Photos: ಶಾರುಖ್ ಖಾನ್ ಐಷಾರಾಮಿ ವ್ಯಾನಿಟಿ ವ್ಯಾನ್ ಇದು!

Published : Oct 19, 2021, 04:41 PM IST

ಕೆಲವು ದಿನಗಳ ಹಿಂದೆ ಡ್ರಗ್‌ ಕೇಸ್‌ನಲ್ಲಿ (Drug Case) ಆರೆಸ್ಟ್‌ ಆಗಿರುವ  ಮಗ ಆರ್ಯನ್‌ ಖಾನ್‌ (Aryan Khan) ಕಾರಣದಿಂದ ಪ್ರಸ್ತುತ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ (Shahrukh Khan) ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಈ ನಡುವೆ ಅವರ ಲಕ್ಷುರಿಯಸ್‌ (luxurious) ಹಾಗೂ ದುಬಾರಿ (Costly) ವ್ಯಾನಿಟಿ ವ್ಯಾನ್ (vanity van) ಫೊಟೋಗಳು ವೈರಲ್‌ ಆಗಿವೆ. ಹೇಗಿದೆ ನೋಡಿ ಶಾರುಖ್‌ ಅವರ 4 ಕೋಟಿ ಬೆಲೆ ಬಾಳುವ ವ್ಯಾನಿಟಿ ವ್ಯಾನ್‌.  

PREV
18
Photos: ಶಾರುಖ್ ಖಾನ್ ಐಷಾರಾಮಿ ವ್ಯಾನಿಟಿ ವ್ಯಾನ್ ಇದು!

ಶಾರುಖ್ ಖಾನ್ ತುಂಬಾ ಐಷಾರಾಮಿ ಜೀವನಶೈಲಿಯನ್ನು ಹೊಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರ ಮನೆ ಮನ್ನತ್  ಜೊತೆ ಹಲವು ದುಬಾರಿ ಕಾರುಗಳು ಮತ್ತು ಸಾಕಷ್ಟು ಆಸ್ತಿಗಳನ್ನು ಹೊಂದಿದ್ದಾರೆ ಶಾರುಖ್‌. ಇವರು ಬಾಲಿವುಡ್‌ನ ಅತ್ಯಂತ ಶ್ರೀಮಂತರಲ್ಲಿ ಒಬ್ಬರು.

28

ಶಾರುಖ್‌ ಅವರ ಲೈಫ್‌ಸ್ಟೈಲ್‌ ರಾಜನಂತೆ ಇದೆ. ಇವರುಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕನ್ವರ್ಟಿಬಲ್, ಬುಗಾಟಿ ವೇರಾನ್, ಆಡಿ ಎ 6 ಮತ್ತು ಕ್ರೆಟಾ ಸೇರಿದಂತೆ  ಹಲವು ದುಬಾರಿ ಕಾರುಗಳ ಕಲೆಕ್ಷನ್‌ ಹೊಂದಿದ್ದಾರೆ. ನಟ ಐಷಾರಾಮಿ ವ್ಯಾನಿಟಿ ವ್ಯಾನ್ ಅನ್ನು ಹೊಂದಿದ್ದು ಅದರ ಬೆಲೆ  4 ಕೋಟಿ ರೂ ಎನ್ನಲಾಗುತ್ತದೆ. 

38

ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್ ಖಾನ್‌ ಅವರ ಲಕ್ಷುರಿಯಸ್‌  ವ್ಯಾನಿಟಿ ವ್ಯಾನ್‌ ಅವರ ದುಬಾರಿ ಬೆಲೆಯ ಆಸ್ತಿಗಳಲ್ಲಿ ಒಂದಾಗಿದೆ. ಶಾರುಖ್‌ ಅವರ ವ್ಯಾನಿಟಿ ವ್ಯಾನ್ ಒಂದು ಯೂನಿಕ್‌ ಇಂಟಿರಿಯರ್‌ ಮತ್ತು ಡಿಸೈನ್‌ ಮತ್ತು ದುಬಾರಿ ಸಲಕರಣೆಗಳನ್ನು ಹೊಂದಿದೆ.

