ಅಯ್ಯೋ, ಗೋಣಿ ಚೀಲನೂ ಬಿಟ್ಟಿಲ್ಲ ಈ ನಟಿ; ಉರ್ಫಿಯ ಹೊಸ ಲುಕ್ ಹೇಗಿದೆ ನೋಡಿ

First Published | Jun 5, 2022, 2:51 PM IST

ನಟಿ ಉರ್ಫಿ ಈಗ ಗೋಣಿ ಚೀಲವನ್ನೇ ಧರಿಸಿ ಗಮನ ಸೆಳೆದಿದ್ದಾರೆ. ವಿಚಿತ್ರವಾಗಿ ಬಟ್ಟೆ ಧರಿಸುತ್ತಿದ್ದ ಉರ್ಫಿ ಗೋಣಿ ಚೀಲವನ್ನು ಬಿಟ್ಟಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ತುಂಬಾ ಉಪಯುಕ್ತವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

ಪ್ರತಿದಿನ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ನೆಟ್ಟಿಗರು ಸಹ ಕಾತರದಿಂದ ಕಾಯುತ್ತಿರುತ್ತಾರೆ.

Tap to resize

ಉರ್ಫಿ ಈಗ ಗೋಣಿ ಚೀಲವನ್ನೇ ಧರಿಸಿ ಗಮನ ಸೆಳೆದಿದ್ದಾರೆ. ವಿಚಿತ್ರವಾಗಿ ಬಟ್ಟೆ ಧರಿಸುತ್ತಿದ್ದ ಉರ್ಫಿ ಗೋಣಿ ಚೀಲವನ್ನು ಬಿಟ್ಟಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ತುಂಬಾ ಉಪಯುಕ್ತವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಗೋಣಿ ಚೀಲ ಧರಿಸಿದ ವಿಡಿಯೊವನ್ನು ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಗೋಣಿ ಚೀಲವನ್ನು ತೆಗೆದುಕೊಳ್ಳುವ ನಟಿ ಬಳಿಕ ಅದನ್ನೇ ಬಟ್ಟೆ ಮಾಡಿಕೊಂಡಿದ್ದಾರೆ. ಕ್ಯಾಮರಾಗೆ ಮಸ್ತ್ ಪೋಸ್ ನೀಡಿರುವ ಉರ್ಫಿ ವಯ್ಯಾರ ಮಾಡಿದ್ದಾರೆ.

ವಿಡಿಯೋ ಶೇರ್ ಮಾಡಿ ಈ ಉಡುಗೆಯನ್ನು ಕೇವಲ 10 ನಿಮಿಷದಲ್ಲಿ ತಯಾರಿಸಲಾಗಿದೆ ಎಂದು ಹೇಳಿದ್ದಾರೆ. ಉರ್ಫಿ ಗೋಣಿ ಚೀಲದ ಡ್ರೆಸ್ ಎಲ್ಲಾ ಕಡೆ ವೈರಲ್ ಆಗಿದೆ. ಇತ್ತೀಚಿಗಷ್ಟೆ ಮೈ ತುಂಬಾ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಬಂದಿದ್ದ ನಟಿಯನ್ನು ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದರು.

Latest Videos

click me!