ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಇಲಿಯಾನಾ ಡಿ ಕ್ರೂಸ್ ಇದೀಗ ಹೊಸ ಸ್ಟೈಲ್ ಫಾಲೋ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅತಿ ಹೆಚ್ಚು ಪ್ರವಾಸದ ಫೋಟೋಗಳನ್ನು ಹಂಚಿಕೊಳ್ಳುವ ನಟಿ, ಇದೀಗ ಈ ರೀತಿ ಬಟ್ಟೆಗಳನ್ನು ಹೆಚ್ಚು ಧರಿಸುತ್ತಿದ್ದಾರೆ.
ಹೌದು! ಇತ್ತೀಚಿಗೆ ಮಾಲ್ಡೀವ್ಸ್ (Maldives) ಪ್ರವಾಸ ಮಾಡಿದ ಇಲಿಯಾನಾ ಧರಿಸಿದ್ದ ಎಲ್ಲಾ ಬಿಕಿನಿ ಫೋಟೋಗಳನ್ನು ಹಂಚಿ ಕೊಂಡಿದ್ದಾರೆ.
'ಕೂಲ್ ಡ್ರಿಂಕ್ ಕುಡಿಯುತ್ತಾ ಬಿಸಿಲಿನಲ್ಲಿ ಬೇಯುತ್ತಾ ಬ್ಲೂ ಸಮುದ್ರ ನೋಡಿಕೊಂಡು ಕುಳಿತುಕೊಳ್ಳುವದಕ್ಕಿಂತ ಬೇರೆ ಮಜಾ ಇದ್ಯಾ?' ಎಂದು ಬರೆದುಕೊಂಡಿದ್ದರು.
ಪದೇ ಪದೇ ಮಾಲ್ಡೀವ್ಸ್ ಪ್ರವಾಸ ಮಾಡುತ್ತಿರುವುದಕ್ಕೆ ಹಾಗೂ ಎಲ್ಲಾ ಫೋಟೋದಲ್ಲೂ ಮಾಲ್ಡೀವ್ಸ್ ಸಂಬಂಧ ಪಟ್ಟವರನ್ನು ಟ್ಯಾಗ್ ಮಾಡುತ್ತಿರುವುದಕ್ಕೆ ಇಲಿಯಾ ಸಿನಿಮಾ ಬಿಟ್ಟು, ಪ್ರಚಾರ ಶುರು ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು.
ಇಲಿಯಾನಾ ನೋಡಲು ಸ್ವಲ್ಪ ಕಪ್ಪು. ಹಾಗಂತ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಅರ್ಹಳಲ್ಲ ಎಂದರ್ಥ ಅಲ್ಲ. ನೆಟ್ಟಿಗರು ಸುಮ್ಮನೆ ಇರಬೇಕಲ್ವಾ? ಆಕೆಯ ಬಣ್ಣವನ್ನು ಕೂಡ ಟ್ರೋಲ್ ಮಾಡುತ್ತಾರೆ.
'ಯಾಕಮ್ಮ ಪದೇ ಪದೇ ಬಿಕಿನಿ ಫೋಟೋ ಅಪ್ಲೋಡ್ ಮಾಡ್ತಿದ್ಯಾ ಇಲ್ಲಿ ಯಾರಿಗೆ ಪಬ್ಲಿಸಿಟಿ ಕೊಡುತ್ತಿರುವೆ? ಸಿನಿಮಾ ಮಾಡಿಕೊಂಡು ಸುಮ್ಮನಿದ್ದರೆ ಭಾರತದಲ್ಲಿ ಇರಬೋದು ನೋಡು,' ಎಂದು ಕಾಮೆಂಟ್‌ನಲ್ಲಿ ಕಾಲೆಳೆದಿದ್ದಾರೆ.