'ನವಮಿ'ಯಂದು ಹೊಸ ಮನೆಗೆ ಸೋನಮ್ ಕಪೂರ್ ಶಿಫ್ಟ್; ನಟಿಯ ಐಷಾರಾಮಿ ಅಪಾರ್ಟ್‌ಮೆಂಟ್‌ ಹೀಗಿದೆ

Published : Oct 26, 2023, 06:20 PM IST

ಬಾಲಿವುಡ್ ನಟಿ ಸೋನಂ ಕಪೂರ್ (Saonam Kapoor) 'ನವಮಿ'ಯ ಶುಭ ಸಂದರ್ಭದಲ್ಲಿ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ಅವರು ಹೊಸ ಐಷಾರಾಮಿ ಅಪಾರ್ಟ್‌ಮೆಂಟ್‌ನ ಸುಂದರ ನೋಟಗಳನ್ನು ಹಂಚಿಕೊಂಡಿದ್ದಾರೆ.

PREV
17
'ನವಮಿ'ಯಂದು ಹೊಸ ಮನೆಗೆ ಸೋನಮ್ ಕಪೂರ್ ಶಿಫ್ಟ್; ನಟಿಯ  ಐಷಾರಾಮಿ ಅಪಾರ್ಟ್‌ಮೆಂಟ್‌ ಹೀಗಿದೆ

ಮುಂಬೈ ಮತ್ತು ಲಂಡನ್‌ನಲ್ಲಿ ತನ್ನ ಜೀವನವನ್ನು ನಡೆಸುತ್ತಿರುವ ಸೋನಂ ಕಪೂರ್ ಅಹುಜಾ ಕೊನೆಗೂ ತನ್ನ ನೆಲೆಯನ್ನು ಮುಂಬೈಗೆ ಬದಲಾಯಿಸಿದ್ದಾರೆ. 

27

ನವರಾತ್ರಿಯ ನವಮಿಯ ಸಂದರ್ಭದಲ್ಲಿ ಸೋನಂ  ಪತಿ ಆನಂದ್ ಅಹುಜಾ ಮತ್ತು ಒಂದು ವರ್ಷದ ಗಂಡು ಮಗು ವಾಯು ಕಪೂರ್ ಅಹುಜಾ ಅವರೊಂದಿಗೆ ಮಹಾರಾಷ್ಟ್ರದ ಮುಂಬೈನಲ್ಲಿರುವ ತನ್ನ ಹೊಸ  ಮನೆಗೆ ಸ್ಥಳಾಂತರಗೊಂಡರು. 

37

ಅಕ್ಟೋಬರ್ 23, 2023 ರಂದು, ಸೋನಮ್ ತನ್ನ Instagram ಹ್ಯಾಂಡಲ್‌ನಲ್ಲಿ ತನ್ನ ಹೊಸ ಮನೆಯಿಂದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

47

ಫೋಟೋಗಳಲ್ಲಿ ಗೋಲ್ಡನ್ ಎಂಬ್ರಾಯ್ಡರಿ ಹೊಂದಿರುವ  ಬ್ಲಶ್ ಪಿಂಕ್‌ ಬಣ್ಣದ ಸೂಟ್‌ ಧರಿಸಿ ಸೋನಂ ಕಪೋರ್‌ ಪೋಸ್‌ ನೀಡಿದ್ದಾರೆ ಅವರು ತಮ್ಮ ನೋಟವನ್ನು ಜುಮ್ಕಿ ಮತ್ತು ಕಡಗಳೊಂದಿಗೆ ವಿನ್ಯಾಸಗೊಳಿಸಿದರು. 

57

ಕೂದಲನ್ನು ಜಡೆ ಹಣೆದ ಸೋನಂ ಕಪೂರ್‌ ತಮ್ಮ ನೋಟವನ್ನು ಪೂರ್ಣಗೊಳಿಸಲು ಹಗುರವಾದ ಲಿಪ್‌ಸ್ಟಿಕ್‌ ಮತ್ತು ಸೂಕ್ಷ್ಮ ಮೇಕ್ಅಪ್ ಆಯ್ಕೆ ಮಾಡಿಕೊಂಡಿದ್ದಾರೆ.

67

ನಟಿ ಕಿಟಕಿಯ ಪಕ್ಕದ ರೆಟ್ರೋ ಕುರ್ಚಿ ಮೇಲೆ ಕುಳಿತ್ತಿದ್ದು, ಹೊಸ ಮನೆಯ ಕೆಲವು ನೋಟಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಹೊಸ ಮನೆಯ ಗೋಡೆಗಳ ಮೇಲೆ ಪ್ರಾಚೀನ ಭಾರತೀಯ ಕರಿಗರಿಯನ್ನು ಕೆತ್ತಲಾಗಿದ್ದು  ಅರಮನೆಯ ವೈಬ್ ಅನ್ನು ನೀಡಿದೆ

77

'ನಾವು ಈ ವಾರ ನಮ್ಮ ಹೊಸ ಮನೆಗೆ ತೆರಳಿದ್ದೇವೆ. ನಮ್ಮ ಹೃದಯಗಳು ಸಂತೋಷ ಮತ್ತು ಭರವಸೆಯಿಂದ ತುಂಬಿವೆ ಮತ್ತು ಇಲ್ಲಿ ಹೊಸ ನೆನಪುಗಳಿಗೆ ಕಾಯಬೇಕು,' ಎಂದು ಫೋಟೋಗಳ ಜೊತೆ  ಸೋನಮ್ ಬರೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories