ನವದೆಹಲಿ(ಜೂ. 30) ಭಾರತ ಮತ್ತು ಚೀನಾ ಗಡಿಯಲ್ಲಿನ ಸಂಘರ್ಷ, ಕಾನೂನು ಬಾಹಿರವಾಗಿ ಡೇಟಾ ಕದಿಯುತ್ತಿರುವ ಚೀನಾಕ್ಕೆ ಕೇಂದ್ರ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದೆ. ಇದನ್ನು ನಟಿ, ಕಿರುತೆರೆ ಕಲಾವಿದೆ ರಶ್ಮಿ ದೇಸಾಯಿ ಬೆಂಬಲಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಜನರ ಮುಂದೆ ಬಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಘಟನಾವಳಿಗಳು ನಿಮಗೆಲ್ಲ ಗೊತ್ತೆ ಇದೆ. ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಕಾರ್ಯನಿರ್ವಹಿಸಲು ಇದು ಸಕಾಲ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಬೆಂಬಲಿಸಿ. ದೇಶವನ್ನು ಮೊದಲು ಬೆಂಬಲಿಸಿ, ನಮ್ಮ ಸೈನ್ಯವನ್ನು ಬೆಂಬಲಿಸಿ ಎಂದು ರಶ್ಮಿ ಕೇಳಿಕೊಂಡಿದ್ದಾರೆ. ಸರ್ಕಾರ ಜನರ ಪರವಾಗಿ ನಿಂತಿದೆ, ಈ ಸಂದರ್ಭ ಜನರು ಸರ್ಕಾರದ ಪರವಾಗಿ ನಿಲ್ಲಬೇಕು ಎಂದು ಕೇಳಿಕೊಂಡಿದ್ದಾರೆ. ನಾಗಿನ್ 2 ನಟಿಯ ಮಾತಿಗೆ ನೆಟ್ಟಿಗರು ಸಹಮತ ವ್ಯಕ್ತಪಡಿಸಿದ್ದಾರೆ. TV star Rashami Desai has come out in support of the move and asked her fans to be 'responsible citizen'. ಸರ್ಕಾರದ ದಿಟ್ಟ ಕ್ರಮ ಬೆಂಬಲಿಸೋಣ, ಅಭಿಮಾನಿಗಳಿಗೆ ರಶ್ಮಿ ದೇಸಾಯಿ ಕರೆ