ಪುಷ್ಪಾ 2 ಚಿತ್ರದ ಟ್ರೈಲರ್ (Puspa 2 trailer) ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಆದರೆ ರಶ್ಮಿಕಾ ಮಂದಣ್ಣ ಇನ್ನೂ ಪುಷ್ಪಾ 1 ರ ಗುಂಗಿನಿಂದ ಹೊರಗೆ ಬಂದಂತೆ ಕಾಣಿಸುತ್ತಿಲ್ಲ. ಹಾಗಾಗಿ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪುಷ್ಪಾ 1 ರ ನನ್ನ ಎಲ್ಲಾ ನೆನಪುಗಳನ್ನು ಮತ್ತೆ ಬಿಚ್ಚಿಟ್ಟಿದ್ದಾರೆ, ನಟಿ ಈವರೆಗೆ ಎಲ್ಲೂ ಹಂಚಿಕೊಳ್ಳದ ಪುಷ್ಪಾ ಸಿನಿಮಾದ ಮುದ್ದಾದ ಫೋಟೊಗಳನ್ನ ಶೇರ್ ಮಾಡಿದ್ದಾರೆ.
ಪುಷ್ಪಾ ಸಿನಿಮಾದ ಮೂಲಕ ಶ್ರೀವಲ್ಲಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ (Rashmika Mandanna) ಶ್ರೀವಲ್ಲಿ ಡ್ರೆಸ್ ಧರಿಸಿ, ಕೈಯಲ್ಲಿ ಹಾರ್ಟ್ ಸಿಂಬಲ್ ಮಾಡಿ ಪೋಸ್ ನೀಡಿದ್ದಾರೆ. ಅದರ ಜೊತೆಗೆ ಶ್ರೀವಲ್ಲಿ ನಿಮಗೆ ಸಂಪೂರ್ಣ ಪ್ರೀತಿಯನ್ನು ಕಳುಹಿಸುತ್ತಿದ್ದಾರೆ! ಎಂದು ಬರೆದುಕೊಂಡಿದ್ದಾರೆ.
ಅಲ್ಲು ಅರ್ಜುನ್ (Allu Arjun) ಜೊತೆಗೆ ನಿಂತಿರುವ ಫೋಟೊ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ರಷ್ಯಾದಿಂದ ನಿಮ್ಮ ಪುಷ್ಪಾ ಮತ್ತು ಶ್ರೀವಲ್ಲಿ ಥ್ರೋಬ್ಯಾಕ್ ಫೋಟೊ ಎಂದು ಬರೆದುಕೊಂಡಿದ್ದಾರೆ.
ಪುಷ್ಪಾ ದ ರೈಸ್ ಮತ್ತು ಪುಷ್ಪಾ ದ ರೂಲ್ ಎರಡೂ ಸಿನಿಮಾಗಳ ಹಿಂದಿನ ಟ್ಯಾಲೆಂಟ್ ಆಗಿರುವ ನಿರ್ದೆಶಕ ಸುಕುಮಾರ್ (Sukumar) ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಪೋಸ್ ನೀಡಿದ್ದಾರೆ.
ಸಲ್ವಾರ್ ಕಮೀಜ್ ಧರಿಸಿ ನಿಂತಿರುವ ಫೋಟೊ ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ಪುಷ್ಪಾ ಸಿನಿಮಾದ ಮೊದಲ ಲುಕ್ ಟೆಸ್ಟ್ (first look test) ಫೋಟೊ ಎಂದಿದ್ದಾರೆ.
ತಮ್ಮ ಹೇರ್ ಸ್ಟೈಲ್ ಫೋಟೋ ಒಂದನ್ನು ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಕೂದಲು ಮತ್ತು ಮೇಕಪ್ ಮತ್ತು ವೇಷಭೂಷಣಗಳು ತಮ್ಮದೇ ಆದ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದೆ ಎಂದಿದ್ದಾರೆ.
ಪುಷ್ಫಾ ಸಿನಿಮಾದ ನಾಯಕ, ನಿರ್ದೇಶಕ, ನಿರ್ಮಾಪಕರು ಎಲ್ಲರು ಜೊತೆಯಾಗಿರುವ ಫೋಟೊ ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ನನ್ನ ಬಳಿ ಇರುವ ಪುಷ್ಪಾ ಗ್ಯಾಂಗ್ ನ ಏಕೈಕ ಫೋಟೋ ಎಂದು ಬರೆದುಕೊಂಡಿದ್ದಾರೆ.
ಸಿಂಪಲ್ ಆಗಿ ಒಂದು ಶರ್ಟ್ ಧರಿಸಿ, ಮುದ್ದಾಗಿ ಪೋಸ್ ಕೊಟ್ಟಿರುವ ಫೋಟೊ ಶೇರ್ ಮಾಡಿರುವ ರಶ್ಮಿಕಾ, ಶ್ರೀವಲ್ಲಿಗೆ ವಿಭಿನ್ನ ಕಣ್ಣುಗಳು ಇರಬೇಕೇ ಅಥವಾ ಬೇಡವೇ ಎನ್ನುವ ಟೆಸ್ಟ್ ಮಾಡಲು ಈ ಫೋಟೊ ತೆಗೆಯಲಾಗಿದೆ. ಕೊನೆಗೆ ಯಾವುದೇ ಲೆನ್ಸ್ ಇಡದೇ, ನನ್ನ ನ್ಯಾಚುರಲ್ ಕಣ್ಣುಗಳಲ್ಲೇ ಶ್ರೀವಲ್ಲಿಯನ್ನು ಸೃಷ್ಟಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಪುಷ್ಪಾ ಸಿನಿಮಾದ ಪೋಸ್ಟರ್ ಜೊತೆಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಿಂತಿರುವ ಫೋಟೊಗಳನ್ನು ಪೋಸ್ಟ್ ಮಾಡಿರುವ ರಶ್ಮಿಕಾ ನಾವೇನು ಕ್ರಿಯೇಟ್ ಮಾಡಿದ್ದೆವೋ ಅದರಿಂದ ತುಂಬಾನೆ ಸಂತೋಷವಾಗಿದೆ ಎಂದಿದ್ದಾರೆ. ಅಂದ್ರೆ ಪುಷ್ಪಾ ಯಶಸ್ಸಿನಿಂದ ಸಂತೋಷವಾಗಿದೆ ಅಂದಿದ್ದಾರೆ ರಶ್ಮಿಕಾ ಮಂದಣ್ಣ.