Rashmika Black Saree Look: ಕಪ್ಪು ಸೀರೆಯಲ್ಲಿ ಮಿಂಚಿದ ಕಿರಿಕ್ ಚೆಲುವೆ

Published : Dec 15, 2021, 05:43 PM ISTUpdated : Dec 15, 2021, 05:54 PM IST

Rashmika mandanna in Pushpa Pre-release event: ಕಪ್ಪು ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಪುಷ್ಪ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಟಿಯ ಲುಕ್ ಹೀಗಿತ್ತು

PREV
19
Rashmika Black Saree Look: ಕಪ್ಪು ಸೀರೆಯಲ್ಲಿ ಮಿಂಚಿದ ಕಿರಿಕ್ ಚೆಲುವೆ

ದಕ್ಷಿಣದ ಸುಂದರಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ ಪುಷ್ಪ: ದಿ ರೈಸ್‌ನ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಸಖತ್ ಬ್ಲಾಕ್ ಸೀರೆಯಲ್ಲಿ ಮಿಂಚಿದ್ದಾರೆ.

29

ಸ್ಟ್ರಿಂಗ್ ಬ್ಲೌಸ್‌ನೊಂದಿಗೆ ಸುಂದರವಾದ ಕಪ್ಪು ಸ್ಯಾಟಿನ್ ಸೀರೆಯಲ್ಲಿ ಲುಕ್ ತೋರಿಸಿದ ನಟಿ ಸಿಂಪಲ್ ಆಗಿದ್ದರೂ ಹಾಟ್ ಲುಕ್‌ ಆಯ್ಕೆ ಮಾಡಿಕೊಂಡಿದ್ದಾರೆ.

39

ದೊಡ್ಡ ವಜ್ರದ ಕಿವಿಯೋಲೆಗಳು ಮತ್ತು ಕನಿಷ್ಠ ಮೇಕ್ ಅಪ್‌ನಲ್ಲಿ ನೋಟವನ್ನು ಪೂರ್ಣಗೊಳಿಸಿದ್ದರು. ಸೆಲೆಬ್ರಿಟಿ ಸ್ಟೈಲ್‌ನಲ್ಲಿ ಸಿಂಪಲ್ ಆಗಿ ಕೂದಲು ಬಾಚಿ ಫ್ರೀ ಬಿಟ್ಟಿದ್ದರು.

49

ಪುಷ್ಪಾ ಚಿತ್ರದ ಬಿಡುಗಡೆಯ ಪೂರ್ವ ಭಾಗವು ಚಿತ್ರದ ಸಂಪೂರ್ಣ ತಾರಾಗಣ ಮತ್ತು ಸಿಬ್ಬಂದಿಯೊಂದಿಗೆ ಸ್ಟಾರ್-ಸ್ಟಡ್ಡ್ ಈವೆಂಟ್ ಆಗಿತ್ತು. ಆದರೆ, ಚಿತ್ರದ ನಿರ್ದೇಶಕ ಸುಕುಮಾರ್ ಕಾರ್ಯಕ್ರಮದಿಂದ ಹೊರಗುಳಿದಿದ್ದರು.

59

ಸುಕುಮಾರ್ ಅವರ ಗೈರುಹಾಜರಿಯ ಬಗ್ಗೆ ಸುಕುಮಾರ್ ಅವರ ಮಾಜಿ ಸಹವರ್ತಿ, ಚಲನಚಿತ್ರ ನಿರ್ಮಾಪಕ ಬುಚ್ಚಿಬಾಬು ಸನಾ ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯ ಸುಕುಮಾರ್ ಚಿತ್ರದ ರೆಕಾರ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಬುಚ್ಚಿ ಬಾಬು ತಿಳಿಸಿದ್ದಾರೆ.

69

ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪಾ ಸುಕುಮಾರ್ ಜೊತೆ ಅಲ್ಲು ಅರ್ಜುನ್ ಅವರ ಮೂರನೇ ಸಹಯೋಗವಾಗಿದೆ.

79

ಈ ಹಿಂದೆ, ನಟ-ನಿರ್ದೇಶಕ ಜೋಡಿಯು ಆರ್ಯ ಮತ್ತು ಆರ್ಯ 2 ಗಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಿನಿಮಾ 2021 ರ ಡಿಸೆಂಬರ್ 17 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

89

ಫಹದ್ ಫಾಸಿಲ್, ರಶ್ಮಿಕಾ ಮಂದಣ್ಣ, ಅನಸೂಯಾ ಭಾರದ್ವಾಜ್ ಮತ್ತು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಜೊತೆಗೆ, ನಿರ್ಮಾಪಕರು ಚಿತ್ರದ ಡಬ್ಬಿಂಗ್ ಆವೃತ್ತಿಯನ್ನು ಮಲಯಾಳಂ, ತಮಿಳು, ಹಿಂದಿ ಮತ್ತು ಕನ್ನಡದಲ್ಲಿ ಬಿಡುಗಡೆ ಮಾಡುತ್ತಾರೆ.

99

ಪುಷ್ಪಾ ಜೊತೆಗೆ, ರಶ್ಮಿಕಾ ಮಂದಣ್ಣ ಶಂತನು ಬಾಗ್ಚಿ ಅವರ ಹಿಂದಿ ಸ್ಪೈ ಥ್ರಿಲ್ಲರ್ ಮಿಷನ್ ಮಜ್ನುವಿನ ಭಾಗವಾಗಲಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಲಿದ್ದಾರೆ. ಇದು 13 ಮೇ 2022 ರಂದು ಬಿಡುಗಡೆಯಾಗಲಿದೆ.

Read more Photos on
click me!

Recommended Stories