48

ಶಾರುಖ್ ಖಾನ್‌ಗಾಗಿ ಭಾರತೀಯ ಕಾರ್ ಡಿಸೈನರ್ ಮತ್ತು ಡಿಸಿ ವಿನ್ಯಾಸದ ಸ್ಥಾಪಕರು ದಿಲೀಪ್ ಛಾಬ್ರಿಯಾ ಈ ವ್ಯಾನ್ ಅನ್ನು ಕಸ್ಟಮೈಸ್ ಮಾಡಿದ್ದಾರೆ.  ಎಸ್‌ಆರ್‌ಕೆ ವ್ಯಾನಿಟಿ ವ್ಯಾನ್‌ನ ಪ್ರತಿ ನಿಮಿಷದ ವಿವರ ಮತ್ತು ಅಲಂಕಾರವನ್ನು ವೈಯಕ್ತಿಕವಾಗಿ ನೋಡಿದ್ದಾರೆ ಎಂದು ವರದಿಗಳು ಹೇಳುತ್ತವೆ.   

58

ವ್ಯಾನಿಟಿ ವ್ಯಾನ್ ವಿಶಿಷ್ಟವಾದ ವಿನ್ಯಾಸಗಳು ಮತ್ತು ದುಬಾರಿ ಸಲಕರಣೆಗಳ ಜೊತೆ ಸುಂದರವಾದ ಒಳಾಂಗಣವನ್ನು ಹೊಂದಿದೆ.  ವ್ಯಾನಿನ ಫ್ಲೋರಿಗ್‌ ಅನ್ನು  ಗಾಜಿನಿಂದ ಮಾಡಲಾಗಿದೆ ಮತ್ತು ಬ್ಯಾಕ್‌ಲೈಟ್ ಕೂಡ ಇದೆ. ಛಾವಣಿಗೆ ಮರದ ಫಲಕವನ್ನು ಸೇರಿಸಲಾಗಿದೆ, ಮತ್ತು ಈ ವ್ಯಾನಿಟಿ ವ್ಯಾನ್‌ನ  ಪೂರ್ತಿ ಏರಿಯಾವನ್ನು  ಐಪ್ಯಾಡ್ ಮೂಲಕ ನಿಯಂತ್ರಿಸಬಹುದು.

   

68

ವ್ಯಾನಿಟಿ ವ್ಯಾನ್ ಪ್ಯಾಂಟ್ರಿ, ವಾರ್ಡ್ ರೋಬ್ ಏರಿಯಾ, ಮೇಕಪ್ ಚೇರ್ ಮತ್ತು ಪ್ರತ್ಯೇಕ ಟಾಯ್ಲೆಟ್ ಕ್ಯುಬಿಕಲ್ ಅನ್ನು ಒಳಗೊಂಡಿದೆ. ಅಂತರ್ನಿರ್ಮಿತ ಶವರ್‌ನೊಂದಿಗೆ ಬಾತ್ರೂಮ್ ತುಂಬಾ ಸುಂದರವಾಗಿದೆ. ವ್ಯಾನ್ ವಿದ್ಯುತ್ ಕುರ್ಚಿಯನ್ನು ಸಹ  ಹೊಂದಿದ್ದು, ಅದು ಕೋಣೆಯ ಒಂದು ತುದಿಯಿಂದ ಇನ್ನೊಂದು ಕಡೆಗೆ ಕರೆದುಕೊಂಡು ಹೋಗುತ್ತದೆ.


 

78

ಶಾರುಖ್ ಖಾನ್ ಅವರು ಪ್ರಸ್ತುತ ಕಠಿಣ ಪರಿಸ್ಥಿತಿಯಲ್ಲಿದ್ದಾರೆ ಏಕೆಂದರೆ ಅವರ 23 ವರ್ಷದ ಮಗ ಆರ್ಯನ್ ಖಾನ್‌ನನ್ನು ಡ್ರಗ್‌ ಕೇಸ್‌ನಲ್ಲಿ ಬಂಧಿಸಿ ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗಿದೆ. ಸ್ಟಾರ್ ಕಿಡ್ ಪ್ರಸ್ತುತ ಜೈಲಿನಲ್ಲಿದ್ದಾನೆ 


 

88

ಮತ್ತು ತನ್ನ ಹೆತ್ತವರೊಂದಿಗೆ ಮಾತಾನಾಡಲು ಕೇವಲ  10 ನಿಮಿಷಗಳ ವೀಡಿಯೊ ಲಾಲ್‌ ಅವಕಾಶವನ್ನು ನೀಡಲಾಗಿತ್ತು. ಆದರೆ ಜೈಲಿನ ಕ್ಯಾಂಟೀನ್‌ನಲ್ಲಿ ವಸ್ತುಗಳನ್ನು ಖರೀದಿಸಲು ಆತ ಮನೆಯಿಂದ ಮನಿ ಆರ್ಡರ್‌ ಮೂಲಕ 4500 ರೂಪಾಯಿಗಳನ್ನು ಪಡೆದನು.

click me!

Recommended Stories