Vicky Kaushal Katrina Kaif Christmas: ಹೊಸ ಮನೆಯಲ್ಲಿ ಕ್ರಿಸ್ಮಸ್, ವಿಕ್ಕಿ-ಕತ್ರೀನಾ ಸ್ವೀಟ್ ಹಗ್‌

Published : Dec 26, 2021, 06:46 PM ISTUpdated : Dec 26, 2021, 06:49 PM IST

ಡಿಸೆಂಬರ್ 25 ರ ಶನಿವಾರದಂದು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಕುಟುಂಬದೊಂದಿಗೆ ಕ್ರಿಸ್‌ಮಸ್ (Christmas) ಅನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ವಿಕ್ಕಿ ಕೌಶಲ್ (Vicky kausal) ಮತ್ತು ಕತ್ರಿನಾ ಕೈಫ್ (Katrina Kaif) ಮುಂಬೈನ ಜುಹುದಲ್ಲಿರುವ ತಮ್ಮ ಹೊಸ ಮನೆಯಲ್ಲಿ ಹಬ್ಬವನ್ನು ಆಚರಿಸಿದರು. ವಿಕ್ಕಿ ಅವರು ಕತ್ರಿನಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಂಪತಿಗಳು ತಮ್ಮ ಕೆಲವು ಸ್ನೇಹಿತರನ್ನು ತಮ್ಮ ಹೊಸ ಮನೆಗೆ ಆಹ್ವಾನಿಸಿದರು. ವಿಕ್ಕಿ ಕತ್ರಿನಾರ ಮದುವೆಯ ನಂತರ ತಮ್ಮ ಮೊದಲ ಕ್ರಿಸ್ಮಸ್ ಸೆಲೆಬ್ರೆಷನ್‌ನ ಕೆಲವು Unseen ಫೋಟೋಗಳು ಇಲ್ಲಿವೆ.

PREV
18
Vicky Kaushal Katrina Kaif Christmas: ಹೊಸ ಮನೆಯಲ್ಲಿ ಕ್ರಿಸ್ಮಸ್, ವಿಕ್ಕಿ-ಕತ್ರೀನಾ ಸ್ವೀಟ್ ಹಗ್‌

ಮುಂಬೈನಲ್ಲಿರುವ ಅವರ ಹೊಸ ಮನೆಯಲ್ಲಿ ಪತ್ನಿ ಕತ್ರಿನಾ ಅವರೊಂದಿಗೆ ಮೊದಲ ಕ್ರಿಸ್‌ಮಸ್‌ ಆಚರಣೆಯ ಒಂದು ನೋಟವನ್ನು  ವಿಕ್ಕಿ Instagram ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ. ವಿಕ್ಕಿ ಕತ್ರಿನಾರನ್ನು ಹಗ್‌ ಮಾಡಿ ಪೋಸ್‌ ಮಾಡಿರುವ ಈ ಫೋಟೋವನ್ನು ಫ್ಯಾನ್ಸ್ ಸಖತ್‌ ಲೈಕ್‌ ಮಾಡಿದ್ದಾರೆ.

28

ಫೋಟೋದಲ್ಲಿ ಸುಂದರವಾದ ಕ್ರಿಸ್‌ಮಸ್‌ ಟ್ರೀ ಮುಂದೆ ಕತ್ರಿನಾರನ್ನು ಹಗ್‌ ಮಾಡಿದ್ದಾರೆ ವಿಕ್ಕಿ. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ ಕ್ಯೂಟ್‌ ಫೋಟೋಗೆ ವಿಕ್ಕಿ 'ನನ್ನ ಕ್ರಿಸ್‌ಮಸ್‌' ಎಂಧು ಕ್ಯಾಪ್ಷನ್‌ ನೀಡಿದ್ದಾರೆ. ಇವರು ಮದುವೆಯ ನಂತರ ಜೊತೆಯಾಗಿರುವ ಫೋಟೋವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

38

ಶನಿವಾರ, ಡಿಸೆಂಬರ್ 25 ರಂದು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ನಂತರ ತಮ್ಮ ಮೊದಲ ಕ್ರಿಸ್ಮಸ್ ಅನ್ನು ಒಟ್ಟಿಗೆ ಆಚರಿಸಿದರು. ಈ ಸಂದರ್ಭದಲ್ಲಿ ದಂಪತಿಗಳು ತಮ್ಮ ಕೆಲವು ಸ್ನೇಹಿತರನ್ನು ತಮ್ಮ ಹೊಸ ಮನೆಗೆ ಆಹ್ವಾನಿಸಿದರು.
 

