ರಿಷಿ ಕಪೂರ್ ಕೈಯೇರಿದ ಮೊಮ್ಮಗಳು ರಾಹಾ : ಅಭಿಮಾನಿಯ ಕೈ ಚಳಕಕ್ಕೆ ನೀತು ಫಿದಾ

First Published | Feb 11, 2024, 4:04 PM IST

ಇದು ಎಐ ಯುಗ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವಿದ್ದು, ಕೆಲವು  ವಿಚಾರಗಳಲ್ಲಿ ಅಪಾಯಕಾರಿ ಆಗುವುದರ ಜೊತೆ ಈ ಎಐ ಅನೇಕ ನೆನಪುಗಳ ಮರು ಸೃಷ್ಟಿಸಲು ಸಹಕಾರಿಯೂ ಆಗಿದೆ. ಹೊರಟು ಹೋದವರನ್ನೆಲ್ಲಾ ಫೋಟೋಗಳಲ್ಲಿ ಜೊತೆ ಸೇರಿಸಬಹುದಾಗಿದೆ. ಹೀಗಿರುವಾಗ ಬಾಲಿವುಡ್‌ನ ಹಿರಿಯ ನಟ ದಿವಂಗತ ರಿಷಿ ಕಪೂರ್ ಅಭಿಮಾನಿಯೋರ್ವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ರಿಷಿ ಕಪೂರ್‌ ಅವರು ತಮ್ಮ ಮೊಮ್ಮಗಳನ್ನು ಎತ್ತಿಕೊಂಡಂತೆ ಇರುವ ಫೋಟೋವನ್ನು ಸೃಷ್ಟಿಸಿದ್ದು, ಇದನ್ನು ನೋಡಿದ ರಿಷಿ ಕಪೂರ್ ಪತ್ನಿ ಅಭಿಮಾನಿಯ ಕೈ ಚಳಕಕ್ಕೆ ಫಿದಾ ಆಗಿದ್ದಾರೆ.

ಇದು ಎಐ ಯುಗ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವಿದ್ದು, ಕೆಲವು  ವಿಚಾರಗಳಲ್ಲಿ ಅಪಾಯಕಾರಿ ಆಗುವುದರ ಜೊತೆ ಈ ಎಐ ಅನೇಕ ನೆನಪುಗಳ ಮರು ಸೃಷ್ಟಿಸಲು ಸಹಕಾರಿಯೂ ಆಗಿದೆ. ಹೊರಟು ಹೋದವರನ್ನೆಲ್ಲಾ ಫೋಟೋಗಳಲ್ಲಿ ಜೊತೆ ಸೇರಿಸಬಹುದಾಗಿದೆ.

ಹೀಗಿರುವಾಗ ಬಾಲಿವುಡ್‌ನ ಹಿರಿಯ ನಟ ದಿವಂಗತ ರಿಷಿ ಕಪೂರ್ ಅಭಿಮಾನಿಯೋರ್ವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ರಿಷಿ ಕಪೂರ್‌ ಅವರು ತಮ್ಮ ಮೊಮ್ಮಗಳನ್ನು ಎತ್ತಿಕೊಂಡಂತೆ ಇರುವ ಫೋಟೋವನ್ನು ಸೃಷ್ಟಿಸಿದ್ದು, ಇದನ್ನು ನೋಡಿದ ರಿಷಿ ಕಪೂರ್ ಪತ್ನಿ ಅಭಿಮಾನಿಯ ಕೈ ಚಳಕಕ್ಕೆ ಫಿದಾ ಆಗಿದ್ದಾರೆ.

Tap to resize

ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪುತ್ರಿ ರಾಹಾ ರಿಷಿ ಕಪೂರ್ ನಿಧನವಾದ ನಂತರ ಜನಿಸಿದ್ದಳು. ವರ್ಷಗಳ ಕಾಲ ಮಾಧ್ಯಮಗಳ ಕಣ್ಣಿಂದ ಮಗಳನ್ನು ದೂರವೇ ಇಟ್ಟಿದ್ದರು ಈ ಜೋಡಿ.

ಆದರೆ ಕಳೆದ ಡಿಸೆಂಬರ್ ಸಮಯದಲ್ಲಿ ನಡೆದ ಕ್ರಿಸ್‌ಮಸ್ ಪಾರ್ಟಿಯಲ್ಲಿ ತಮ್ಮ ಮುದ್ದಿನ ಮಗಳನ್ನು ಮಾಧ್ಯಮಗಳಿಗ ಪಪಾರಾಜಿ ಕ್ಯಾಮರಾಗಳಿಗೆ ತೋರಿಸಿದ್ದರು. 

ಆಲಿಯಾ ರಣ್ಬೀರ್ ಜೋಡಿಯ ಈ ಮುದ್ದು ಕಂದನ ನೋಡಿ ಫ್ಯಾನ್ಸ್‌ಗಳು ಫುಲ್ ಖುಷಿಯಾಗಿದ್ದರು. ಹಲವು ದಿನಗಳ ಕಾಲ ಆಲಿಯಾ ರಣ್ಬೀರ್  ಮಗಳು ರಾಹಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು

ರಿಷಿ ಕಪೂರ್ ಅವರು ಬಾಲಿವುಡ್‌ನ ಒಂದು ಕಾಲದ ಫೇಮಸ್ ನಟರಾಗಿದ್ದರೂ ಕೂಡ, ಮಗ ರಣ್ಬೀರ್ ಜೊತೆ ಹಾಗೂ ಅಪ್ಪ ರಿಷಿ ಮಧ್ಯೆ ಅಂತಹ ಆತ್ಮೀಯ ಒಡನಾಟವಿರಲಿಲ್ಲ, ಮಗ ತನ್ನ ಬ್ಯಾಚುಲರ್ ಜೀವನವನ್ನು ಎಂಜಾಯ್ ಮಾಡುವುದಕ್ಕಾಗಿ ತಮ್ಮನ್ನು ಬಿಟ್ಟು ಬೇರೆಯೇ ವಾಸ ಮಾಡಲು ಶುರು ಮಾಡಿದಾಗ ರಿಷಿ ಕಪೂರ್ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿಯೇ ಹೊರ ಹಾಕಿದ್ದರು. 

 ಇದಾದ ನಂತರ 2020ರಲ್ಲಿ ರಿಷಿ ಕಪೂರ್ ತೀರಿಕೊಂಡಿದ್ದರು. ಆದರೆ ಇದೆಲ್ಲಾ ಕಳೆದು ಎರಡು ವರ್ಷಗಳ ನಂತರ 2022ರಲ್ಲಿ ರಣ್‌ಬೀರ್ ಆಲಿಯಾ ಜೊತೆ ಹಸೆಮಣೆ ಏರಿದಾಗ ಕುಟುಂಬದ ಚಿತ್ರಣ ಬದಲಾಗಿತ್ತು. 

ರಾಹಾ ಹುಟ್ಟುವುದಕ್ಕೂ ಮೊದಲೇ ರಿಷಿ ಕಪೂರ್ ಅವರು ತೀರಿಕೊಂಡಿದ್ದರಿಂದ ಮೊಮ್ಮಗಳು ರಾಹಾ ಜೊತೆ ರಿಷಿ ಕಪೂರ್ ಇರುವ ಯಾವುದೇ ಫೋಟೋಗಳು ಇಲ್ಲ, ಹೀಗಾಗಿ ಈಗ ಅಭಿಮಾನಿ ಸೃಷ್ಟಿಸಿದ ಈ ಫೋಟೋಗೆ ರಿಷಿ ಕಪೂರ್ ಪತ್ನಿ ನಟಿ ನೀತು ಕಪೂರ್ ಅವರು ಫಿದಾ ಆಗಿದ್ದಾರೆ.

ಅಭಿಮಾನಿ ಸೃಷ್ಟಿಸಿದ ಈ ಫೋಟೋವನ್ನು ಆಲಿಯಾ ತಾಯಿ ಸೋನಿ ರಜ್ದಾನ್ ಅವರು ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಟು ಖುಷಿ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ರಣ್‌ಬೀರ್ ಅಮ್ಮ ನೀತು ಕಪೂರ್ ಅವರು ಕೂಡ  ಈ ಫೋಟೋವನ್ನು ರೀಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 

ಇದೊಂದು ಅದ್ಬುತವಾದ ಎಡಿಟಿಂಗ್, ಇದು ನಮ್ಮ ಹೃದಯವನ್ನು ಖುಷಿಯಿಂದ ತುಂಬುತ್ತಿದೆ ಎಂದು ಸೋನಿ ರಾಜ್ದಾನ್ ಬರೆದುಕೊಂಡಿದ್ದರು. ಇನ್ನು ಈ ಫೋಟೋಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದು ರಿಷಿ ಕಪೂರ್ ಬದುಕಿರಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.  
 

Latest Videos

click me!