ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ಕರೀನಾ ಕಪೂರ್, ಸಾಯಿಪಲ್ಲವಿ, ಶೃತಿ ಹಾಸನ್.. ಯಾರಿದ್ದಾರೆ? ಚಿತ್ರತಂಡದಿಂದ ಬಂತು ಸ್ಪಷ್ಟನೆ

Published : Mar 24, 2024, 11:01 AM ISTUpdated : Mar 24, 2024, 11:02 AM IST

ಯಶ್ ಮುಂದಿನ ಚಿತ್ರ 'ಟಾಕ್ಸಿಕ್‌'ನಲ್ಲಿ ಸಾಯಿಪಲ್ಲವಿ ಇದ್ದಾರೆ, ಕರೀನಾ ಕಪೂರ್ ಇದ್ದಾರೆ ಮುಂತಾದ ಗಾಸಿಪ್‌ಗಳ ನಡುವೆಯೇ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ.  

PREV
112
ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ಕರೀನಾ ಕಪೂರ್, ಸಾಯಿಪಲ್ಲವಿ, ಶೃತಿ ಹಾಸನ್.. ಯಾರಿದ್ದಾರೆ? ಚಿತ್ರತಂಡದಿಂದ ಬಂತು ಸ್ಪಷ್ಟನೆ

ಯಶ್ ಮುಂದಿನ ಚಿತ್ರ 'ಟಾಕ್ಸಿಕ್‌'ನಲ್ಲಿ ಸಾಯಿಪಲ್ಲವಿ ಇದ್ದಾರೆ, ಕರೀನಾ ಕಪೂರ್, ಶೃತಿ ಹಾಸನ್ ಇದ್ದಾರೆ ಮುಂತಾದ ಗಾಸಿಪ್‌ಗಳು ಚಿತ್ರದ ಬಗ್ಗೆ ಜೋರಾಗಿ ಹರಿದಾಡುತ್ತಿವೆ.

212

ಸೋಷ್ಯಲ್ ಮೀಡಿಯಾದಲ್ಲಿ ಟಾಕ್ಸಿಕ್ ಚಿತ್ರತಂಡದ ಬಗ್ಗೆ ಅಂತೆ ಕಂತೆಗಳು ಹರಿದಾಡಿ ನಿರೀಕ್ಷೆ ಹೆಚ್ಚಿಸುತ್ತಿರುವ ನಡುವೆಯೇ ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ.

312
Sai Pallavi

ನಟಿಯರಾದ ಕರೀನಾ ಕಪೂರ್ ಖಾನ್, ಸಾಯಿ ಪಲ್ಲವಿ ಮತ್ತು ಶ್ರುತಿ ಹಾಸನ್  'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ಯಶ್ ಅವರೊಂದಿಗೆ ಸೇರಿದ್ದಾರೆ ಎಂಬ ಊಹಾಪೋಹಗಳಿಂದ ದೂರವಿರಲು ಚಿತ್ರದ ನಿರ್ಮಾಪಕರು ಎಲ್ಲರಿಗೂ ವಿನಂತಿಸಿದ್ದಾರೆ.

412

'ಟಾಕ್ಸಿಕ್ ಸುತ್ತಲಿನ ಉತ್ಸಾಹವನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ, ಆದರೆ ಈ ಸಮಯದಲ್ಲಿ, ಊಹಾಪೋಹಗಳಿಂದ ದೂರವಿರಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ' ಎಂದು ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

512

ಮುಂದುವರಿದು, 'ಚಿತ್ರದ ಕಾಸ್ಟಿಂಗ್ ಪ್ರಕ್ರಿಯೆಯು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ನಾವು ಹೊಂದಿರುವ ತಂಡದಿಂದ ನಾವು ರೋಮಾಂಚನಗೊಂಡಿದ್ದೇವೆ. ಈ ಕಥೆಗೆ ಜೀವ ತುಂಬಲು ನಾವು ಸಜ್ಜಾಗುತ್ತಿರುವಾಗ, ಅಧಿಕೃತ ಪ್ರಕಟಣೆಗಳಿಗಾಗಿ ಕಾಯಲು ನಾವು ಎಲ್ಲರಿಗೂ ವಿನಂತಿಸುತ್ತೇವೆ' ಎಂದವರು ಹೇಳಿದ್ದಾರೆ.

