Vicky-Katrina Pre-Wedding Photo Shoot: ಬ್ರಿಟಿಷ್ ಪರಂಪರೆ ಬಿಂಬಿಸುವ ಉಡುಗೆಯಲ್ಲಿ ನಟಿ

Suvarna News   | Asianet News
Published : Dec 14, 2021, 05:56 PM IST

ಡಿಸೆಂಬರ್ 09 ರಂದು ನಡೆದ 2021 ರ ಅತಿದೊಡ್ಡ ವಿವಾಹವಾದ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರ ಮದುವೆಯ ಹ್ಯಾಂಗೊವರ್ ಸುಮಾರು ಒಂದು ವಾರದ ನಂತರವೂ ಮುಂದುವರಿಯುತ್ತಿದೆ. ಈ ದಂಪತಿ ತಮ್ಮ ಮದುವೆಯ ಚರ್ಚೆಯನ್ನೂ ಇನ್ನೂ ಜೀವಂತವಾಗಿಟ್ಟಿದ್ದಾರೆ. ಈಗ ಈ ಕಪಲ್‌ ಪ್ರೀ ವೆಡ್ಡಿಂಗ್ ‌(pre-wedding) ಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿವೆ ಆ ಫೋಟೋಗಳು.  Image: Vicky Kaushal, Katrina Kaif - Instagram

PREV
16
Vicky-Katrina Pre-Wedding Photo Shoot: ಬ್ರಿಟಿಷ್ ಪರಂಪರೆ ಬಿಂಬಿಸುವ ಉಡುಗೆಯಲ್ಲಿ ನಟಿ

ವಿಕ್ಕಿ ಮತ್ತು ಕತ್ರಿನಾ ಅವರು ತಮ್ಮ ವಿವಾಹದ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳುವುದನ್ನು ಮುಂದುವರಿಸಿದ್ದಾರೆ. ವಿಕ್ಕಿ ಮತ್ತು ಕತ್ರಿನಾ ಅವರು ತಮ್ಮ ಮದುವೆಯ ಪೂರ್ವ ಶೂಟ್‌ನ (Pre Wedding Photo Shoot) ಹಾಗೇ ಕಾಣುತ್ತಿರುವ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

26

ಫೋಟೋಗಳಲ್ಲಿ ಕತ್ರಿನಾ ಕೈಫ್ ಪಿಂಕ್‌ ಮತ್ತು ಬ್ರೌನ್‌ ಬಣ್ಣಗಳಲ್ಲಿ ಹೆವಿ ಫ್ಲವರ್ ಎಂಬ್ರಾಯ್ಡರಿ ಹೊಂದಿರುವ ಬ್ಲೌಸ್‌ ಜೊತೆ ಕೋಕೋ ಮಿಸ್ಟ್‌ ಬಣ್ಣದ ಸೀರೆಯನ್ನು ಧರಿಸಿದ್ದರು. ತನ್ನ ಗಂಡ ವಿಕ್ಕಿ ಕೌಶಲ್ ಜೊತೆಗಿನ ಈ ಫೋಟೋಶೂಟ್‌ನಲ್ಲಿ ಕತ್ರಿನಾ ಯಾವದೇ  ಕನಸಿನ ವಧುಗಿಂತ ಕಡಿಮೆ ಕಾಣುತ್ತಿಲ್ಲ.

 

36

ಮತ್ತೊಂದೆಡೆ, ವಿಕ್ಕಿ ಕೌಶಲ್ ಸಾಫ್ಟ್‌ ವೀಟ್‌ ಟೋನ್‌ನಲ್ಲಿ ಅಚ್ಕನ್ ಮತ್ತು ಚೂಡಿದಾರ್ ಪೈಜಾಮವನ್ನು ಧರಿಸಿದ್ದರು. ಅವನು ತನ್ನ ಲುಕ್‌ ಅನ್ನು ಮ್ಯಾಚ್‌ ಆಗುವ ಮೊಜ್ರಿಸ್‌ ಜೊತೆ ಕಂಪ್ಲೀಟ್‌ ಮಾಡಿದ್ದರು 

 

46

ಅವರ ಫೋಟೋಗಳು ಟ್ರೆಡಿಷನ್‌, ರೋಮ್ಯಾನ್ಸ್‌ ಮತ್ತು ವಿಂಟೇಜ್‌ನ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಫೋಟೋಗಳನ್ನು 14 ನೇ ಶತಮಾನದ ಕೋಟೆಯ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ, ಅವರ ಭವ್ಯ ವಿವಾಹ ಸಮಾರಂಭದ ಸ್ಥಳವಾಗಿತ್ತು.

56

ಕತ್ರಿನಾ ಕೈಫ್ ಅವರ ಸಾಂಪ್ರದಾಯಿಕ ಸೀರೆಯು ಕ್ಯಾಥೋಲಿಕ್ ಮದುವೆಯ ಸ್ಪರ್ಶವನ್ನು ಹೊಂದಿತ್ತು, ಏಕೆಂದರೆ ಅವರು ಅದರ ಮೇಲೆ ಎಟ್ ಫ್ಯಾಬ್ರಿಕ್‌ನ ವೇಲ್‌ ಧರಿಸಿದ್ದರು.

 

66

ಒಂದು ಫೋಟೋದಲ್ಲಿ ನಟಿ ತನ್ನ ಕೈಯಲ್ಲಿ ಹಿಡಿದಿದ್ದ ಹೂವುಗಳ ಬೊಕ್ಕೆ ಕ್ಯಾಥೋಲಿಕ್ ವೆಡ್ಡಿಂಗ್‌ನ ಪ್ಲೇವರ್‌ ಅನ್ನು ಪ್ರತಿಬಿಂಬಿಸುತ್ತದೆ. ವಿಕ್ಕಿ   ಕತ್ರಿನಾ ಪ್ರೀ ವೆಡ್ಡಿಂಗ್‌ ಶೂಟ್‌ನ ಕ್ಯೂಟ್‌ ಫೋಟೋಗಳು ವೈರಲ್‌ ಆಗಿವೆ.

 

Read more Photos on
click me!

Recommended Stories