ಹೊಸಪೇಟೆಯಲ್ಲಿ 'ಯುವ' ಸಂಭ್ರಮ: ಅಪ್ಪು ಹಾಡಿಗೆ ಮೊಬೈಲ್ ಟಾರ್ಚ್ ಹಾಕಿ ನಮನ ಸಲ್ಲಿಸಿದ ಅಭಿಮಾನಿಗಳು!

First Published | Mar 23, 2024, 11:59 PM IST

ಸ್ಯಾಂಡಲ್‌ವುಡ್‌ನ ಯುವರಾಜಕುಮಾರ್, ದೊಡ್ಡಮನೆಯ ಮೂರನೇ ತಲೆಮಾರಿನ ಕುಡಿ 'ಯುವ' ಸಿನಿಮಾದ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.  ಇಂದು ಹೊಸಪೇಟೆಯಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ಗ್ರೌಂಡ್‌ನಲ್ಲಿ ನಡೆದ ಯುವ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡಿದರು.

ದೊಡ್ಡತನದಲ್ಲಿ ದೊಡ್ಡವರು, ದೊಡ್ಡನೆಯ ದೊರೆಯೇ ಹಾಡಿಗೆ ಮೊಬೈಲ್ ಟಾರ್ಚ್ ಹಾಕಿ ನಮನ ಅಭಿಮಾನಿಗಳು. ಪುನೀತ್ ರಾಜ್ ಕುಮಾರರನ್ನು ನೆನೆದು ಬಾವುಕರಾದ ಅಭಿಮಾನಿಗಳು
 

ದೊಡ್ಡತನದಲ್ಲಿ ದೊಡ್ಡವರು, ದೊಡ್ಡನೆಯ ದೊರೆಯೇ ಹಾಡಿಗೆ ಮೊಬೈಲ್ ಟಾರ್ಚ್ ಹಾಕಿ ನಮನ ಅಭಿಮಾನಿಗಳು. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ನಮಸ್ಕಾರಗಳು ಎಂದು ಹೇಳುತ್ತಿದ್ದಂತೆ, ಅಪ್ಪು, ಅಪ್ಪು ಅಂತ ಕೂಗಿದ ಅಭಿಮಾನಿಗಳು. ಯುವ ಚಿತ್ರಕ್ಕೆ ಶುಭವಾಗಲಿ ಅಂತ ಮಾತು ಮುಗಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.

Tap to resize

ಅಪ್ಪು ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಹರಸಾಹಸ ಪಟ್ಟ ಪೊಲೀಸರು. ಎಲ್ಲೆಲ್ಲೂ ಅಪ್ಪು ಅಪ್ಪು ಎಂದು ಕೂಗಿದ ಅಭಿಮಾನಿಗಳು. ಅಶ್ವಿನಿ ಪುನೀತ್ ರಾಜಕುಮಾರ ಬರುತ್ತಿದ್ದಂತೆ ಮೈದಾನದಲ್ಲೆಲ್ಲ ಅಪ್ಪು ಅಪ್ಪು ಕೂಗು.

ಅಪ್ಪು, ಶಿವಣ್ಣನ ಅದ್ಭುತ ಹಾಡುಗಳ ಮೂಲಕ ಎಂಟ್ರಿ ಕೊಟ್ಟ ಯುವರಾಜ್. ಮಾರ್ಚ್ 29ಕ್ಕೆ ತೆರೆಗಪ್ಪಳಿಸಲಿರೋ ಯುವ ಸಿನಿಮಾ. ಸಂತೋಷ್ ಆನಂದ್ ರಾಮ್ ನಿರ್ದೇಶನ, ಹೊಂಬಾಳೆ ಫಿಲಂಸ್ ನಿರ್ಮಾಣದ ಯುವ ಚಿತ್ರ. ಇದೇ ಚಿತ್ರದ ಮೂಲಕ ದೊಡ್ಮನೆಯಿಂದ ಹೊಸ ಹೀರೋ ಬೆಳ್ಳಿತೆರೆಗೆ ಎಂಟಿ ಆಗುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಕಿರಿಯ ಮಗ ಯುವರಾಜ್ ಕುಮಾರ್ ನಟನೆಯ ಚೊಚ್ಚಲ ಚಿತ್ರ ಇದಾಗಿದೆ. ಯುವರಾಜ್ ಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಜೋಡಿಯಾಗಿ ನಟಿಸಿದ್ದಾರೆ. 

ಹೊಸಪೇಟೆಯ ಡಾ. ಪುನೀತ್ ರಾಜ್ ಕುಮಾರ್ ಗ್ರೌಂಡ್ ನಲ್ಲಿ  ನಡೆಯುತ್ತಿರೋ ಯುವ ಇವೆಂಟ್ ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಎಲ್ಲೆಲ್ಲೂ ಅಪ್ಪು ಅಪ್ಪು ಕೂಗು. ಫೋಟೊದೊಂದಿಗೆ ಗ್ರೌಂಡ್‌ಗೆ ಆಗಮಿಸಿದ್ದ ಅಭಿಮನಿಗಳು ಅಪ್ಪು ಕೋಟೆಯಲ್ಲಿ ಮಗ ಯುವರಾಜನ ಹವಾ ಭರ್ಜರಿಯಾಗಿತ್ತು.

Latest Videos

click me!