಿಕೊಂಡರು.  

ನಾಸಿರುದ್ದೀನ್ ಶಾ ಜೊತೆಗಿನ 'ಸುನಯನ', ಮಿಥುನ್ ಜೊತೆಗಿನ 'ಮೇರಾ ರಕ್ಷಕ', ಮತ್ತು ಜೀತೇಂದ್ರ ಜೊತೆಗಿನ 'ಶಾರದಾ' ಮತ್ತು 'ಆಶಾ' ಅವರ ಕೆಲವು ಗಮನಾರ್ಹ ಚಿತ್ರಗಳು.

ಆದರೆ ಸಿನಿಮಾರಂಗದಲ್ಲಿ ಸಕ್ಸಸ್‌ನ ತುತ್ತ ತುದಿಯಲ್ಲಿರುವಾಗಲೇ, ರಾಮೇಶ್ವರಿಯ ಜೀವನವು ಕೆಟ್ಟ ತಿರುವು ಪಡೆಯಿತು. ಅಪಘಾತದಲ್ಲಿ ಗಾಯಗೊಂಡ ನಟಿ ಶಾಶ್ವತವಾಗಿ ಸಿನಿಮಾಗೆ ವಿದಾಯ ಹೇಳಬೇಕಾಯಿತು. ಕುದುರೆಯಿಂದ ಬಿದ್ದು ಒಂದು ಕಣ್ಣಿಗೆ ತೀವ್ರ ಪೆಟ್ಟಾಗಿ ನಟಿ ಆಸ್ಪತ್ರೆ ಸೇರಬೇಕಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ನ್ಯೂಯಾರ್ಕ್‌ಗೂ ಕಳುಹಿಸಿ ಕೊಡಲಾಯಿತು. 

ಹೀಗೆ ಆಸ್ಪತ್ರೆ, ಸರ್ಜರಿ ಎಂದು ವರ್ಷಗಟ್ಟಲೆ ನಟಿ ಅನೇಕ ಚಲನಚಿತ್ರ ಅವಕಾಶಗಳನ್ನು ಕಳೆದುಕೊಂಡರು. ಕೊನೆಗೆ ಸಿನಿಮಾರಂಗಕ್ಕೆ ವಿದಾಯ ಹೇಳಿದರು.ವೃತ್ತಿಜೀವನದಲ್ಲಿ ಅಂತಹ ಏರಿಳಿತಗಳನ್ನು ಕಂಡ ನಂತರ, ರಾಮೇಶ್ವರಿ ಪ್ರಸಿದ್ಧ ಪಂಜಾಬಿ ನಟ-ನಿರ್ಮಾಪಕ ದೀಪಕ್ ಸೇಠ್ ಅವರನ್ನು ವಿವಾಹವಾದರು ಆದರೆ ಪಂಜಾಬಿ ಉದ್ಯಮದಲ್ಲಿ ಎಂದಿಗೂ ಕೆಲಸ ಮಾಡಲಿಲ್ಲ. 

Talluri rameshwari

ಕೆಲವು ವರದಿಗಳ ಪ್ರಕಾರ, ರಾಮೇಶ್ವರಿಗೆ ಪಂಜಾಬಿ ಚಿತ್ರಕ್ಕೆ ಸೇರಲು ಅವಕಾಶ ಸಿಕ್ಕಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿದರು. ಇದೀಗ ಈ ನಟಿ ಚಿತ್ರರಂಗದಿಂದ ದೂರವಾಗಿ ಉದ್ಯಮಿಯಾಗಿದ್ದಾರೆ. ನಿಮ್ಲಿ ನ್ಯಾಚುರಲ್ಸ್ ಹೆಸರಿನ ಬ್ಯೂಟಿ ಪ್ರಾಡಕ್ಟ್‌ನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಕಂಪನಿಯು ನೈಸರ್ಗಿಕ ತ್ವಚೆ ಮತ್ತು ಅರೋಮಾಥೆರಪಿ ಉತ್ಪನ್ನಗಳನ್ನು ತಯಾರಿಸುತ್ತದೆ. ಇತ್ತೀಚೆಗೆ, ಅವರು ದೂರದರ್ಶನ ಸರಣಿಗಳಲ್ಲಿ ಸಹ ಕೆಲಸ ಮಾಡುತ್ತಿದ್ದಾರೆ.

Latest Videos

click me!