ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ

Published : Jan 15, 2026, 05:09 PM IST

Bollywood: ಸಿನಿಮಾಗಳು ತೆರೆ ಮೇಲೆ ನೋಡೋದಕ್ಕೆ ಚೆಂದ ಕಾಣುತ್ತೆ. ಆದರೆ, ಅದರ ಹಿಂದೆ ನಟರು ಅನುಭವಿಸುವ ನೋವು, ಕಷ್ಟ ಯಾರಿಗೂ ಗೊತ್ತಾಗಲ್ಲ. ಇಲ್ಲಿದೆ ನೋಡಿ ಆಕ್ಷನ್ ಸೀಕ್ವೆನ್ಸ್ ಮಾಡಲು ಹೋಗಿ ಶೂಟಿಂಗ್ ಸೆಟ್ ನಲ್ಲಿ ಸಾವಿನ ಮನೆ ಕದ ತಟ್ಟಿ ವಾಪಾಸ್ ಬಂದ ಬಾಲಿವುಡ್ ನಟರ ಲಿಸ್ಟ್.

PREV
17
ಬಾಲಿವುಡ್ ಶೂಟಿಂಗ್ ಸೆಟ್ ಅಪಘಾತ

ಗ್ಲಾಮರ್ ಜಗತ್ತಿನಲ್ಲಿ ಎಲ್ಲವೂ ಚೆನ್ನಾಗೇ ಇದೆ ಎಂದು ಜನರು ಭಾವಿಸುತ್ತಾರೆ, ಆದರೆ ಅನೇಕ ಬಾರಿ, ಸಿನಿಮಾಕ್ಕಾಗಿ ಅಪಾಯಕಾರಿ ಆಕ್ಷನ್ಗಳನ್ನು ಮಾಡಿ ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳಿರುವ ಅನೇಕ ನಟರುಗಳಿದ್ದಾರೆ. ಯಾವೆಲ್ಲಾ ತಾರೆಯರು ಸಿನಿಮಾ ಶೂಟಿಂಗ್ ನಿಂದಾಗಿ ತಮ್ಮ ಜೀವಕ್ಕೆ ಅಪಾಯ ತಂದುಕೊಂಡಿದ್ದರು ಅನ್ನೋದನ್ನು ನೋಡೋಣ.

27
ಆಮೀರ್ ಖಾನ್

"ಆಮೀರ್ ಖಾನ್’ ತಮ್ಮ ಚಿತ್ರಗಳಲ್ಲಿ ಪರ್ಫೆಕ್ಟ್ ಆಗಿ ಕಾಣಬೇಕು ಎನ್ನುವ ಕಾರಣದಿಂದಾಗಿ, ಏನೇ ರಿಸ್ಕ್ ತೆಗೆದುಕೊಳ್ಳೋದಕ್ಕೂ ತಯಾರಾಗಿರುತ್ತಾರೆ. ಹೀಗೆ ಒಂದೆರಡು ಸಿನಿಮಾಗಳಲ್ಲಿ ಪರ್ಫೆಕ್ಟ್ ಶಾಟ್ ಗಾಗಿ ಬಿದ್ದು ಗಂಭೀರ ಗಾಯಮಾಡಿಕೊಂಡಿದ್ದರು.

37
ಅಮಿತಾಭ್ ಬಚ್ಚನ್

‘ಕೂಲಿ’ ಚಿತ್ರದ ಸೆಟ್‌ನಲ್ಲಿ ಬಿಗ್ ಬಿ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದರು. ಬಚ್ಚನ್ ಕ್ಲಿನಿಕಲೀ ಡೆಡ್ ಎಂದೇ ಸುದ್ದಿಯಾಗಿತ್ತು. ಈ ಸುದ್ದಿ ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತೆಂದರೆ ಅಭಿಮಾನಿಗಳು ಬಚ್ಚನ್ ಗಾಗಿ ಪೂಜೆ, ಉಪವಾಸ, ಪ್ರಾರ್ಥನೆಗಳನ್ನು ಮಾಡಿದ್ದರು. ಡಾ. ರಾಜಕುಮಾರ್ ಸಹ ಅಮಿತಾಬ್ ಬಚ್ಚನ್ ಚೇತರಿಕೆಗಾಗಿ ಪೂಜೆ ಮಾಡಿಸಿದ್ದರು.

47
ಆಲಿಯಾ ಭಟ್

ಆಲಿಯಾ ಹೆಚ್ಚಾಗಿ ರೋಮ್ಯಾಂಟಿಕ್ ಹಾಸ್ಯ ಚಿತ್ರಗಳನ್ನು ಮಾಡಿದ್ದರೂ, ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಆಕ್ಷನ್ ಮಾಡುವ ಸಮಯದಲ್ಲಿ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದರು, ಅಲ್ಲದೇ ‘ಕಳಂಕ್’ ಸಿನಿಮಾ ಶೂಟಿಂಗ್ ವೇಳೆ ಕಾಲಿನ ಮೂಳೆ ಮುರಿದುಕೊಂಡಿದ್ದರು.

