'ಜನನಾಯಕ' ಚಿತ್ರಕ್ಕೆ ಅನಿರುದ್ ಸಂಗೀತ ನೀಡಿದ್ದಾರೆ. ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಪ್ರಕಾಶ್ ರೈ, ಗೌತಮ್ ವಾಸುದೇವ್ ಮೆನನ್, ನರೇನ್, ಪ್ರಿಯಾಮಣಿ, ಮಮಿತಾ ಮುಂತಾದವರಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ನಿರ್ಮಾಣ ಮಾಡಿದ್ದಾರೆ.
ವಿಜಯ್ ಅವರ ನೆಚ್ಚಿನ ನಿರ್ದೇಶಕರಾದ ಲೋಕೇಶ್ ಕನಕರಾಜ್, ಅಟ್ಲಿ, ನೆಲ್ಸನ್ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಸುದ್ದಿಯೂ ವಿಜಯ್‌ರನ್ನು ಸುದ್ದಿಯಲ್ಲಿರಿಸಿದೆ.