ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಂಬಂಧ: ಸತ್ಯ ಕೊನೆಗೂ ಬಹಿರಂಗ

Published : Aug 03, 2022, 06:12 PM IST

'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಸಂಬಂಧ ಆಗಾಗ್ಗೆ ಸುದ್ದಿಯಲ್ಲಿರುತ್ತೆ. ಇತ್ತೀಚೆಗೆ, ವೀಡಿಯೊವೊಂದು ವೈರಲ್ ಆದ ನಂತರ ಇಬ್ಬರೂ ಮತ್ತೆ ಸುದ್ದಿಯಲ್ಲಿದ್ದಾರೆ. ಈ ವೀಡಿಯೊ ಕಾಣಿಸಿಕೊಂಡಾಗಿನಿಂದ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಜನರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಇವರಿಬ್ಬರ ನಡುವಿನ ಸಂಬಂಧದ ಸತ್ಯ ಏನು? ಇಲ್ಲಿದೆ ಮಾಹಿತಿ.

PREV
16
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ  ಸಂಬಂಧ: ಸತ್ಯ ಕೊನೆಗೂ ಬಹಿರಂಗ

ಸೌತ್‌ನ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರ ಹೆಸರು ನಟಿ ರಶ್ಮಿಕಾ ಮಂದಣ್ಣ ಜೊತೆ ಬಹಳ ಸಮಯದಿಂದ ಲಿಂಕ್ ಆಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಇಬ್ಬರೂ ಎರಡು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಆದರೆ, ಈಗ ಇಬ್ಬರ ನಡುವೆ ಸ್ನೇಹ ಮಾತ್ರ ಉಳಿದಿದೆ.

26

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 2 ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ, ಈಗ ಅಂಥದ್ದು ಇವರಿಬ್ಬರ ನಡುವೆ ಇಲ್ವಂತೆ.  ವರದಿಗಳ ಪ್ರಕಾರ, 2017 ರಲ್ಲಿ ರಶ್ಮಿಕಾ ಅವರ ನಿಶ್ಚಿತಾರ್ಥದ ಬ್ರೇಕಪ್ ನಂತರ, ಇಬ್ಬರೂ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದರು, ಆದರೆ ಅವರ ಸಂಬಂಧವು ಎರಡು ವರ್ಷಗಳ ಹಿಂದೆಯೇ ಕೊನೆಗೊಂಡಿತು.

36

ವಾಸ್ತವವಾಗಿ, ಇತ್ತೀಚೆಗೆ ವಿಜಯ್ ರಶ್ಮಿಕಾ ಅವರ ಮುಂಬರುವ ಚಿತ್ರ 'ಸೀತಾ ರಾಮಂ' ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿ ವಿಜಯ್ ವೇದಿಕೆಯ ಮೇಲೆ, 'ರಶ್ಮಿಕಾ, ನೀವು ಎಂದಿನಂತೆ ತುಂಬಾ ಸುಂದರವಾಗಿದ್ದೀರಿ. ಆದರೆ ನಾನು ನಿಮ್ಮ ಹೆಸರನ್ನು ತೆಗೆದುಕೊಂಡ ತಕ್ಷಣ, ಸುತ್ತಮುತ್ತಲಿನ ಜನರು ಏಕೆ ನಗಲು ಪ್ರಾರಂಭಿಸಿದರು ಎಂದು ನನಗೆ ತಿಳಿದಿಲ್ಲ' ಎಂದು ನಟ ಹೇಳಿದ್ದರು. ವಿಜಯ್ ಹೋಗಳಿದಾಗ ರಶ್ಮಿಕಾ ಕೂಡ ನಾಚತೊಡಗಿದರು. ಈ ವಿಡಿಯೋ ವೈರಲ್ ಆದ ನಂತರ ಇಬ್ಬರ ಸಂಬಂಧ ಚರ್ಚೆಯಾಗುತ್ತಿದೆ.

46

ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದ ನಂತರ ರಶ್ಮಿಕಾ ಮತ್ತು ವಿಜಯ್ 2017 ರಲ್ಲಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅದೇ ಸಮಯದಲ್ಲಿ ಇಬ್ಬರೂ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಸಮಯದಲ್ಲಿ ಇಬ್ಬರಿಗೂ ಪರಸ್ಪರ ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. 

56
geetha govindam

ಆದರೆ, ಇದಾದ ನಂತರ ರಶ್ಮಿಕಾ ಮತ್ತು ವಿಜಯ್ ಬೇರೆಯಾದರು. ಈಗ ಇಬ್ಬರ ಬ್ರೇಕಪ್ ಎರಡು ವರ್ಷಗಳ ಹಿಂದೆ ನಡೆದಿದೆ ಎನ್ನಲಾಗುತ್ತಿದ್ದು, ಅದಕ್ಕೆ ಕಾರಣ ಯಾರಿಗೂ ತಿಳಿದಿಲ್ಲ ಮತ್ತು  ಈಗ ಒಳ್ಳೆಯ ಸ್ನೇಹಿತರು. 

66

ವಿಜಯ್ ಈ ದಿನಗಳಲ್ಲಿ ತಮ್ಮ ಪ್ಯಾನ್-ಇಂಡಿಯಾ ಚಲನಚಿತ್ರ 'ಲೈಗರ್' ಪ್ರಚಾರದಲ್ಲಿ ನಿರತರಾಗಿದ್ದಾರೆ. ರಶ್ಮಿಕಾ ತಮ್ಮ ಬಾಲಿವುಡ್ ಚೊಚ್ಚಲ ಚಿತ್ರ ಮಿಷನ್ ಮಜ್ನು ಡಬ್ಬಿಂಗ್ ನಲ್ಲಿ ನಿರತರಾಗಿದ್ದಾರೆ.

Read more Photos on
click me!

Recommended Stories