ಮೊದಲು 'ಕಪಾಲಿ ಥಿಯೇಟರ್' ಇದ್ದ ಜಾಗದಲ್ಲಿ ಈಗ ತೆಲುಗು ಸ್ಟಾರ್ ಮಹೇಶ್ ಬಾಬು ಸಿನಿಮಾಸ್ ಶುರು..!

Published : Jan 16, 2026, 04:26 PM IST

ಬೆಂಗಳೂರಿನ ಐತಿಹಾಸಿಕ ಮೆಜೆಸ್ಟಿಕ್ ಸರ್ಕಲ್‌ನಲ್ಲಿರುವ ಕಪಾಲಿ ಥಿಯೇಟರ್‌ ಜಾಗದಲ್ಲಿ ಈಗ ದೊಡ್ಡದಾದ ಮಾಲ್‌ ಕಟ್ಟಲಾಗಿದ್ದು, ಅಲ್ಲೀಗ ಮಲ್ಟಿಪ್ಲೆಕ್ಸ್ ತಲೆ ಎತ್ತಿದೆ. ಅದರಲ್ಲಿ ತೆಲುಗು ನಟ ಮಹೇಶ್ ಬಾಬು ಒಡತನದ ಮಲ್ಟಿಫ್ಲೆಕ್ಸ್ ಶುರುವಾಗಿದೆ.

PREV
18

ಈ ಮೊದಲು ಬೆಂಗಳೂರಿನಲ್ಲಿ ಕಪಾಲಿ ಟಾಕೀಸ್ ಜಾಗದಲ್ಲಿ ತಲೆ ಎತ್ತಿದ ಮಹೇಶ್ ಬಾಬು (Mahesh Babu) ಒಡೆತನದ AMB ಸಿನಿಮಾಸ್. ಹೌದು, ತೆಲುಗು ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಒಡೆತನದ ಎಎಂಬಿ (AMB) ಸಿನಿಮಾಸ್ ಬೆಂಗಳೂರಿನಲ್ಲಿ ಭರ್ಜರಿಯಾಗಿ ತಲೆ ಎತ್ತಿದೆ.

28

ಬೆಂಗಳೂರಿನ ಐತಿಹಾಸಿಕ ಮೆಜೆಸ್ಟಿಕ್ ಸರ್ಕಲ್‌ನಲ್ಲಿರುವ ಕಪಾಲಿ ಥಿಯೇಟರ್‌ ಜಾಗದಲ್ಲಿ ಈಗ ದೊಡ್ಡದಾದ ಮಾಲ್‌ ಕಟ್ಟಲಾಗಿದ್ದು, ಅಲ್ಲೀಗ ಮಲ್ಟಿಪ್ಲೆಕ್ಸ್ ತಲೆ ಎತ್ತಿದೆ. 

38

ಅದರಲ್ಲಿ ತೆಲುಗು ನಟ ಮಹೇಶ್ ಬಾಬು ಒಡತನದ ಮಲ್ಟಿಫ್ಲೆಕ್ಸ್ ಶುರುವಾಗಿದ್ದು, ಇದು ಕಪಾಲಿ ಮಾಲ್‌ನ ಐದು ಅಂತಸ್ತುಗಳಲ್ಲಿ ಹರಡಿಕೊಂಡಿದೆ. ಈ ಮಲ್ಟಿಪ್ಲೆಕ್ಸ್‌ನಲ್ಲಿ ಒಟ್ಟು ಒಂಬತ್ತು ಸ್ಕಿನ್‌ಗಳಿವೆ.

48

ಇಲ್ಲಿರುವ ಒಟ್ಟು 9 ಸ್ಕ್ರೀನ್‌ಗಳಲ್ಲಿ 7 ಸ್ಕಿನ್‌ಗಳು ಬಾರ್ಕೋ ಲೇಸರ್ ಪ್ರೊಜೆಕ್ಷನ್ ಹೊಂದಿವೆ. ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಈ ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಮಹೇಶ್ ಬಾಬುರ ಸಿನಿಮಾಸ್ ಹೊಂದಿರುವುದು ವಿಶೇಷ.

58

ಈ AMB ಸಿನಿಮಾಸ್‌ನ 6ನೇ ಸ್ಕ್ರೀನ್ ಸ್ಪೆಷಲ್ ಆಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಪಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಡಿ ವಿಷನ್ ಪ್ರೊಜೆಕ್ಟ‌ರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಕೂಡ ಹೊಂದಿದೆ. ಪ್ರೇಕ್ಷಕರಿಗೆ ಐಷಾರಾಮಿ ಸೌಕರ್ಯ ನೀಡಲು 'ಎಂ-ಲೌಂಜ್' ಎನ್ನುವ ವಿಶೇಷ ಲೌಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

68

ಮಲ್ಟಿಪ್ಲೆಕ್ಸ್‌ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇದೆ. ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್ ಬಿರಿಯಾನಿ ಹಾಗೂ ತಿಂಡಿ-ತಿನಿಸುಗಳು ಇಲ್ಲಿ ಲಭ್ಯವಾಗಲಿದೆಯಂತೆ.

78

ಇಂದು, ಅಂದರೆ ಜನವರಿ 16ರಂದು ಸಿನಿಮಾ ವೀಕ್ಷಣೆ ಆರಂಭವಾಗಿದ್ದು, ಥಿಯೇಟರ್‌ನಲ್ಲಿ ಸಂಭ್ರಮ ಮನೆಮಾಡಿದೆ ಎನ್ನಲಾಗಿದೆ. ಮೊದಲ ದಿನ 20 ಶೋಗಳು ನಡೆಯಲಿದ್ದು, ಅದರಲ್ಲಿ 6 ಶೋಗಳು 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರಕ್ಕೆ ಮೀಸಲಾಗಿವೆ.

88

ಕನ್ನಡದ 'ಮಾರ್ಕ್' ಹಾಗೂ 'ಸೂರ್ಯ' ಚಿತ್ರಗಳಿಗೆ, ತಮಿಳಿನ ಮೂರು ಸಿನಿಮಾಗಳಿಗೆ ತಲಾ ಒಂದೊಂದು ಶೋಗಳು ಸಿಕ್ಕಿವೆ. ಮಿಕ್ಕಂತೆ ತೆಲುಗು ಸಿನಿಮಾಗಳಿಗೇ ಹೆಚ್ಚಿನ ಆದ್ಯತೆ ದೊರಕಿದ್ದು, ಟಾಲಿವುಡ್ ಸಿನಿಮಾಗಳಿಗೆ ಬಹಳಷ್ಟು ಶೋಗಳು ಸಿಕ್ಕಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories