Christmas 2021 : ಕಪೂರ್‌ ಫ್ಯಾಮಿಲಿ ಕ್ರಿಸ್ಮಸ್ ಗೆಟ್‌ ಟುಗೆದರ್‌ನಲ್ಲಿ ಮಕ್ಕಳ ಜೊತೆ ಸೈಫೀನಾ

First Published | Dec 26, 2021, 6:23 PM IST

ಬಾಲಿವುಡ್‌ನ ಕಪೂರ್‌ (Kapoor) ಫ್ಯಾಮಿಲಿ ಪಾರ್ಟಿ ಹಾಗೂ ಗೆಟ್‌ ಟುಗೆದರ್‌ಗಳಿಗೆ ಫೇಮಸ್‌. ಕಪೂರ್‌ ಕುಟುಂಬದಲ್ಲಿ ಈ ವರ್ಷದ ಕ್ರಿಸ್‌ಮಸ್‌ ಸೆಲೆಬ್ರೆಷನ್‌ ಕುನಾಲ್ ಶಾಹಿ ಕಪೂರ್ ( Kunal Shahi Kapoor) ಅವರ ಮನೆಯಲ್ಲಿ ನೆಡೆಯಿತು. ಕರೀನಾ ಕಪೂರ್ (Kareena Kapoor), ಸೈಫ್ ಅಲಿ ಖಾನ್ (Saif Ali Khan ), ಕರಿಷ್ಮಾ ಕಪೂರ್ (Karishma Kapoor) ಮತ್ತು ಮೊದಲಾದವರು ಕುನಾಲ್ ಶಾಹಿ ಕಪೂರ್ ಅವರ ಕ್ರಿಸ್ಮಸ್ ಸೆಲೆಬ್ರೆಷನ್‌ನಲ್ಲಿ ಭಾಗವಹಿಸಿದ್ದರು. ಈ ಸಮಯದ ಫೋಟೋಗಳುಯ ಸೋಶಿಯಲ್‌ ಮೀಡಿಯಾದಲ್ಲಿ ಸಖಯ್‌ ವೈರಲ್‌ ಆಗಿದೆ. ಮಕ್ಕಳೊಂದಿಗೆ ಸೈಫ್ ಅಲಿ ಖಾನ್ ಮತ್ತು ಕರೀನ್ ಕಪೂರ್‌ನಿಂದ ಹಿಡಿದು ಕರಿಷ್ಮಾ ಕಪೂರ್, ತಾರಾ ಸುತಾರಿಯಾ ಅವರೊಂದಿಗೆ ಆಧಾರ್ ಜೈನ್ ಮತ್ತು ಹೆಚ್ಚಿನವರು ಕುನಾಲ್ ಶಾಹಿ ಕಪೂರ್ ಅವರ ನಿವಾಸದಲ್ಲಿ ಕ್ರಿಸ್ಮಸ್ ಗೆಟ್ ಟುಗೆದರ್‌ಗೆ ಹಾಜರಾಗಿದ್ದರು.

ಅಂತಿಮವಾಗಿ ಕರೀನಾ ಕಪೂರ್ ಖಾನ್  ಕೋವಿಡ್ -19 ಟೆಸ್ಟ್‌ ರಿಸೆಲ್ಟ್  ನೆಗೆಟಿವ್ ಬಂದಿದ್ದು ಜೊತೆಗೆ ಅವರು ತಮ್ಮ ಕ್ವಾರಟೈನ್‌  ಅವಧಿಯನ್ನು ಮುಗಿಸಿದ್ದಾರೆ. ನಟಿ ತನ್ನ ಪತಿ ಸೈಫ್ ಅಲಿ ಖಾನ್ ಮತ್ತು ಅವರ ಇಬ್ಬರು  ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಕಪೂರ್ ಕ್ರಿಸ್ಮಸ್ ಆಚರಣೆಗೆ ತೆರಳಿದರು. ಕೋವಿಡ್ -19 ಸೋಂಕಿಗೆ ಒಳಗಾದ ನಂತರ ಕರೀನಾ ಮನೆಯಿಂದ ಹೊರಬಂದಿರುವುದು ಇದೇ ಮೊದಲು.

