ಬಹುಕಾಲದ ಗೆಳತಿ ಲಾವಣ್ಯಾ ಜೊತೆ ನಟ ವರುಣ್ ತೇಜ್ ಎಂಗೇಜ್ಮೆಂಟ್: ನಿಶ್ಚಿತಾರ್ಥದ ಸುಂದರ ಫೋಟೋಗಳು

First Published Jun 10, 2023, 10:43 AM IST

ತೆಲುಗು ಸ್ಟಾರ್ ವರುಣ್ ತೇಜ್ ಬಹುಕಾಲದ ಗೆಳತಿ ಲಾವಣ್ಯಾ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಚಿರಂಜೀವಿ ಸಹೋದರ ನಗೇಂದ್ರ ಬಾಬು ಪುತ್ರ, ನಟ ವರುಣ್ ತೇಜ್ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. 

ನಟ ವರುಣ್ ತೇಜ್ ಬಹುಕಾಲದ ಗೆಳತಿ ಲಾವಣ್ಯ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರೂ ಹೈದಾರಾಬಾದ್‌ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇವರ ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತರು ಸಾಕ್ಷಿಯಾದರು. 

Latest Videos


ಜೂನ್ 9ರಂದು ವರುಣ್ ತೇಜ್ ಮತ್ತು ಲಾವಣ್ಯ ಇಬ್ಬರೂ ಉಂಗುರ ಬದಲಾಯಿಸಿಕೊಂಡರು. ಇಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. 

ಹೈದರಾಬಾದ್‌ನ ವರುಣ್ ತೇಜ್ ಅವರ ಮನೆಯಲ್ಲಿ ನಿಶ್ಚಿತಾರ್ಥ ಸಮಾರಂಭ ನೇರವೇರಿದೆ. ಸಮಾರಂಭದಲ್ಲಿ ರಾಮ್ ಚರಣ್, ಅಲ್ಲು ಅರ್ಜುನ್, ಸಾಯಿ ಧರಮ್ ತೇಜ್, ವೈಷ್ಣವ್ ತೇಜ್ ಮತ್ತು ಅಲ್ಲು ಅರವಿಂದ್ ಸೇರಿದಂತೆ ಇಡೀ ಕುಟಂಬ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. 

ನಟ ವರುಣ್ ತೇಜ್ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಲಾವಣ್ಯಾ ಜೊತೆ ರೊಮ್ಯಾಟಿಂಕ್ ಫೋಟೋ ಶೇರ್ ಮಾಡಿ ನನ್ನ ಪ್ರೀತಿಯನ್ನು ಕಂಡುಕೊಂಡೆ ಎಂದು ಹೇಳಿದ್ದಾರೆ. 

ಲಾವಣ್ಯ ಹಾಗೂ ವರುಣ್ ತೇಜ್ ಇಬ್ಬರೂ ‘ಮಿನಿಸ್ಟರ್​’, ‘ರಾಯಾಭಾರಿ’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿದ್ದು ಇದೀಗ ಪತಿ-ಪತ್ನಿಯರಾಗುತ್ತಿದ್ದಾರೆ. 

ಉತ್ತರ ಪ್ರದೇಶದ ಮೂಲದ ನಟಿ ಲಾವಣ್ಯ ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಲಾವಣ್ಯ ನಟಿಸಿದ್ದಾರೆ. ಕೊನೆಯದಾಗಿ ಹ್ಯಾಪಿ ಬರ್ತಡೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

click me!