ಪತಿಯಿಂದ ಡಿವೋರ್ಸ್ ಪಡೆದ ಕಾರಣದಿಂದ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದ ದಕ್ಷಿಣದ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಈಗ ತೀವ್ರ ವೈರಲ್ ಸೋಂಕಿನ ಕಾರಣದಿಂದ ಮತ್ತೆ ಹೆಡ್‌ಲೈನ್ ನ್ಯೂಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ . ಕೆಲವು ಸುದ್ದಿ ವರದಿಗಳ ಪ್ರಕಾರ ಸಮಂತಾ ಡಿಸೆಂಬರ್ 13 ರಂದು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಟಿ ಕೋವಿಡ್ 19 ಪರೀಕ್ಷೆಗೂ ಒಳಗಾದರು. ಇದು ಅವರ ಆರೋಗ್ಯದ ಬಗ್ಗೆ ಗಾಸಿಪ್‌ಗೆ ಕಾರಣವಾಯಿತು ಸಮಂತಾರ ಸ್ಥಿತಿ ಗಂಭೀರವಾಗಿದೆ ಮತ್ತು ಆಸ್ಪತ್ರೆಯಲ್ಲಿದ್ದಾರೆ ಎಂದು ಕೆಲವು ವರದಿಗಳು ಹೇಳಿದವು. ಇದು ನಿಜನಾ? ಅವರ ಮ್ಯಾನೇಜರ್ ಈ ಬಗ್ಗೆ ಏನು ಹೇಳಿದ್ದಾರೆ ನೋಡಿ.
ಡಿಸೆಂಬರ್ 13ರಂದು ಸಮಂತಾ ರುತ್ ಪ್ರಭು ಅವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದರು. ಇದು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಗಾಸಿಪ್ ಹರಡಲು ಕಾರಣವಾಯಿತು. ಸಮಂತಾ ಅವರ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹಲವು ವರದಿಗಳು ಬಂದವು.
27
ಆದರೆ ನಂತರ, ಸಮಂತಾ ರುತ್ ಪ್ರಭು ಅವರ ಮ್ಯಾನೇಜರ್ ಮಹೇಂದ್ರ ಅವರು ನಟಿಯ ಆಸ್ಪತ್ರೆಯ ಬಗ್ಗೆ ವದಂತಿಗಳನ್ನು ಸುಳ್ಳು ಎಂದು ಹೇಳಿಕೆ ನೀಡಿದದು. ಯಾವುದೇ ಗಂಭೀರ ಸಮಸ್ಯೆ ಇಲ್ಲವೆಂದು ಗಾಸಿಪ್‌ಗಳನ್ನು ನಿರಾಕರಿಸಿದರು.
37
ಆಕೆಗೆ ಸ್ವಲ್ಪ ಕೆಮ್ಮು ಇತ್ತು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ನಟಿಗೆ ಸ್ವಲ್ಪ ಕೆಮ್ಮು ಇತ್ತು, ಅದಕ್ಕಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಮುನ್ನಚ್ಚರಿಕೆ ಕ್ರಮವಾಗಿ ಅವರು ಕೋವಿಡ್ ಪರೀಕ್ಷೆಯನ್ನು ಸಹ ಮಾಡಿಸಿಕೊಂಡರು ಎಂದು ಹೇಳಲಾಗಿದೆ.
47
'ನಟಿ ಸಮಂತಾ ರುತ್ ಪ್ರಭು ಆರೋಗ್ಯವಾಗಿದ್ದಾರೆ. ನಿನ್ನೆ ಸ್ವಲ್ಪ ಕೆಮ್ಮಿನಿಂದಾಗಿ ಎಐಜಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದ ನಂತರ ಅವರು ತಮ್ಮ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಯಾವುದೇ ವದಂತಿಗಳು ಅಥವಾ ಸಾಮಾಜಿಕ ಮಾಧ್ಯಮದ ಗಾಸಿಪ್‌ಗಳನ್ನು ನಂಬಬೇಡಿ' ಎಂದು ಸಮಂತಾ ಮ್ಯಾನೇಜರ್ ಹೇಳಿದ್ದಾರೆ.
57
ಇದಲ್ಲದೇ, ಅಲ್ಲು ಅರ್ಜುನ್ ಜೊತೆಗಿನ ಪುಷ್ಪಾ ಡ್ಯಾನ್ಸ್ ನಂಬರ್ ಊ ಅಂತಾವ ಕಾರಣಕ್ಕಾಗಿ ಸಮಂತಾ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಇದು ಸಮಂತಾ ಅವರ ಕೆರಿಯರ್‌ನ ಮೊದಲ ಐಟಂ ಸಾಂಗ್ ಆಗಿದೆ
67
ಡ್ಯಾನ್ಸ್ ನಂಬರ್ ಊ ಅಂತಾವ ತೊಂದರೆಗೆ ಸಿಲುಕಿದೆ. ಹಾಡಿನ ಸಾಹಿತ್ಯ ಮತ್ತು ವಿಡಿಯೋ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಪುರುಷರ ಸಂಘವೊಂದು ಪುಷ್ಪ ಸಿನಿಮಾದ ಈ ಹಾಡಿನ ವಿರುದ್ಧ ಪ್ರಕರಣ ದಾಖಲಿಸಿದೆ.
77
ವರದಿಗಳ ಪ್ರಕಾರ, ಪುರುಷರನ್ನು ಹೈಪರ್ ಸೆಕ್ಷುಯಲ್ ಆಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಪುರುಷರ ಸಂಘವು ಊ ಅಂತಾವಾ ಹಾಡಿನ ವಿರುದ್ಧ ಪ್ರಕರಣ ದಾಖಲಿಸಿದೆ. ಆಂಧ್ರಪ್ರದೇಶ ನ್ಯಾಯಾಲಯದಲ್ಲಿ ಪುರುಷರ ಸಂಘವು ತಮ್ಮ ದೂರಿನಲ್ಲಿ ಹಾಡನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ.