ಈಕೆ ಒಂದು ಕಾಲದಲ್ಲಿ ಮಿಸ್ ಇಂಡಿಯಾ, ಸೂಪರ್ ಮಾಡೆಲ್, ನಟಿ ಕೂಡಾ. ನಂತರ ಬಾಲಿವುಡ್‌ನ ಖ್ಯಾತ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದು, ಇನ್ನೇನು ಮದುವೆ ಎನ್ನುವಾಗ ಆತ ಬೇರೊಬ್ಬಳ ತೆಕ್ಕೆಯಲ್ಲಿರುವುದು ಕಂಡಳು.. ನಂತರ ಸ್ಟಾರ್ ಕ್ರಿಕೆಟರ್ ಕೈ ಹಿಡಿದ ನಟಿ, ಮನೆಮುರುಕಿ ಎನಿಸಿಕೊಂಡಳು..
ನೋಡೋಕೆ ಚೆಂದ ಇದ್ದ ಕೂಡಲೇ ಲೈಫ್ ಸೆಟಲ್ ಖಂಡಿತಾ ಆಗಲ್ಲ, ಹೆಸರು, ಹಣ ಬಂದ ಕೂಡಲೇ ಲೈಫಲ್ಲಿ ನೆಮ್ಮದಿ ಇರುತ್ತಾ- ಖಂಡಿತಾ ಇಲ್ಲ ಎಂಬುದಕ್ಕೆ ಆಗಾಗ ಉದಾಹರಣೆಗಳು ನಮ್ಮ ಮಧ್ಯೆಯೇ ಸಿಗುತ್ತವೆ. ಈ ನಟಿ ಸಂಗೀತಾ ಬಿಜ್ಲಾನಿಯ ಬದುಕೂ ಇದಕ್ಕೊಂದು ನಿದರ್ಶನ.
210
ಸಂಗೀತಾ ಬಿಜಲಾನಿ 1980ರಲ್ಲಿ ಮಿಸ್ ಇಂಡಿಯಾ ವಿಜೇತೆ ಮತ್ತು ನಂತರ ಯಶಸ್ವಿ ರೂಪದರ್ಶಿ. 80ರ ದಶಕದ ಮಧ್ಯಭಾಗದಲ್ಲಿ ಮಾಡೆಲಿಂಗ್ ದಿನಗಳಲ್ಲಿ, ಸಂಗೀತಾ ಮತ್ತೊಬ್ಬ ಮಹತ್ವಾಕಾಂಕ್ಷಿ ನಟ, 21 ವರ್ಷದ ಸಲ್ಮಾನ್ ಖಾನ್ ಅವರನ್ನು ಭೇಟಿಯಾದರು.
310
ಇಬ್ಬರೂ 1986ರಲ್ಲಿ ಡೇಟಿಂಗ್ ಪ್ರಾರಂಭಿಸಿದರು ಮತ್ತು ವರ್ಷಗಳ ಕಾಲ ಸ್ಥಿರರಾಗಿದ್ದರು. 90ರ ದಶಕದಲ್ಲಿ, ಸಲ್ಮಾನ್ ದೊಡ್ಡ ಸ್ಟಾರ್ ಆಗಿದ್ದಾಗ ಮತ್ತು ಸಂಗೀತಾ ಸ್ವತಃ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾಗ, ಇಬ್ಬರೂ ವಿವಾಹವಾಗಲು ಸಿದ್ಧರಾದರು.
410
ಅವರ ಮದುವೆಯ ಆಮಂತ್ರಣಗಳು ಕೂಡಾ ಮುದ್ರಿತವಾಗಿದ್ದವು. ಆದರೆ, ಇದೇ ಸಮಯದಲ್ಲಿ ಸಲ್ಮಾನ್ ಪಾಕಿಸ್ತಾನಿ ನಟಿ ಸೋಮಿ ಅಲಿಯೊಂದಿಗೆ ಅವಳ ತೆಕ್ಕೆಯಲ್ಲಿದ್ದಾಗಲೇ ಸಂಗೀತಾ ನೋಡಿದರು.
510
ಹೀಗಾಗಿ ಮದುವೆಗೆ ಕೆಲವೇ ದಿನಗಳ ಮೊದಲು ಸಲ್ಮಾನ್ ಮತ್ತು ಸಂಗೀತಾ ಬೇರ್ಪಟ್ಟಿದ್ದರು. ಇಂದು 62ರ ವಯಸ್ಸಿನಲ್ಲೂ ಸುಕ್ಕಿಲ್ಲದ ಸುಂದರಿ ಸಂಗೀತಾರನ್ನು ನೋಡಿದರೆ, ಸಲ್ಮಾನ್ ಖಾನ್ ಎಂತೆಂಥ ಚೆಲುವೆಯರನ್ನು ತನ್ನ ತಪ್ಪುಗಳಿಂದ ಕಳೆದುಕೊಂಡಿದ್ದಾರೆಂದು ಅರಿವಾಗದಿರದು.
610
ನಂತರ ಸಂಗೀತಾ ಭಾರತ ಕ್ರಿಕೆಟ್ ತಂಡದ ಆಗಿನ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ಪ್ರೀತಿಸಿ ವಿವಾಹವಾದರು. ಈ ಸಂದರ್ಭದಲ್ಲಿ ಕ್ರಿಕೆಟಿಗನಿಗೆ ವಿವಾಹವಾಗಿ ಮಕ್ಕಳಿದ್ದರು. ಆದ್ದರಿಂದ ಸಂಗೀತಾ ಮನೆಮುರುಕಿ ಎಂಬ ಮಾತು ಕೇಳಬೇಕಾಯಿತು.
710
14 ವರ್ಷದ ದಾಂಪತ್ಯದ ಬಳಿಕ ಸಂಗೀತಾ ಮತ್ತು ಅಜರ್ 2010 ರಲ್ಲಿ ವಿಚ್ಛೇದನ ಪಡೆದರು. ಸಂಗೀತಾ ಬಿಜಲಾನಿ ಅವರು 1996ರಲ್ಲಿ ಮದುವೆಯಾದಾಗಿನಿಂದ ಚಲನಚಿತ್ರಗಳಿಂದ ದೂರವಿದ್ದರು. ಅವರ ಕೊನೆಯ ಬಿಡುಗಡೆ 1997 ರಲ್ಲಿ ಎಬಿಸಿಡಿ ಆಗಿತ್ತು.
810
ಅಂದಿನಿಂದ, ಅವರು ಕಾರ್ಯಕ್ರಮಗಳು ಮತ್ತು ಕೆಲ ಸಾಂದರ್ಭಿಕ ರಿಯಾಲಿಟಿ ಶೋಗಳಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಮತ್ತು ತಮ್ಮ ಕಳೆಗುಂದದ ಯೌವನಕ್ಕಾಗಿ ಸುದ್ದಿಯಾದರು.
910
2021ರಲ್ಲಿ, ಸಲ್ಮಾನ್ ಖಾನ್ ಅವರೊಂದಿಗೆ ರಾಜಿ ಮಾಡಿಕೊಂಡರು ಮತ್ತು ಮುಂದಿನ ವರ್ಷ ಅವರ 57 ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನಟ ಸಂಗೀತಾಗೆ ಮುತ್ತು ಕೊಟ್ಟಿದ್ದು ಸುದ್ದಿಯಾಗಿತ್ತು.
1010
ಇಂದು ಸಂಗೀತಾ ವೆಬ್ ಸಿರೀಸ್‌ಗಳ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ತುಂಬಾ ಆಳವಾದ ಹಾಗೂ ಅರ್ಥಪೂರ್ಣ ಪಾತ್ರಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.