ಕರೀನಾ ಕಪ್ಪು ಟಿ-ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ತುಂಬಾ ಸಿಂಪಲ್‌ ಆಗಿದ್ದ ಕರೀನಾ ಸುಂದರವಾಗಿ ಕಾಣುತ್ತಿದ್ದರು. ಸೈಫ್ ನೀಲಿ ಪ್ಯಾಂಟ್‌ನೊಂದಿಗೆ ನೀಲಿ ಶರ್ಟ್ ಧರಿಸಿದ್ದರೆ, ತೈಮೂರ್ ಬಿಳಿ ಪೈಜಾಮಾದೊಂದಿಗೆ ಗುಲಾಬಿ ಕುರ್ತಾ ಹಾಗೂ ಜೇಹ್ ತಂದೆ ಸೈಫ್ ಶರ್ಟ್‌ ಬಣ್ಣದಲ್ಲಿ ಡ್ರೆಸ್‌ನಲ್ಲಿ ಕಾಣಸಿಕೊಂಡರು.

Tap to resize

ಕರಿಷ್ಮಾ ಕಪೂರ್ ಕೂಡ ಮಗಳ ಜೊತೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. 90 ರ ದಶಕದ ಸಖತ್‌ ಜನಪ್ರಿಯ  ನಟಿಯರಲ್ಲಿ ಒಬ್ಬರಾದ ಕರಿಷ್ಮಾ ಅವರು ಈ ಸಮಯದಲ್ಲಿ  ಕ್ರಿಸ್‌ಮಸ್ ಹಬ್ಬದ ಮೂಡ್‌ಗೆ ಸಂಪೂರ್ಣವಾಗಿ ಮ್ಯಾಚ್‌ ಆಗುವಂತೆ ಕೆಂಪು ಬಣ್ಣದ ಉಡುಪನ್ನು ಧರಿಸಿದ್ದರು. 

ಆದಾರ್ ಜೈನ್ ತನ್ನ ಗೆಳತಿ ತಾರಾ ಸುತಾರಿಯಾ ಅವರೊಂದಿಗೆ ಪಾರ್ಟಿಯಲ್ಲಿ ಹಾಜರಿದ್ದರು. ತಾರಾ ಸುತಾರಿಯಾ ತನ್ನ ಬಿಳಿ ಟ್ಯೂಬ್ ಡ್ರೆಸ್‌ನಲ್ಲಿ ನಿಜವಾದ ದಿವಾ ತರ  ಕಾಣುತ್ತಿದ್ದರು, ಆಧಾರ್ ಪ್ರಿಟೆಂಡ್‌  ಬೀಚ್‌-ವೈಬ್ ಶರ್ಟ್ ಧರಿಸಿದ್ದರು.

ಕುನಾಲ್ ಶಾಹಿ ಕಪೂರ್ ಅವರ ನಿವಾಸಕ್ಕೆ ಪಾರ್ಟಿಗಾಗಿ ಆಗಮಿಸಿದ ಅರ್ಮಾನ್ ಜೈನ್ ಅವರು ತಮ್ಮ ಪತ್ನಿ ಅನಿಸಾ ಮಲ್ಹೋತ್ರಾ ಅವರ ಜೊತೆಗೆ ಕೈ ಕೈ ಹಿಡಿದು ನಡೆದರು.

ಆಧಾರ್ ಮತ್ತು ಅರ್ಮಾನ್ ಅವರ ಪೋಷಕರು, ರೀಮಾ ಕಪೂರ್ ಮತ್ತು ಮನೋಜ್ ಜೈನ್ ಕ್ರಿಸ್‌ಮಸ್‌ ಸೆಲೆಬ್ರೆಷನ್‌ಗೆ ಒಡಹುಟ್ಟಿದವರ ಜೊತೆ ಸೇರಿಕೊಂಡರು. ರೀಮಾ ಕಪೂರ್  ತನ್ನ ಪತಿ ಮನೋಜ್ ಜೈನ್ ಜೊತೆ ಪೋಸ್ ಕೊಟ್ಟರು.

Latest Videos

click me!