48

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮುಂಬೈನಲ್ಲಿರುವ ತಮ್ಮ ಹೊಸ ನಿವಾಸದಲ್ಲಿ  ಆಚರಿಸಲು ತಮ್ಮ ಸ್ನೇಹಿತರನ್ನು ಸಹ ಆಹ್ವಾನಿಸಿದರು. ಅವರ ಆತ್ಮೀಯ ಆಚರಣೆಯ ಕೆಲವು ಫೋಟೋಗಳನ್ನು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

58

ದಂಪತಿಗಳು ತಮ್ಮ ಸಮುದ್ರಕ್ಕೆ ಎದುರಾಗಿರುವ ಅಪಾರ್ಟ್ಮೆಂಟ್‌ನಲ್ಲಿ ತಮ್ಮ ಫ್ರೆಂಡ್ಸ್ ಜೊತೆ ಪೋಸ್ ನೀಡುವುದನ್ನು ಕಾಣಬಹುದು. ದಂಪತಿಗಳು ತಮ್ಮ ಹೊಸ ಮನೆಯನ್ನು ತುಂಬಾ ಸುಂದರವಾಗಿ ಅಲಂಕರಿಸಿದ್ದರು. ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ.  

68

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ರಾಯಲ್ ವೆಡ್ಡಿಂಗ್ ನಂತರ ತಮ್ಮ ಪ್ರಾಜೆಕ್ಟ್‌ಗಳ ಕೆಲಸವನ್ನು ಪ್ರಾರಂಭಿಸಿದ್ದಾರೆ. ವಿಕ್ಕಿ ಕೌಶಲ್ ಚಿತ್ರದ ಚಿತ್ರೀಕರಣಕ್ಕಾಗಿ ಮುಂಬೈನಿಂದ ಹೊರ ಹೋಗಿದ್ದರು. ಆದರೆ ಮದುವೆಯ ನಂತರ ಅವರು ಮೊದಲ ಕ್ರಿಸ್ಮಸ್ ಆಚರಿಸಲು ಮುಂಬೈಗೆ ಮರಳಿದರು. 

78

ಅದೇ ಸಮಯದಲ್ಲಿ, ಕತ್ರಿನಾ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಸುಂದರವಾದ ಕ್ರಿಸ್ಮಸ್ ಟ್ರೀ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶುಭ ಹಾರೈಸಿದರು. ಕತ್ರಿನಾ ಕೈಫ್‌ ಸಹೋದರಿ ಇಸಾಬೆಲ್ಲೆ ಕೈಫ್ ಕೂಡ ಅವರೊಂದಿಗೆ ಕ್ರಿಸ್ಮಸ್ ಆಚರಿಸಲು ಆಗಮಿಸಿದ್ದರು.

88

ಡಿಸೆಂಬರ್ 25 ರಂದು ಕತ್ರಿನಾ ಕೈಫ್ ತನ್ನ ಮುಂದಿನ ಚಿತ್ರವನ್ನು ಘೋಷಿಸಿದರು. ಅವರು ವಿಜಯ್ ಸೇತುಪತಿ ಜೊತೆ ಮೆರಿ ಕ್ರಿಸ್‌ಮಸ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಹೊಸ ಆರಂಭಗಳು. ಮೆರ್ರಿ ಕ್ರಿಸ್‌ಮಸ್‌ಗಾಗಿ ನಿರ್ದೇಶಕ  ಶ್ರೀರಾಮರಾಘವನ್ ಅವರೊಂದಿಗೆ ಮತ್ತೆ ಸೆಟ್‌ಗೆ. ನಾನು ಯಾವಾಗಲೂ ಶ್ರೀರಾಮ್ ಸರ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ, ಥ್ರಿಲ್ಲರ್‌ಗಳನ್ನು ಪ್ರದರ್ಶಿಸುವ ನಿರೂಪಣೆಗೆ ಬಂದಾಗ ಅವರು ಮಾಸ್ಟರ್ ಆಗಿದ್ದಾರೆ ಮತ್ತು ಅವರ ನಿರ್ದೇಶನದಡಿಯಲ್ಲಿ ಕೆಲಸ ಮಾಡುವುದು ಗೌರವವಾಗಿದೆ.ವಿಜಯ್ ಸೇತುಪತಿ ಅವರ ನಿರ್ದೇಶನದಲ್ಲಿ ಮತ್ತು ರಮೇಶ್ ತೌರಾನಿ ನಿರ್ಮಿಸಲಿರುವ ಈ ಚಿತ್ರಕ್ಕಾಗಿ ಅವರೊಂದಿಗೆ ಕೆಲಸ ಮಾಡಲು ತುಂಬಾಉತ್ಸುಕನಾಗಿದ್ದೇನೆ' ಎಂದು ಕತ್ರಿನಾ ಕೈಫ್ ಬರೆದಿದ್ದಾರೆ.

 

Read more Photos on
click me!

Recommended Stories