ಅತೀ ಸಣ್ಣ ವಯಸ್ಸಿಗೆ ಬಾಲಿವುಡ್‌ ಸುಂದರ ನಟಿಯರ ಸಾವು, ಇಂದಿಗೂ ನಿಗೂಢ ಎನಿಸಿರುವ ಪ್ರಕರಣಗಳಿವು!

First Published | Feb 11, 2024, 7:15 PM IST

ಬಾಲಿವುಡ್‌ ನಲ್ಲಿ ಮಿಂಚಲು ಬಂದ ಅನೇಕ ನಟಿಯರು ಅತೀ ಚಿಕ್ಕ ವಯಸ್ಸಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಕೆಲವೊಂದು ಆತ್ಮಹತ್ಯೆ  ಎಂದು ಪರಿಗಣಿಸಿದರೂ ಇಂದಿಗೂ ಅವರ ಅಭಿಮಾನಿಗಳು ಮತ್ತು ಸಮಾಜ ಮಾತನಾಡಿಕೊಳ್ಳುತ್ತಿರುವುದು ಮಾತ್ರ  ನಿಗೂಢ ಸಾವೆಂದು. ದುರಂತ ಅಂತ್ಯ ಕಂಡ ನಟಿಯರ ಪಟ್ಟಿ ಇಲ್ಲಿದೆ.

25 ವರ್ಷ ವಯಸ್ಸಿನ ಮತ್ತು ಬಾಲಿವುಡ್‌ನ ಶ್ರೇಷ್ಠ ನಟಿ ಜಿಯಾ ಖಾನ್  ತಮ್ಮ ಜುಹು ಮನೆಯಲ್ಲಿ ತಮ್ಮ  ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಇದೆಲ್ಲವೂ ಜೂನ್ 3, 2013 ರಂದು ಸಂಭವಿಸಿತ್ತು.  ಇದು ಕೊಲೆಯೇ ಹೊರತು ಆತ್ಮಹತ್ಯೆಯಲ್ಲ ಎಂದು ಆಕೆಯ ತಾಯಿ ಆರೋಪಿಸಿದರು. ಈ ಸಂಬಂಧ ಆಕೆಯ ಬಾಯ್‌ ಫ್ರೆಂಡ್‌ ಸೂರಜ್ ಪಾಂಚೋಲಿ ಬಂಧನ ಕೂಡ ಆಗಿತ್ತು. ಬಳಿಕ ಜಿಯಾ ಖಾನ್ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ.  ಜಿಯಾ ತನ್ನ ಡೈರಿಯಲ್ಲಿ ಸೂರಜ್ ಜತೆ ಸಂಬಂಧದಲ್ಲಿ ಇದ್ದ ಬಗ್ಗೆ ಬರೆದಿದ್ದಳು. ಆತ್ಮಹತ್ಯೆಯೋ? ಕೊಲೆಯೋ ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ.

ಬಾಲಿವುಡ್‌ಗೆ ಪ್ರವೇಶಿಸುವ ಮೂಲಕ ನಟಿಯಾಗಿ ಬದಲಾದ ಕುಲ್ಜೀತ್ ರಾಂಧವಾ ಎಂಬ ರೂಪದರ್ಶಿ ಜುಹು ನಲ್ಲಿ ಆಕೆಯ  ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. 30 ವರ್ಷ ವಯಸ್ಸಿನ ಆಕೆ ತನ್ನ ಜೀವನದಲ್ಲಿ ಅನೇಕ ಸಂಕೀರ್ಣತೆಗಳನ್ನು ಎದುರಿಸಲು ಸಾಧ್ಯವಾಗದೆ ತನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು   ಸಾಯುವ ಮುನ್ನ ಬರೆದ ಪತ್ರ ಸಿಕ್ಕಿತ್ತು. ಆದರೆ ಈಕೆಯನ್ನು ಕೊಲೆ ಮಾಡಲಾಗಿದೆ ಎಂದು ಅನೇಕರು ಇನ್ನೂ ಕೂಡ ಮಾತನಾಡಿಕೊಳ್ಳುತ್ತಾರೆ. ಹೀಗಾಗಿ ಇದು ಕೂಡ ಒಂದು ನಿಗೂಢ ಸಾವು.  

