ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ ರಾಖಿ ಸಾವಂತ್‌; ಸಂಬಂಧವೇ fake ಎಂದ ನೆಟ್ಟಿಗರು!

First Published | Feb 14, 2022, 7:09 PM IST

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್‌ (Rakhi Sawant)ಗೆ ಲೈಮ್‌ಲೈಟ್‌ನಲ್ಲಿ ಉಳಿಯುವುದು ಹೇಗೆ ಎಂದು ತಿಳಿದಿದೆ. ಅವರು ಪ್ರತಿದಿನ ಒಂದಲ್ಲ ಒಂದು ನಾಟಕವನ್ನು ಮಾಡಿ ಪ್ರಚಾರ ಪಡೆಯುತ್ತಲೇ ಇರುತ್ತಾರೆ. ಈಗ  ಪ್ರೇಮಿಗಳ ದಿನ 2022 ರ  (Valentine Day) ದಿನ ಮೊದಲು, ಅವರು ಪತಿ ರಿತೇಶ್‌ನಿಂದ ಬೇರ್ಪಡುವುದಾಗಿ ಘೋಷಿಸಿದರು ಮತ್ತು ತಮ್ಮ Instagram ನಲ್ಲಿ ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್‌ ಮಿಡಿಯಾ ಯೂಸರ್ಸ್‌ ರಾಖಿ ಪೋಸ್ಟ್‌ಗೆ ತೀವ್ರವಾಗಿ ಕಾಮೆಂಟ್‌ ಮಾಡಿದ್ದು ಅವರಿಬ್ಬರ ಸಂಬಂಧವೇ ಸುಳ್ಳು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

'ನನ್ನ ಪ್ರೀತಿ ಫ್ಯಾನ್ಸ್‌ ಹಾಗೂ ಹಿತೈಷಿಗಳೇ, ನಾನು ಮತ್ತು ರಿತೇಶ್ ಪರಸ್ಪರ ಬೇರ್ಪಟ್ಟಿದ್ದೇವೆ ಎಂದು ನಾವು ನಿಮಗೆ ಹೇಳಲು ಬಯಸುತ್ತೇವೆ. ಬಿಗ್ ಬಾಸ್ ನಂತರ ಬಹಳಷ್ಟು ಸಂಭವಿಸಿದೆ ಮತ್ತು ನನ್ನ ನಿಯಂತ್ರಣಕ್ಕೆ ಮೀರಿದ ಅನೇಕ
ಸಂಗತಿಗಳು ನಡೆದಿವೆ. ನಾವು ಬಹಳಷ್ಟು ಪ್ರಯತ್ನಿಸಿದ್ದೇವೆ. ಆದರೆ ಕೊನೆಯಲ್ಲಿ ನಾವು ನಮ್ಮ ಜೀವನವನ್ನು ಪ್ರತ್ಯೇಕವಾಗಿ ಕಳೆಯಲು ನಿರ್ಧರಿಸಿದ್ದೇವೆ. ನಾವಿಬ್ಬರೂ ಪ್ರತ್ಯೇಕವಾಗಿ ಮುಂದುವರಿಯುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲು ಇದೆಲ್ಲವೂ ಸಂಭವಿಸಿದೆ ಎಂದು ನನಗೆ ತುಂಬಾ ಬೇಸರವಾಗಿದೆ. ಆದರೆ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ರಿತೇಶ್ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ. ಇದೀಗ ನಾನು ನನ್ನ ಕೆಲಸದ ಮೇಲೆ ಗಮನ ಹರಿಸಬೇಕು. ನನ್ನನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿಟ್ಟುಕೊಳ್ಳಬೇಕು.ನನ್ನನ್ನು ಅರ್ಥಮಾಡಿಕೊಂಡ ಮತ್ತು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು,' ಎಂದು ರಾಖಿ ಸಾವಂತ್ ಪೋಸ್ಟ್‌ ಮಾಡಿದ್ದಾರೆ 

ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ತೀವ್ರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಸಂಬಂಧದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ರಾಖಿ ಸಾವಂತ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಒಬ್ಬರು, 'ರಿತೇಶ್ ನಿಮ್ಮವರಾಗಿದ್ದರಾ' ಎಂಬ
ಪ್ರಶ್ನೆಯನ್ನು ಎತ್ತಿದ್ದಾರೆ. 'ಮೇಡಂ, ಇದು ಫೇಕ್‌ (Fake) ಎಂದು ತಿಳಿದಿತ್ತು, ನಾಟಕ ಮಾಡಬೇಡಿ' ಎಂದು  ಒಬ್ಬರು ಹೇಳಿದ್ದಾರೆ.

Tap to resize

'ಒಪ್ಪಂದ ಮುಗಿದಿದೆಯೇ?' ಎಂದು ಮತ್ತೊಬ್ಬರು ಬರೆದರು. 'ಕೊನೆಗೂ ನಾಟಕ ಮುಗಿಯಿತು' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ ಹಾಗೂ ಇನ್ನೊಬ್ಬರು  'ಬಾಡಿಗೆ ಪತಿಯ ವಿಷಯ ಈಗ ನಿಜವೆಂದು ತೋರುತ್ತದೆ, ಇದು ಕೇವಲ ಪ್ರದರ್ಶನಕ್ಕಾಗಿ ಮಾಡಿದ ನಾಟಕ,' ಎಂದಿದ್ದಾರೆ. 

