ವಿಕ್ಕಿ ಕೌಶಲ್ ಬೆನ್ನ ಮೇಲೆ ಗಾಯ: ಕತ್ರೀನಾಗೆ ದುಃಖವೆಂದ ನೆಟ್ಟಿಗರು!

Suvarna News   | Asianet News
Published : Oct 20, 2021, 07:45 PM IST

ಬಾಲಿವುಡ್ (Bollywood) ನಟ ವಿಕ್ಕಿ ಕೌಶಲ್ (Vicky Kaushal) ತಮ್ಮ ಲೇಟೆಸ್ಟ್‌ ಸಿನಿಮಾ ಸರ್ದಾರ್ ಉಧಮ್‌ನ ( Sardar Udham) ಫೊಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ (Instagram)ನಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ವಿಕಿಯ ಬೆನ್ನಿನ ಮೇಲೆ ಗಾಯಗಳನ್ನು ಕಾಣಬಹುದು. ವಿಕಿಯ ಈ ಫೋಟೋ ಸಕ್ಕತ್‌ ವೈರಲ್‌ (Viral) ಆಗಿದ್ದು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರು ಅದರ ಬಗ್ಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು ಮತ್ತು ಅದನ್ನು ಕತ್ರಿನಾ ಕೈಫ್‌ಗೆ ರಿಲೇಟ್‌ ಮಾಡಿದ್ದಾರೆ. ಪೂರ್ತಿ ವಿವರಕ್ಕಾಗಿ ಮುಂದೆ ಓದಿ .

PREV
16
ವಿಕ್ಕಿ ಕೌಶಲ್ ಬೆನ್ನ ಮೇಲೆ ಗಾಯ: ಕತ್ರೀನಾಗೆ ದುಃಖವೆಂದ ನೆಟ್ಟಿಗರು!

ವಿಕ್ಕಿ ಕೌಶಲ್ ತನ್ನ ಇನ್‌ಸ್ಟಾಗ್ರಾಮ್ ಫೀಡ್‌ನಲ್ಲಿ ತನ್ನ ಕೃತಕ ಗಾಯಗಳು ಮತ್ತು ಕಟ್‌ಗಳ ಫೋಟೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ವಿಕಿ, ಮೇಕಪ್ ಕಲಾವಿದ ಪೀಟರ್ ಗೋರ್ಶೆನಿನ್ ಅವರರಿಗೆ ಕ್ರೆಡಿಟ್‌ (Credit) ನೀಡಿದ್ದಾರೆ .

26

' Cuts that didn't make the cut ' ಎಂದು ಫೋಟೋಗೆ ಕ್ಯಾಪ್ಷನ್‌ ಬರೆದು ಕೊಂಡಿದ್ದಾರೆ  ಮತ್ತು ವಿಕ್ಕಿ ಫೋಟೋಗೆ   #SardarUdham ಹ್ಯಾಶ್‌ ಟ್ಯಾಗ್ ಸೇರಿಸಿದ್ದಾರೆ.

 

36

ವಿಕ್ಕಿ ಕೌಶಲ್‌  ವೃತ್ತಿ ಜೀವನದ (Career) ಯಶಸ್ಸಿನ ಜೊತೆಗೆ, ಅವರ ವೈಯಕ್ತಿಕ ಜೀವನವೂ ಗಮನ ಸೆಳೆಯುತ್ತಿದೆ. ಅವರ ರೂಮರ್ಡ್‌ ಗರ್ಲ್‌ ಫ್ರೆಂಡ್‌ ಕತ್ರಿನಾ ಕೈಫ್ ಹಾಗೂ ಅನೇಕ ಬಾಲಿವುಡ್ (Bollywood) ಸೆಲೆಬ್ರಿಟಿಗಳ ಉದಮ್ ಸಿಂಗ್ ನ ವಿಶೇಷ ಪ್ರದರ್ಶನಕ್ಕೆ ಹಾಜರಾಗಿದ್ದರು.
 

 

46

ವಿಕ್ಕಿ ಕೌಶಲ್‌  ಅವರ ಗಾಯಗಳ ಫೋಟೋ ನೋಡಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಶಾಕ್‌  ಆಗಿದ್ದಾರೆ. ಅವರ ಬೆನ್ನಿನ ಮೇಲಿರುವ ಗಾಯಗಳು ನಿಜವೇ ಎಂದು ತಿಳಿಯಲು ಕೆಲವು ಫ್ಯಾನ್ಸ್‌(Fans) ಮತ್ತು ಫಾಲೋವರ್ಸ್‌ (Followers) ಕೂತೂಹಲಗೊಂಡಿದ್ದಾರೆ.

56
Sardar Udham

ವಿಕ್ಕಿಯ ಫೋಟೋ ತುಂಬಾ ವೈರಲ್‌ ಆಗಿದ್ದು, ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ. ಕೆಲವೇ ಸಮಯದಲ್ಲಿ ಸರ್ಧಾರ್‌ ಉಧಮ್‌ ಸಿನಿಮಾದ ಈ ಫೋಟೋ ಇಂಟರ್‌ನೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದೆ ಹಾಗೂ ಕೆಲವರು ತಮಾಷೆಯಾಗಿ ಕಾಮೆಂಟ್‌ ಸಹ ಮಾಡಿದ್ದಾರೆ. 

66

ವಿಕ್ಕಿಯ ಗಾಯಗಳನ್ನು ನೋಡುವಾಗ ಕತ್ರಿನಾ ಕೈಫ್ (Katina Kaif) ಹೇಗೆ ಅನಿಸುತ್ತದೆ  ಎಂಬ ಬಗ್ಗೆ ಕೆಲವರು ತಮ್ಮ ಕಾಮೆಂಟ್‌ ಮೂಲಕ ಕಾಳಜಿ ತೊರಿಸಿದ್ದಾರೆ. ವಿಕ್ಕಿ ಕೌಶಲ್‌ ಫೋಟೋ ನೋಡಿ 'ಕತ್ರಿನಾಗೆ  ದುಃಖವಾಗುತ್ತದೆ ' ಎಂದು ಒಬ್ಬ ಯೂಸರ್‌ ಕಾಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories