ಬಾಲಿವುಡ್ ಸ್ಟಾರ್ ನಿರ್ದೇಶಕರ ಆಫೀಸ್‌ನಲ್ಲಿ ನಾಗಚೈತನ್ಯ; ಕುತೂಹಲ ಮೂಡಿಸಿದ ಭೇಟಿ

First Published | Aug 3, 2022, 1:48 PM IST


ಬಾಲಿವುಡ್ ಸ್ಟಾರ್ ನಿರ್ದೇಶಕರ ಆಫೀಸ್ ನಲ್ಲಿ ಟಾಲಿವುಡ್ ಸ್ಟಾರ್ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ.ಮೊದಲ ಹಿಂದಿ ಸಿನಿಮಾ ಮಾಡುತ್ತಿದ್ದಂತೆ ನಾಗಚೈತನ್ಯ ಬಾಲಿವುಡ್ ಖ್ಯಾತ ನಿರ್ದೇಶಕರ ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ. 

ಬಾಲಿವುಡ್ ಸ್ಟಾರ್ ನಿರ್ದೇಶಕರ ಆಫೀಸ್ ನಲ್ಲಿ ಟಾಲಿವುಡ್ ಸ್ಟಾರ್ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ.ಮೊದಲ ಹಿಂದಿ ಸಿನಿಮಾ ಮಾಡುತ್ತಿದ್ದಂತೆ ನಾಗಚೈತನ್ಯ ಬಾಲಿವುಡ್ ಖ್ಯಾತ ನಿರ್ದೇಶಕರ ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ. 

ನಾಗಚೈತನ್ಯ ಸದ್ಯ ಹಿಂದಿಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.ಚೈ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. 

Tap to resize

ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ರಮೋಷನ್  ವೇಳೆ ನಾಗಚೈತನ್ಯ ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಭೇಟಿಯಾಗಿದ್ದಾರೆ. ಬನ್ಸಾಲಿ ಆಫೀಸ್ ನಲ್ಲಿ ನಾಗ ಚೈತನ್ಯ ಕಾಣಿಸಿಕೊಂಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಬನ್ಸಾಲಿ ಅವರನ್ನು ದಿಢೀರ್ ಭೇಟಿಯಾಗಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. 

ಅಂದಹಾಗೆ ಬಾಲಿವುಡ್ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಸಿನಿಮಾ ಮಾಡಲು ಸ್ಟಾರ್ ಕಲಾವಿದರು ಎದುರು ನೋಡುತ್ತಿರುತ್ತಾರೆ. ಬಾಲಿವುಡ್ ಸ್ಟಾರ್ ಗಳ ಜೊತೆ ಸಿನಿಮಾ ಮಾಡಿರುವ ಬನ್ಸಾಲಿ ಸೌತ್ ಸ್ಟಾರ್ ಗಳ ಜೊತೆ ಇನ್ನು ಸಿನಿಮಾ ಮಾಡಿಲ್ಲ. ಇದೀಗ ನಾಗ ಚೈತನ್ಯ ಭೇಟಿಯಾಗಿರುವುದು ಕುತೂಹಲ ಹೆಚ್ಚಿಸಿದೆ. 

ಬನ್ಸಾಲಿ ಮುಂದಿನ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಾಗಚೈತನ್ಯ ನಟಿಸುತ್ತಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ನಾಗಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಪರಾಜಿಗಳ ಕಡೆ ಕೈ ಬೀಸಿ ಅಲ್ಲಿಂದ ಹೊರಟರು.ನಾಗ್ ಇನ್ಮುಂದೆ ಬಾಲಿವುಡ್ ಸಿನಿಮಾಗಲ್ಲಿಯೂ ನಟಿಸುವ ಸಾದ್ಯತೆ ಇದೆ. 
 

ನಾಗಚೈತನ್ಯ ತೆಲುಗಿನಲ್ಲಿ ಕೊನೆಯದಾಗಿ ಥ್ಯಾಂಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ. ಇನ್ನು ಲವ್ ಸ್ಟೋರಿ ಸಿನಿಮಾ ಬಳಿಕ ನಾಗ್ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಲಾಲ್ ಸಿಂಗ್ ಚಡ್ಡಾ ಮೂಲಕ ಗೆಲುವಿನ  ನಗೆ ಬೀರುವ ಜೊತೆಗೆ ಬಾಲಿವುಡ್ ನಲ್ಲಿ ಹೆಚ್ಚಿನ ಅವಕಾಶ ಗಿಟ್ಟಿಸಿಕೊಳ್ತಾರಾ ಎಂದು ಕಾದುನೋಡಬೇಕು.   
 

Latest Videos

click me!