ಮರಾಠಿ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ಹೃತ ದುರ್ಗುಲೇ ಮತ್ತು ಗೆಳೆಯ ಪ್ರತೀಕ್ ಶಾ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
27
ಇನ್‌ಸ್ಟಾಗ್ರಾಂನಲ್ಲಿ 2.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಟಿ, 'ಹೊಸ ಆರಂಭಗಳ ಮ್ಯಾಜಿಕಲ್ ಕ್ಷಣ' ಎಂದು ಬರೆದುಕೊಂಡು ಭಾವೀ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ.
37
'ನನ್ನ ಪ್ರಕಾರ ಒಂದು ಫೇರಿಟೇಲ್ ನಿಜವಾಗಿದೆ. ರಿಯಾಲಿಟಿ ಇದು,' ಎಂದು ಬರೆದುಕೊಂಡು ನಿಶ್ಚಿತಾರ್ಥದ ದಿನಾಂಕವನ್ನು ರಿವೀಲ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ.
47
ಹೃತ ನೀಲಿ ಬಣ್ಣದ ಗೌನ್ ಧರಿಸಿದ್ದರೆ, ಬ್ರೌನ್ ಬಣ್ಣದ ಸೂಟ್‌ನಲ್ಲಿ ಪ್ರತೀಕ್ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಡಿಸೈನವರ್ ವೇರ್ ಉಡುಪುಗಳನ್ನು ಧರಿಸಿದ್ದು, ಡಿಸೈನರ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
57
ಲೈಮ್‌ಲೈಟ್‌ನಲ್ಲಿರುವ ಹೃತ ಪ್ರತಿ ಕ್ಷಣವೂ ಸುದ್ದಿಯಲ್ಲಿರುತ್ತಾರೆ. ತಮ್ಮ ವೈಯಕ್ತಿಕ ಜೀವನವನ್ನು ಇಷ್ಟೊಂದು ಸೀಕ್ರೆಟ್ ಆಗಿಡಲು ಹೇಗೆ ಸಾಧ್ಯವಾಯಿತು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
67
ಪುಡ್ಚಾ ಪಾಲ್ (Pudhcha Paaul) ಚಿತ್ರದ ಮೂಲಕ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿದ ಹೃತ ಸ್ಟಾರ್ ಪರ್ವದಲ್ಲಿ 'ಧ್ರುವ' ಅಭಿನಯಿಸಿದ್ದರು.
77
ಎರಡು ಮಾರಾಠಿ ಸಿನಿಮಾದಲ್ಲಿ ಅಭಿನಯಿಸಿರುವ ಹೃತ ಅವರ ಮುಂದಿನ ಸಿನಿಮಾ 'ಟೈಂ ಪಾಸ್ 3' (Timepass 3) ಬಿಡುಗಡೆಗೆ ಸಿದ್ಧವಾಗಿದೆ.