612

 ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ-ನಿರ್ಮಾಣದಲ್ಲಿ ತಯಾರಾಗುತ್ತಿರುವ ಯಶ್ ನಟನೆಯ ಟಾಕ್ಸಿಕ್ ಚಿತ್ರವು ಏಪ್ರಿಲ್ 10, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

712

ಡಿಸೆಂಬರ್ 2023 ರಲ್ಲಿ, ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊದೊಂದಿಗೆ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದ್ದರು. ಟೋಪಿ ಮತ್ತು ಬಾಯಿಯಲ್ಲಿ ಸಿಗಾರ್ ಧರಿಸಿರುವ ನಟನ ನೋಟವನ್ನು ವೀಡಿಯೊ ಬಹಿರಂಗಪಡಿಸಿತ್ತು.

812
toxic movie

ಡ್ರಗ್ಸ್ ಮಾಫಿಯಾ ಕತೆಯಾಧರಿಸಿದ ಈ ಚಿತ್ರವು ಆಕ್ಷನ್-ಆಧಾರಿತವಾಗಿದೆ ಎಂದು ಹೇಳಲಾಗಿದೆ. ಕೆಜಿಎಫ್ ಸಿನಿಮಾಗಳ ಯಶಸ್ಸಿನ ನಂತರ ನಟ ಯಶ್‌ರ ಮುಂದಿನ ಚಿತ್ರಕ್ಕಾಗಿ ದೇಶಾದ್ಯಂತ ಸಿನಿಪ್ರಿಯರು ಕಾತರರಾಗಿದ್ದಾರೆ. 

912

ಕನ್ನಡ, ಹಿಂದಿ, ತೆಲುಗು, ಮಲಯಾಳಂಗಳಲ್ಲಿ ಹೊರಬರಲಿರುವ ಯಶ್ ನಟನೆಯ 19ನೇ ಚಿತ್ರದಲ್ಲಿ ಕರೀನಾ ಇರುವುದು ಆಲ್‌ಮೋಸ್ಟ್ ಕನ್ಫರ್ಮ್ ಎಂದೇ ಹೇಳಲಾಗಿತ್ತು.

1012

ಇದಕ್ಕೆ ಕರೀನಾ,  ನಾನು ದೊಡ್ಡ ಸೌತ್ ಚಲನಚಿತ್ರವನ್ನು ಮಾಡಲಿದ್ದೇನೆ. ಈ ಚಿತ್ರವು   ಪ್ಯಾನ್-ಇಂಡಿಯಾ ಮಟ್ಟದ್ದಾಗಿದೆ. ಹಾಗಾಗಿ ನಾನು ಎಲ್ಲಿ ಶೂಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿಲ್ಲ, ಆದರೆ ದಕ್ಷಿಣದ ಚಿತ್ರವನ್ನು  ಮಾಡುತ್ತಿರುವುದು ಇದೇ ಮೊದಲ ಬಾರಿಗೆ ಎಂದು ಹೇಳಿದ್ದು ಕಾರಣವಾಗಿತ್ತು. ಜೊತೆಗೆ, ಕಾಫಿ ವಿತ್ ಕರಣ್ ಚಿತ್ರದಲ್ಲಿ ತನಗೆ ಯಶ್ ಜೊತೆ ನಟಿಸಬೇಕಿದೆ ಎಂದಿದ್ದರು. 

1112

ಇನ್ನು ಈ ನಟಿಯರಷ್ಟೇ ಅಲ್ಲದೆ, ಎನಿಮಲ್ ಬಳಿಕ ಸೆನ್ಸೇಶನ್ ಸೃಷ್ಟಿಸಿರುವ ತೃಪ್ತಿ ಡಿಮ್ರಿ, ಸತ್ಯಪ್ರೇಮ್ ಕಿ ಕತಾ ನಟಿ ಕಿಯಾರಾ ಅಡ್ವಾನಿ ಹೆಸರು ಕೂಡಾ ಟಾಕ್ಸಿ‌ಕ್‌ನೊಂದಿಗೆ ಥಳುಕು ಹಾಕಿಕೊಂಡಿದೆ.

 

1212

ಅದೇನೇ ಇರಲಿ, ಅಭಿಮಾನಿಗಳಿಗೆ ಕಾದು ನೋಡುವ ತಂತ್ರದ ಹೊರತಾಗಿ ಸಧ್ಯಕ್ಕೆ ಬೇರೆ ವಿಧಿಯಿಲ್ಲ. ಅಂದ ಹಾಗೆ, ಈ ಚಿತ್ರದಲ್ಲಿ ಯಶ್ ಜೊತೆ ಯಾವ ನಟಿ ಇರಬೇಕೆಂದು ನೀವು ಬಯಸುತ್ತೀರಿ?

Read more Photos on
click me!

Recommended Stories