Tap to resize

 ವಿಜೆ ಆಗಿದ್ದ ನಫೀಸಾ ಜೋಸೆಫ್ ಬಾಲಿವುಡ್ ನಟಿಯಾಗಿ ಬದಲಾದರು. ತನ್ನ 26ನೇ ವರ್ಷದಲ್ಲಿ ಅವರು 2004 ರಲ್ಲಿ ಮುಂಬೈನಲ್ಲಿ ತಮ್ಮ ಅಪಾರ್ಟ್ಮೆಂಟ್ನಲ್ಲಿ ಹೆಣವಾಗಿ ಸಿಕ್ಕರು. ಆಕೆ ಖಿನ್ನತೆಯಿಂದ ಬಳಲುತ್ತಿದ್ದಳು ಮತ್ತು ಮದುವೆಗೂ ಮುನ್ನವೇ ಆಕೆ ತನ್ನ ಜೀವನವನ್ನು ಕೊನೆಗೊಳಿಸಿದ್ದಳು ಎಂದು ಕುಟುಂಬದವರು ಹೇಳಿದ್ದಾರೆ. ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ವಿಚ್ಛೇದಿತಳಾಗಿದ್ದಳು ಮತ್ತು ಆ ಕಾರಣದಿಂದ ಆಕೆಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಜನಮನದಲ್ಲಿ ಉಳಿಯಿತು. ಮತ್ತೊಬ್ಬ ಬಾಲಿವುಡ್ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉತ್ತರಗಳು ಮರೆಯಾಗಿವೆ. 

ದಿವ್ಯಾ ಭಾರತಿ ಎಂಬ ಅತೀ ಸುಂದರ ನಟಿಯೊಬ್ಬರು ತಮ್ಮ ಮನೆಯ ಐದನೇ ಮಹಡಿಯಿಂದ ಬಿದ್ದು ತಮ್ಮ 19ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದರು. ಪೊಲೀಸರು ಸಂಪೂರ್ಣ ತನಿಖೆ ನಡೆಸಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಕೊಲೆಯಲ್ಲ ಎಂಬ ತೀರ್ಮಾನಕ್ಕೆ ಬಂದರು. ಆದರೆ ಅನೇಕ ಊಹಾಪೋಹಗಳು ಆಕೆಯ ಸಾವನ್ನು ತನ್ನ ಪತಿ ಮಾಡಿದ ಕೊಲೆಯ ಕಡೆಗೆ ತೋರಿಸಿದವು ಆದರೆ ಪ್ರಕರಣವು ಮುಂದೆ ಸಾಗದೆ ಆತ್ಮಹತ್ಯೆ ಎಂದು ಘೋಷಿಸಲಾಯಿತು. 

ಸಿಲ್ಕ್‌ ಸ್ಮಿತಾ ದಕ್ಷಿಣ ಭಾರತದ ಜನಪ್ರಿಯ ನಟಿ. 35ನೇ ವರ್ಷದಲ್ಲಿ  ಚೆನ್ನೈನಲ್ಲಿರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಯ ಸಾವಿಗೆ ಕಾರಣ ಇನ್ನೂ ನಿಗೂಢವಾಗಿದೆ. ಕೊಲೆಯಾಗುವ ಸಾಧ್ಯತೆಗಳಿದ್ದವು ಆದರೆ ಪೊಲೀಸರು ಆತ್ಮಹತ್ಯೆಯ ಹೆಸರಿನಲ್ಲಿ ಆಕೆಯ ಪ್ರಕರಣವನ್ನು ಕ್ಲೋಸ್‌ ಮಾಡಿದರು. ಹೀಗಾಗಿ ಇದು ಕೂಡ ಬಾಲಿವುಡ್ ನಟಿಯ ನಿಗೂಢ ಸಾವು ಎಂದೆನಿಸಿಕೊಂಡಿದೆ.

Viveka Babajee

ವಿವೇಕ ಬಾಬಾಜಿ 37ನೇ ವಯಸ್ಸಿನಲ್ಲಿ ಸುಂದರ ನಟಿ 2010 ರಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಸೂಸೈಡ್ ನೋಟ್  ಪ್ರಿಯಕರನನ್ನೇ ಬೊಟ್ಟು ಮಾಡಿ ತೋರಿಸುತ್ತಿತ್ತು.  ಇದು ಕೊಲೆ ಅಥವಾ ಆತ್ಮಹತ್ಯೆಯೇ ಎಂದು ಘೋಷಿಸುವಷ್ಟು ಬಲಶಾಲಿಯಾಗಿರಲಿಲ್ಲ ಮತ್ತು ನಂತರ ಪ್ರಕರಣವನ್ನು ಆತ್ಮಹತ್ಯೆಯ ಹೆಸರಿನಲ್ಲಿ ಮುಚ್ಚಲಾಯಿತು. ಆದರೆ ಇದು ಕೂಡ ನಿಗೂಢವಾಗಿ ಉಳಿಯಿತು.

Latest Videos

click me!