'ನಿಮ್ಮ ಬಾಡಿಗೆ ಪತಿಯನ್ನು ಬಿಗ್ ಬಾಸ್‌ಗೆ ಕರೆ ತಂದಿದ್ದರು,' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ, ಇನ್ನೊಬ್ಬರು 'ಯಾವಾಗ ಮದುವೆ ನಡೆಯುತ್ತದೆ, ಆಗಲೇ ವಿಚ್ಛೇದನವಾಗುತ್ತದೆ (Divorce),' ಎಂದಿದ್ದಾರೆ . ಇನ್ನೊಬ್ಬರು ಹೇಳಿದರು 'ಇದೆಲ್ಲವೂ ಮೋಸ ಮತ್ತು ಸುಳ್ಳು ಎಂದು ನಮಗೆಲ್ಲರಿಗೂ ತಿಳಿದಿತ್ತು'.

ಸಲ್ಮಾನ್ ಖಾನ್ (Salman Khan) ಅವರ ಬಿಗ್ ಬಾಸ್ 15 (Bigg Boss-15) ರ ಶೋನಲ್ಲಿ,  ಕಾರ್ಯಕ್ರಮದ ಟಿಆರ್‌ಪಿ (TRP) ಹೆಚ್ಚಿಸಲು ತಯಾರಕರು ರಾಖಿ ಸಾವಂತ್ ಅವರ ಪತಿಯನ್ನು ಮನೆಯೊಳಗೆ ಕರೆತಂದಿದ್ದರು. ಈ ವೇಳೆ ಸಲ್ಮಾನ್ ರಿತೇಶ್ ನಿಜವಾಗಿಯೂ ರಾಖಿಯ ಪತಿಯೇ ಅಥವಾ ಅಲ್ಲವೇ ಎಂಬ ಪ್ರಶ್ನೆಯನ್ನೂ ಎತ್ತಿದ್ದರು. ಇಷ್ಟೇ ಅಲ್ಲ, ರಿತೇಶ್ ಮತ್ತೆ ಮದುವೆಯಾಗಲು ಇಚ್ಛಿಸುವುದಾಗಿ ಹಲವು ವಿಷಯಗಳಲ್ಲಿ ಸುಳಿವು ನೀಡಿದ್ದರು. 

ಸಂದರ್ಶನದ ವೇಳೆ ಅವರು ರಾಖಿ ಜೊತೆ ಯಾವುದೇ ಔಪಚಾರಿಕ ಮದುವೆ ಅಥವಾ ಕೋರ್ಟ್ ಮದುವೆ ಮಾಡಿ ಕೊಂಡಿಲ್ಲ ಎಂದು ಹೇಳಿದ್ದಾರೆ. ವಿಚ್ಛೇದನ ಪಡೆದ ನಂತರ ರಾಖಿಯನ್ನು ಮದುವೆಯಾಗುವುದಾಗಿ ರಿತೇಶ್ ಭರವಸೆ ನೀಡಿದ್ದಾರೆ. 

ನನ್ನ ಪ್ರಪಂಚ ಮುಗಿದ ಮೇಲೆ ರಾಖಿ ನನ್ನ ಕೈ ಹಿಡಿದಳು ಎಂದು ರಿತೇಶ್ ಹೇಳಿದ್ದರು. 'ನನ್ನ ಪಾಲಿಗೆ ರಾಖಿ ಪ್ರೀತಿ ನಿಜ. ನಾನು ಮತ್ತು ರಾಖಿ ಪತಿ ಮತ್ತು ಪತ್ನಿಗಿಂತ ಹೆಚ್ಚು ಸ್ನೇಹ ಸಂಬಂಧವನ್ನು ಹೊಂದಿದ್ದೇವೆ' ಎಂದು ಸಂದರ್ಶನವೊಂದರಲ್ಲಿ, ರಿತೇಶ್ ಹೇಳಿದ್ದರು. 
 

ಅವರು ತಮ್ಮ ಮೊದಲ ಹೆಂಡತಿಗೆ ಇನ್ನೂ ವಿಚ್ಛೇದನ ನೀಡಿಲ್ಲ ಎಂದು ಒಪ್ಪಿಕೊಂಡರು. 'ಆದರೆ ತಾವು ಸಂಪೂರ್ಣವಾಗಿ ತಪ್ಪು ಎಂದು ಭಾವಿಸುವವರು ಕಥೆಯ ಎರಡೂ ಬದಿಗಳನ್ನು ಕೇಳಬೇಕು' ಎಂದು ಅವರು ಹೇಳಿದರು. 'ಒಬ್ಬ ಮಹಿಳೆ ಪುರುಷನ ಮೇಲೆ ಆರೋಪ ಮಾಡಿದ್ದಾಳೆ ಎಂದ ಮಾತ್ರಕ್ಕೆ ಪುರುಷನಿಗೆ ತಪ್ಪಾಗುತ್ತದೆ ಎಂದರ್ಥವಲ್ಲ' ಎಂದರು. 

ಕಾರ್ಯಕ್ರಮದ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಇಚ್ಛಿಸದೇ ಸುಮ್ಮನಿದ್ದೆ.  ನನ್ನ ಮಗುವಿನ ಸಲುವಾಗಿ ನಾನು ಮೌನವಾಗಿದ್ದೇನೆ. ಪತ್ನಿ ಸ್ನಿಗ್ಧಾ ಪ್ರಿಯಾ ಅವರನ್ನು ಉಲ್ಲೇಖಿಸಿ, ಇದು ನನ್ನ ಜೀವನವನ್ನು ಹಾಳು ಮಾಡಿದೆ, ಆದರೆ ನನ್ನ ಮಗುವಿನೊಂದಿಗೆ ಇದನ್ನು  ಆಗಲು ನಾನು ಬಯಸುವುದಿಲ್ಲ  ಎಂದು ರಿತೇಶ್ ಹೇಳಿದ್ದರು.

Latest Videos

click me!