57
ಸೈಫ್ ಅಲಿ ಖಾನ್

ಸೈಫ್ ಆಲಿ ಖಾನ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವಾರು ಆಕ್ಷನ್ ಚಲನಚಿತ್ರಗಳನ್ನು ಮಾಡಿದರು. ‘ಕ್ಯಾ ಕೆಹ್ನಾ’ ಸಿನಿಮಾದಲ್ಲಿ ಬೈಕ್ ರೇಸ್ ಶೂಟಿಂಗ್ ವೇಳೆ, ಆಯಾ ತಪ್ಪಿ ಬೈಕ್ ಎತ್ತರದಿಂದ ಬಿದ್ದಿದ್ದು, ಹಲವಾರು ಅಡಿಗಳಷ್ಟು ಕೆಳಗೆ ಬಿದ್ದ ಸೈಫ್ ಕೊನೆಗೆ ಬಂಡೆ ಕಲ್ಲಿಗೆ ಹೋಗಿ ಬಡಿದುಕೊಂಡಿದ್ದರಿಂದ ತಲೆಗೆ ಗಾಯವಾಗಿ 100 ಸ್ಟಿಚ್ ಹಾಕಬೇಕಾಗಿ ಬಂದಿತ್ತು. ಇದಲ್ಲದೇ ರಂಗೂನ್, ಕಾಲಾಕಂಡಿ, ದೇವರಾ ಸಿನಿಮಾ ಶೂಟಿಂಗ್ ವೇಳೆ ಸಹ ಗಾಯಗೊಂಡಿದ್ದರು.

67
ಹೃತಿಕ್ ರೋಷನ್

ಕ್ರಿಶ್ ಸರಣಿಯ ಸಮಯದಲ್ಲಿ ಹೃತಿಕ್ ರೋಷನ್ ಒಮ್ಮೆ ಗಂಭೀರವಾಗಿ ಗಾಯಗೊಂಡಿದ್ದರು. ಸೇಫ್ಟಿ ಕೇಬಲ್ ಬಿಚ್ಚಿಕೊಂಡು ಹೃತಿಕ್ ಅಂಗಡಿಯ ಮೇಲೆ ಬಿದ್ದಿದ್ದರು. ಕೆಳಗೆ ಬಿದ್ದಿದ್ದರೆ ಸತ್ತೆ ಹೋಗುತ್ತಿದ್ದರು ಎನ್ನಲಾಗಿತ್ತು. ಇದಲ್ಲದೇ ಕೈಟ್ಸ್ ಸಿನಿಮಾ ಶೂಟಿಂಗ್ ವೇಳೆ ಕೂಡ ಮಣಿಕಟ್ಟಿಗೆ ಗಾಯವಾಗಿತ್ತು. ಬ್ಯಾಂಗ್ ಬ್ಯಾಂಗ್ ಸಿನಿಮಾ ಶೂಟಿಂಗ್ ವೇಳೆ ತಲೆಗೆ ಗಾಯಗೊಂಡಿದ್ದರು.

77
ಜಾನ್ ಅಬ್ರಹಾಂ

ಜಾನ್ ಅಬ್ರಹಾಂ ಒಬ್ಬ ಆಕ್ಷನ್ ಹೀರೋ ಮತ್ತು ಶೂಟಿಂಗ್ ಸೆಟ್‌ಗಳಲ್ಲಿ ಹಲವು ಬಾರಿ ಗಾಯಗೊಂಡಿದ್ದಾರೆ. ‘ಪಾಗಲ್ ಪಂತಿ’ ಸಿನಿಮಾ ಶೂಟಿಂಗ್ ವೇಳೆ ಮಸಲ್ ಟಿಯರ್, ‘ಅಟ್ಯಾಕ್’ ಶೂಟಿಂಗ್ ವೇಳೆ ಮುಖದ ಮೇಲೆ ಗಾಜು ಹೊಡೆದು ಗಾಯ, ‘ಫೋರ್ಸ್ 2’ ಸಿನಿಮಾ ಶೂಟಿಂಗ್ ವೇಳೆ ಟ್ರೈನ್ ನಿಂದ ಬಿದ್ದು ಬೆನ್ನು ಮೂಳೆಯಲ್ಲಿ ಗಂಭೀರ ಗಾಯಮಾಡಿಕೊಂಡಿದ್ದರು. ‘ವೆಲ್ಕಂ ಬ್ಯಾಕ್’ ಶೂಟಿಂಗ್ ವೇಳೆ ತಲೆಗೆ ಗಾಯಮಾಡಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories