ಯಾರ್ ಏನೇ ಹೇಳಲಿ, ಟ್ರೋಲ್ ಮಾಡ್ಲಿ, ಕೇಸ್ ಕೂಡ ಹಾಕಲಿ ನಾನು ಮಾತ್ರ ಹೀಗೆ ಇರೋದು ಎನ್ನುವುದೇ ಉರ್ಫಿ ಪಾಲಿಸಿ. ಯಾಕೆಂದ್ರೆ ಎಷ್ಟೇ ಟ್ರೋಲ್ ಆದರೂ, ಕೇಸ್ ದಾಖಲಾದರು ಉರ್ಫಿ ತನ್ನ ವಿಚಿತ್ರ ಅವತಾರ ಮಾತ್ರ ಬಿಟ್ಟಿಲ್ಲ. ಬಿಚ್ಚೋಲೆಯಾಗಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ಉರ್ಫಿ ಮತ್ತೊಂದು ವೇಷದಲ್ಲಿ ದರ್ಶನ ನೀಡಿದ್ದಾರೆ. ವಿಚಿತ್ರವಾಗಿ ಬಟ್ಟೆ ಧರಿಸಿ ಮುಂಬೈ ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಬಿಕಿನಿ ಟಾಪ್ ಮತ್ತು ಲಾಂಗ್ ಸ್ಕರ್ಟ್ ಧರಿಸಿದ್ದಾರೆ. ಬಿಕಿನಿ ಟಾಪ್ ವಿಚಿತ್ರವಾಗಿದ್ದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಉರ್ಫಿ ಜಾವೇದ್ ವಿರುದ್ದ ಬಜೆಪಿ ಸದಸ್ಯೆ ಒಬ್ಬರು ದೂರು ದಾಖಲಿಸಿದ್ದರು. ಆದರೂ ಉರ್ಫಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ದೂರು ದಾಖಲಾದ ಬಳಿಕ ಮತ್ತಷ್ಟು ವಿಚಿತ್ರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ ನಟಿ ಬಟ್ಟೆ ಯಾಕೆ ಹಾಕಲ್ಲ ಎಂದು ಸಹ ಬಹಿರಂಗ ಪಡಿಸಿದ್ದರು. ಸದಾ ಅರೆಬೆತ್ತಲಾಗಿ ಕ್ಯಾಮರಾ ಮುಂದೆ ಪೋಸ್ ನೀಡುತ್ತಿರುತ್ತಾರೆ. ಸದಾ ಯಾಕೆ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವುದು ಎಂದು ಉರ್ಫಿ ಬಹಿರಂಗ ಪಡಿಸಿದ್ದಾರೆ. ಬಟ್ಟೆ ಯಾಕೆ ಹಾಕಲ್ಲ ಎಂದು ಉರ್ಫಿ ಜಾವೆದ್ ವಿವರಿಸಿದ್ದಾರೆ.
'ನನಗೆ ಬಟ್ಟೆ ಎಂದರೆ ಅಕ್ಷರಶಃ ಅಲರ್ಜಿ' ಎಂದು ಉರ್ಫಿ ಹೇಳಿದ್ದಾರೆ. ಉಣ್ಣೆಯ ಬಟ್ಟೆ ಹಾಕಿದ ಬಳಿಕ ದೇಹದಲ್ಲಿ ಬೊಬ್ಬೆ ಬಂತು. ಹಾಗಾಗಿ ಬಟ್ಟೆ ಹಾಕೋದನ್ನು ಬಿಟ್ಟೆ ಎಂದು ಹೇಳಿದ್ದಾರೆ. ಈಗ ನಿಮಗೆ ಗೊತ್ತಾಯಿತಾ ನಾನು ಯಾಕೆ ಬಟ್ಟೆ ಹಾಕಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾನು ಇಷ್ಟೆ ಬಟ್ಟೆ ಹಾಕುವುದು ಎಂದು ಹೇಳಿದ್ದರು.
ಬಿಜೆಪಿ ಸದಸ್ಯೆಯ ದೂರಿಗೆ ಉರ್ಫಿ ಸರಿಯಾಗಿ ತಿರುಗೇಟು ನೀಡಿದ್ದರು 'ನನ್ನನ್ನು ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ವಿಧಿ ಇಲ್ಲ. ಅಶ್ಲೀಲತೆ, ನಗ್ನತೆಯ ವ್ಯಾಖ್ಯಾನವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ನನ್ನ (ಖಾಸಗಿ ಭಾಗಗಳು) ಕಾಣಿಸದ ಹೊರತು, ನೀವು ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಪ್ರಚಾರ ಪಡೆಯಲು ಮಾತ್ರ ಇವರು ಇದನ್ನು ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.
ಇದೀಗ ಮತ್ತೆ ವಿಚಿತ್ರವಾಗಿ ಕ್ಯಾಮರಾ ಮುಂದೆ ಬಂದಿರುವ ಉರ್ಫಿ ನೋಡಿ ಹುಷಾರಮ್ಮ ಚುಚ್ಚುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಉರ್ಫಿ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ.