ಪ್ರೇಮಿಗಳ ದಿನದಂದು ಹುಟ್ಟಿದ ಈ ನಟಿ ಕೊನೆವರೆಗೂ ಪ್ರೀತಿಗಾಗಿ ಹಂಬಲಿಸಿದರು

Published : Feb 14, 2023, 07:36 PM IST

ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾದ ಮಧುಬಾಲಾ (Madhubala)  ಅವರು ಫೆಬ್ರವರಿ 14 ರಂದು  ಜನಿಸಿದರು. ಪ್ರೇಮಿಗಳ ದಿನದಂದು ಜನಿಸಿದ  ಮಧುಬಾಲಾ ತನ್ನ ಜೀವನದುದ್ದಕ್ಕೂ ನಿಜವಾದ ಪ್ರೀತಿಗಾಗಿ ಹಂಬಲಿಸುತ್ತಿದ್ದರು.

PREV
111
 ಪ್ರೇಮಿಗಳ ದಿನದಂದು ಹುಟ್ಟಿದ ಈ ನಟಿ  ಕೊನೆವರೆಗೂ ಪ್ರೀತಿಗಾಗಿ ಹಂಬಲಿಸಿದರು

ಮಧುಬಾಲಾ ಅವರು ಮೊಘಲ್-ಎ-ಅಜಮ್‌ನ ಸಹ ಕಲಾವಿದ ದಿಲೀಪ್ ಕುಮಾರ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ ದಿಲೀಪ್ ಕುಮಾರ್ ಅಲಿಯಾಸ್ ಯೂಸುಫ್ ಖಾನ್‌ ಅವರ ಒಂದು  ಕೃತ್ಯ ಇಬ್ಬರ ನಡುವೆ ಮನಸ್ತಾಪ ಸೃಷ್ಟಿಸಿತ್ತು.
 

211

1933 ರಲ್ಲಿ ದೆಹಲಿಯಲ್ಲಿ ಜನಿಸಿದ ಮಧುಬಾಲಾ  ಅತಾವುಲ್ಲಾ ಖಾನ್ ಮತ್ತು ಆಯೇಷಾ ಬೇಗಂ ಅವರ 11 ಮಕ್ಕಳಲ್ಲಿ, ಅವರು ಆರು ಕಿರಿಯ ಸಹೋದರರನ್ನು ಹೊಂದಿದ್ದರು.

311

ತುಂಬು ಕುಟುಂಬದಲ್ಲಿ ಎರಡು  ಹೊತ್ತಿನ ರೊಟ್ಟಿಗಾಗಿ ಕಷ್ಷವಿದ್ದ ಕಾರಣ  ಚಿಕ್ಕವಯಸ್ಸಿನಲ್ಲೇ ಮಧುಬಾಲಾ ಅವರನ್ನು ಕೆಲಸ ಮಾಡುವಂತೆ ಒತ್ತಾಯಿಸಲಾಯಿತು.

 

411

ಬೇಬಿ ಮುಮ್ತಾಜ್ ಅಕಾ ಮಧುಬಾಲಾ ಕೇವಲ 9 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಸೇರಿದರು. ಬಾಲ ಕಲಾವಿದನಾಗಿ ಅವರ ಚೊಚ್ಚಲ ಚಿತ್ರ ಬಸಂತ್, ಇದು 1942 ರಲ್ಲಿ ಬಿಡುಗಡೆಯಾಯಿತು.

511

ಮಧುಬಾಲಾ ಅವರು ನೀಲ್ ಕಮಲ್ ಚಿತ್ರದಲ್ಲಿ ರಾಜಕುಮಾರ್ ಎದುರು ನಾಯಕ ನಟಿಯಾಗಿ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. 1949 ರಲ್ಲಿ, ಅವರು ಕಮಲ್ ಅಮ್ರೋಹಿ ಅವರ ಮಹಲ್ ಚಲನಚಿತ್ರದಿಂದ ಮನ್ನಣೆ ಪಡೆದರು.

611

1951 ರಲ್ಲಿ ತರಾನಾ ಚಿತ್ರದ ಶೂಟಿಂಗ್ ಸಮಯದಲ್ಲಿ, ಮಧುಬಾಲಾ ಅವರು ದಿಲೀಪ್ ಕುಮಾರ್ ಅವರನ್ನು ಇಷ್ಟಪಡಲು ಪ್ರಾರಂಭಿಸಿದರು   ಅದೇ ಸಮಯದಲ್ಲಿ, ಮಧುಬಾಲಾ ಮತ್ತು ದಿಲೀಪ್ ಕುಮಾರ್ ಮೊಘಲ್-ಎ-ಅಜಮ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದರು

711

ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯಿಂದ ದಿಲೀಪ್ ಕುಮಾರ್ ಮತ್ತು ಮಧು ಸಂಬಂಧ ಮುರಿದುಬಿದ್ದಿದೆ ಎಂದು ಮಧುಬಾಲಾ ಅವರ ಸಹೋದರಿ ಮಧುರ್ ಭೂಷಣ್ ಅವರು ಹೇಳಿದ್ದಾರೆ.
 

811

ವಾಸ್ತವವಾಗಿ, ಬಿಆರ್ ಚೋಪ್ರಾ ಅವರ ನಯಾ ದೌರ್ ಚಿತ್ರದಲ್ಲಿ ದಿಲೀಪ್ ಮತ್ತು ಮಧುಬಾಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅದರ ಶೂಟಿಂಗ್ ಕೂಡ ಪ್ರಾರಂಭವಾಯಿತು, ಚಿತ್ರದ ಮುಂದಿನ ಚಿತ್ರೀಕರಣವನ್ನು ಗ್ವಾಲಿಯರ್‌ನಲ್ಲಿ ಮಾಡಬೇಕಾಗಿತ್ತು, ಆದರೆ ಮಧುಬಾಲಾ ಅವರ ತಂದೆ ತಮ್ಮ ಮಗಳನ್ನುಆ  ಪ್ರದೇಶಕ್ಕೆ ಕಳುಹಿಸಲು ನಿರಾಕರಿಸಿದರು.

911

ಈ ವಿಷಯ ಕೋರ್ಟ್ ಮೆಟ್ಟಿಲೇರಿದ್ದು, ಮಧುಬಾಲಾ ವಿರುದ್ಧ ದಿಲೀಪ್ ಕುಮಾರ್ ಹೇಳಿಕೆ ನೀಡಿದ್ದರು. ಇದು ನಟಿಯ ಹೃದಯವನ್ನು ಒಡೆಯಿತು, ನಂತರ ಇಬ್ಬರು ದೂರವಾದರು ಈ ಸಂಬಂಧದ ಜೊತೆ  ಮಧುಬಾಲಾ ಕೂಡ ಮುರಿದು ಬಿದ್ದಿದ್ದರು. 

1011

ಇದೇ ವೇಳೆ ಕಿಶೋರ್ ಕುಮಾರ್ ಅವರನ್ನು ವಿವಾಹವಾದರು. ಮಧುಬಾಲಾ 1960 ರಲ್ಲಿ 27 ನೇ ವಯಸ್ಸಿನಲ್ಲಿ ಕಿಶೋರ್ ಕುಮಾರ್ ಅವರನ್ನು ವಿವಾಹವಾದರು. ಇದಾದ ನಂತರ ಕಿಶೋರ್ ಕುಮಾರ್ ಕೂಡ ಅವರನ್ನು ಒಂಟಿಯಾಗಿ ಬಿಟ್ಟಿದ್ದರು.
 

1111

ಮಧುಬಾಲಾರ ಕೊನೆಯ ದಿನಗಳಲ್ಲಿ ಅವರ ಜೊತೆ ಯಾರೂ ಇರಲಿಲ್ಲ, ಪ್ರೀತಿಗಾಗಿ ಹಂಬಲಿಸುತ್ತಿದ್ದರು. ಪ್ರೀತಿಯ ದಿನದಂದು ಜನಿಸಿದ ಈ ಸುಂದರ ನಟಿ 23 ಫೆಬ್ರವರಿ 1969 ರಂದು ಕೇವಲ 36 ವರ್ಷ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories