1988 ರಲ್ಲಿ ಪಾಕಿಸ್ತಾನದ ಟೆಲಿವಿಷನ್ ನಾಟಕ ಅನಾರ್ಕಲಿಯೊಂದಿಗೆ ಝೀಬಾ ದೂರದರ್ಶನಕ್ಕೆ ಪದಾರ್ಪಣೆ ಮಾಡಿದರು. ಈ ಸರಣಿಯಲ್ಲಿನ ಅಭಿನಯವು ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆಯಿತು. ಇದರ ನಂತರ, ಅವರು 1991 ರಲ್ಲಿ ರಣಧೀರ್ ಕಪೂರ್ ಅವರ ನಿರ್ದೇಶನದಲ್ಲಿ ರಿಷಿ ಕಪೂರ್ ಅವರೊಂದಿಗೆ ಹೆನ್ನಾ ಎಂಬ ಬಾಲಿವುಡ್ ಚಿತ್ರಕ್ಕೆ ಸಹಿ ಹಾಕಿದರು. ಈ ಚಿತ್ರವು ಝೀಬಾ ಅವರನ್ನು ಬಹು ಎತ್ತರಕ್ಕೆ ಕೊಂಡೊಯ್ಯಿತು. ಬಳಿಕ ಅವರು ಮೊಹಬ್ಬತ್ ಕಿ ಅರ್ಜೂ, 1994 ರಲ್ಲಿ ಸ್ಟಂಟ್‌ಮ್ಯಾನ್, 1995 ರಲ್ಲಿ ಜೈ ವಿಕ್ರಾಂತ ಮತ್ತು 1996 ರಲ್ಲಿ ಮುಕದಾಮಾದಂತಹ ಹೆಚ್ಚು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದರೂ ಯಾವುದೂ ಕೂಡ ಹೆಸರು ತಂದು ಕೊಡಲಿಲ್ಲ.