ಪುಷ್ಪಾ 2 ಚಿತ್ರದ ಐಟಂ ಹಾಡಿಗೆ ಸೊಂಟ ಬಳಕಿಸೋದಕ್ಕೆ ನಿಮಿಷಕ್ಕೆ 1.5 ಕೋಟಿ ಚಾರ್ಜ್ ಮಾಡಿದ ಬಾಲಿವುಡ್ ಬೆಡಗಿ!

First Published | Oct 27, 2024, 10:28 PM IST

ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಚಿತ್ರದಲ್ಲಿ ಶ್ರದ್ಧಾ ಕಪೂರ್ ಐಟಂ ಹಾಡಿಗೆ ಸೊಂಟ ಬಳುಕಿಸೋದು ದೃಢವಾಗಿದೆ. ವರದಿಗಳ ಪ್ರಕಾರ, ಶ್ರದ್ಧಾ 4 ನಿಮಿಷಗಳ ಹಾಡಿಗೆ ಬರೋಬ್ಬರಿ 5 ಕೋಟಿ ರೂ.ಗಳ ಚಾರ್ಜ್ ಮಾಡಲಾಗಿದೆ ಎನ್ನುವ ಸುದ್ದಿ ಕೂಡ ಕೇಳಿ ಬರ್ತಿದೆ. 
 

ಅಲ್ಲು ಅರ್ಜುನ್ (Allu Arjun) ಅಭಿನಯದ 'ಪುಷ್ಪ 2: ದಿ ರೂಲ್' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ ಬಿಡುಗಡೆಯಾಗೋದಕ್ಕೆ 50 ದಿನಗಳೂ ಕೂಡ ಉಳಿದಿಲ್ಲ. ಈ ಚಿತ್ರವನ್ನು ದೊಡ್ಡದಾಗಿ ಮಾಡಲು ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ಸಹಾಸ ಮಾಡ್ತಿದ್ದಾರೆ. ಅದಕ್ಕಾಗಿ ಬಾಲಿವುಡ್ ನ ಬ್ಲಾಕ್ಬಸ್ಟರ್ 'ಸ್ತ್ರೀ 2' ಚಿತ್ರದ ಯಶಸ್ಸಿನಲ್ಲಿ ತೇಲಾಡ್ತಿರೋ ನಟಿ ಶ್ರದ್ಧಾ ಕಪೂರ್ ಅವರನ್ನ ಚಿತ್ರಕ್ಕೆ ಬರಮಾಡಿಕೊಂಡಿದೆ ಎನ್ನಲಾಗುತ್ತಿದೆ. 
 

ಹೌದು ಶ್ರದ್ಧಾ ಕಪೂರ್ ಅವರು 'ಪುಷ್ಪ 2' (Pushpa 2)ಚಿತ್ರದಲ್ಲಿ ಐಟಂ ಸಾಂಗ್ ಮಾಡಲು ಹೊರಟಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ. 'ಪುಷ್ಪ' ಚಿತ್ರದ ಮೊದಲ ಭಾಗದಲ್ಲಿ ಸಮಂತಾ ರುತ್ ಪ್ರಭು ಊ ಅಂಟವಾ ಮಾಮ ಊಹೂ ಅಂಟಾವ ಎಂದು ಹಾಡುತ್ತಾ, ಸೊಂಟ ಬಳುಕಿಸಿದ್ದು, ಇದೀಗ ಪುಷ್ಪ 2 ನಲ್ಲಿ ಶ್ರದ್ಧಾ ಕಪೂರ್ ಮತ್ತೊಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. 

Tap to resize

ಅಷ್ಟೇ ಅಲ್ಲ, ಶ್ರದ್ಧಾ ಕಪೂರ್ ಅವರ ಸಂಭಾವನೆಯ ಬಗ್ಗೆಯೂ ಮಾಹಿತಿ ಬಹಿರಂಗವಾಗಿದೆ. ವರದಿಗಳ ಪ್ರಕಾರ, 'ಪುಷ್ಪ 2' ಚಿತ್ರದ ಐಟಂ ಹಾಡಿಗೆ ಶ್ರದ್ಧಾ ಕಪೂರ್ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. 'ಪುಷ್ಪ' ಚಿತ್ರದ ಮೊದಲ ಭಾಗದಲ್ಲಿ ಸಮಂತಾ ರುತ್ ಪ್ರಭು (Samantha Rith Prabhu) ಅವರ ಐಟಂ ನಂಬರ್ 'ಊ ಅಂಟಾವ’ ಹಾಡಿನ ಅವಧಿ 3.49 ನಿಮಿಷಗಳಾಗಿತ್ತು. 

'ಪುಷ್ಪ 2' ಚಿತ್ರದಲ್ಲಿ ಶ್ರದ್ಧಾ ಕಪೂರ್ (Shraddha Kapoor) ಐಟಂ ಸಾಂಗ್ ಕೂಡ ಇದೇ ಅವಧಿಯದ್ದಾಗಿರುತ್ತದೆ ಎನ್ನಲಾಗುತ್ತಿದೆ. ಇದು ನಿಜವಾಗಿದ್ದು, ಶ್ರದ್ಧಾ 5 ಕೋಟಿ ಪಡೆಯುತ್ತಿರೋದು ಕೂಡ ನಿಜವಾಗಿದ್ದರೆ, ಅವರು 'ಪುಷ್ಪ 2' ಗಾಗಿ ನಿಮಿಷಕ್ಕೆ 1.5 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
 

ವರದಿಗಳ ಪ್ರಕಾರ, ದಿಶಾ ಪಟಾನಿ ಅಥವಾ ತ್ರಿಪ್ತಿ ಡಿಮ್ರಿ (Tripthi Dimri) ಅವರನ್ನು ಈ ಹಿಂದೆ 'ಪುಷ್ಪಾ 2: ದಿ ರೂಲ್' ಐಟಂ ಹಾಡಿಗೆ ಆಯ್ಕೆ ಮಾಡುವ ಯೋಚನೆ ಇತ್ತು. ಆದರೆ ಕೊನೆಯದಾಗಿ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡಲಾಯಿತು. ಶ್ರದ್ಧಾ ಅವರ ದೊಡ್ಡದಾದ ಅಭಿಮಾನಿ ಬಳಗ ಮತ್ತು ಅವರ ಇತ್ತೀಚಿನ ಚಿತ್ರ 'ಸ್ತ್ರೀ 2' ಯಶಸ್ಸಿನಿಂದಾಗಿ ಸಿನಿಮಾ ತಂಡ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
 

ಸುಕುಮಾರ್ ನಿರ್ದೇಶನದ 'ಪುಷ್ಪ 2: ದಿ ರೂಲ್' ಡಿಸೆಂಬರ್ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಜಿಲ್, ಪ್ರಕಾಶ್ ರಾಜ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ಸುನಿಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 
 

ಸುದ್ದಿಯ ಪ್ರಕಾರ, ಈ ಚಿತ್ರವನ್ನು 500 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗಿದೆ ಮತ್ತು ಬಿಡುಗಡೆಗೆ ಮೊದಲು ಥಿಯೇಟ್ರಿಕಲ್ ಮತ್ತು ನಾನ್ ಥಿಯೇಟ್ರಿಕಲ್ ಹಕ್ಕುಗಳಿಂದ ಈಗಾಗಲೇ 1085 ಕೋಟಿ ರೂ.ಗಳನ್ನು ಗಳಿಸಿದೆ ಎನ್ನುವ ಸುದ್ದಿಯೂ ಬಂದಿದೆ. 
 

Latest Videos

click me!