ಪ್ರಿಯಾಂಕಾ ಚೋಪ್ರಾ ಕಣ್ಣಾಲಿಗಳು ಇಂದಿಗೂ ಒದ್ದೆಯಾಗೋದು ಆ ಒಬ್ಬರಿಗಾಗಿ ಮಾತ್ರ.. ನಿಕ್ ಅಲ್ಲ, ಇನ್ಯಾರು ಗೊತ್ತಾ?

Published : Jun 09, 2026, 09:52 PM IST

"ಯಾರಿಗೂ ಹೆದರಬೇಡ, ನೀನು ಇರುವ ಜಾಗದಲ್ಲಿ ನೀನೇ ಅತಿ ಹೆಚ್ಚು ಧೈರ್ಯಶಾಲಿ (Fierce) ಆಗಿರು ಎಂದು ಅಪ್ಪ ಹೇಳುತ್ತಿದ್ದರು. ಗಂಡಸರು ಮಹತ್ವಾಕಾಂಕ್ಷಿಗಳಾಗಿದ್ದರೆ ಅವರನ್ನು 'ಬಾಸ್' ಎನ್ನುತ್ತಾರೆ, ಆದರೆ ಹೆಣ್ಣುಮಕ್ಕಳು ಹಾಗಿದ್ದರೆ ಸಮಾಜ ಬೇರೆಯದೇ ದೃಷ್ಟಿಯಲ್ಲಿ ನೋಡುತ್ತದೆ.

PREV
18

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಕಣ್ಣಾಲಿಗಳು ಇಂದಿಗೂ ಒದ್ದೆಯಾಗೋದು ಆ ಒಬ್ಬರಿಗಾಗಿ!

ಪ್ರಿಯಾಂಕಾ ಚೋಪ್ರಾ... ಇಂದು ಈ ಹೆಸರೇ ಒಂದು ಬ್ರ್ಯಾಂಡ್. ಬಾಲಿವುಡ್‌ನಿಂದ ಹಾಲಿವುಡ್‌ವರೆಗೂ ತನ್ನ ನಟನಾ ಕೌಶಲ್ಯದಿಂದ ಜಗತ್ತನ್ನೇ ಗೆದ್ದಿರುವ ಭಾರತೀಯ ನಟಿ, ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ತಂದೆಯ ಪಾಲಿಗೆ ಇಂದಿಗೂ ಆ ಮುದ್ದಾದ 'ಡ್ಯಾಡೀಸ್ ಲಿಟಲ್ ಗರ್ಲ್'. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಿಯಾಂಕಾ (Priyanka Chopra) ತಮ್ಮ ದಿವಂಗತ ತಂದೆ ಅಶೋಕ್ ಚೋಪ್ರಾ ಅವರ ಬಗ್ಗೆ ಆಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಪ್ಪನ ನೆನಪಿನಲ್ಲಿ ಪ್ರಿಯಾಂಕಾ ಭಾವುಕರಾದ ಕ್ಷಣಗಳು ಇಲ್ಲಿವೆ.

28

"ನನ್ನ ಸಕ್ಸಸ್‌ಗೆ ಅವರೇ ದೊಡ್ಡ ಶಕ್ತಿ"

ಪ್ರಿಯಾಂಕಾ ಚೋಪ್ರಾ ತಮ್ಮ ತಂದೆಯೊಂದಿಗೆ ಹೊಂದಿದ್ದ ಬಂಧ ಎಂತಹದ್ದು ಎಂಬುದು ಅವರ ಕೈ ಮೇಲಿರುವ 'Daddy’s lil girl' ಎಂಬ ಟ್ಯಾಟೂ ನೋಡಿದರೇ ತಿಳಿಯುತ್ತದೆ. "ನನ್ನ ತಂದೆ ನನ್ನ ಅತಿದೊಡ್ಡ ಚಿಯರ್ ಲೀಡರ್ ಆಗಿದ್ದರು. ಯಾವುದಾದರೂ ಕಾರ್ಯಕ್ರಮವಿದ್ದರೆ ಇಡೀ ಸಭಾಂಗಣದಲ್ಲಿ ಅತಿ ಹೆಚ್ಚು ಶಬ್ದ ಮಾಡುತ್ತಾ ನನಗೆ ಪ್ರೋತ್ಸಾಹ ನೀಡುತ್ತಿದ್ದ ವ್ಯಕ್ತಿ ಅವರೇ. ನಾನು ಪ್ರಶಸ್ತಿ ಗೆದ್ದಾಗ ಅವರ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಅವರು ಹೋದ ಮೇಲೆ ನನ್ನ ಚಿಯರ್ ಲೀಡರ್ ಗ್ಯಾಂಗ್‌ನಲ್ಲಿ ಒಂದು ದೊಡ್ಡ ಮೌನ ಆವರಿಸಿದೆ" ಎಂದು ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.

38

ನಿಕ್ ಜೋನಸ್ ಬಗ್ಗೆ ಅಪ್ಪನ ಅಭಿಪ್ರಾಯ ಏನಾಗಿರುತ್ತಿತ್ತು?

ಪ್ರಿಯಾಂಕಾ ಅವರ ಪತಿ, ಖ್ಯಾತ ಗಾಯಕ ನಿಕ್ ಜೋನಸ್ ಮತ್ತು ಅಶೋಕ್ ಚೋಪ್ರಾ ಅವರ ನಡುವೆ ಒಂದು ಸಾಮ್ಯತೆ ಇದೆ. "ನಿಕ್ ಜೋನಸ್ ಅಪ್ಪಚ್ಚಿ ನನಗಾಗಿ ಹುಡುಕುತ್ತಿದ್ದಂತಹ ವ್ಯಕ್ತಿ. ನನ್ನ ತಂದೆಗೆ ಸಂಗೀತವೆಂದರೆ ಪ್ರಾಣ. ಅವರು ಸಂಗೀತವನ್ನು ಆರಾಧಿಸುತ್ತಿದ್ದರು.

48

ನಿಕ್ ಕೂಡ ಅದ್ಭುತ ಸಂಗೀತಗಾರ ಮತ್ತು ಬುದ್ಧಿವಂತ ವ್ಯಕ್ತಿ. ಒಂದು ವೇಳೆ ಅಪ್ಪ ಇಂದು ಜೀವಂತವಾಗಿದ್ದರೆ, ನಿಕ್‌ನನ್ನು ಕಂಡು ಖಂಡಿತ ಹೆಮ್ಮೆ ಪಡುತ್ತಿದ್ದರು ಮತ್ತು ಅವರೇ ಮುಂದೆ ನಿಂತು ಈ ಸಂಬಂಧವನ್ನು ಬೆಳೆಸುತ್ತಿದ್ದರು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

58

ಮದುವೆಯ ಹೊತ್ತಲ್ಲಿ ಕಾಡಿದ ಅಪ್ಪನ ನೆನಪು:

'ದಿ ಸ್ಕೈ ಈಸ್ ಪಿಂಕ್' ಸಿನಿಮಾದ ಶೂಟಿಂಗ್ ಸಮಯದಲ್ಲಿ ಪ್ರಿಯಾಂಕಾ ತಮ್ಮ ಮದುವೆಯ ತಯಾರಿಯಲ್ಲಿದ್ದರು. ಆ ಸಂದರ್ಭದಲ್ಲಿ ಅವರಿಗೆ ತಂದೆಯ ಅನುಪಸ್ಥಿತಿ ತುಂಬಾ ಕಾಡಿತಂತೆ. "ನನ್ನ ಮದುವೆಯಲ್ಲಿ ನಾನು ಸೂಟ್ ಹಾಕಿಕೊಳ್ಳಬೇಕು ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ಆದರೆ ಮದುವೆಯ ಸಮಯದಲ್ಲಿ ಅಮ್ಮ ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತಿರುವುದನ್ನು ಕಂಡು ನನಗೆ ಸಂಕಟವಾಯಿತು. ಈ ಸಿನಿಮಾದ ಕಥೆ ನನ್ನ ವೈಯಕ್ತಿಕ ನೋವಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿತು" ಎಂದಿದ್ದಾರೆ ಪ್ರಿಯಾಂಕಾ.

68

ಧೈರ್ಯದ ಪಾಠ ಹೇಳಿಕೊಟ್ಟ ತಂದೆ:

ಸಮಾಜದಲ್ಲಿ ಹೆಣ್ಣುಮಕ್ಕಳು ಧೈರ್ಯಶಾಲಿಗಳಾಗಿದ್ದರೆ ಅವರನ್ನು 'ಅತಿರೇಕದ ಹುಡುಗಿ' ಎಂದು ಕರೆಯಲಾಗುತ್ತದೆ. ಆದರೆ ಅಶೋಕ್ ಚೋಪ್ರಾ ಮಗಳಿಗೆ ಹೇಳಿಕೊಟ್ಟಿದ್ದೇ ಬೇರೆ. "ಯಾರಿಗೂ ಹೆದರಬೇಡ, ನೀನು ಇರುವ ಜಾಗದಲ್ಲಿ ನೀನೇ ಅತಿ ಹೆಚ್ಚು ಧೈರ್ಯಶಾಲಿ (Fierce) ಆಗಿರು ಎಂದು ಅಪ್ಪ ಹೇಳುತ್ತಿದ್ದರು. ಗಂಡಸರು ಮಹತ್ವಾಕಾಂಕ್ಷಿಗಳಾಗಿದ್ದರೆ ಅವರನ್ನು 'ಬಾಸ್' ಎನ್ನುತ್ತಾರೆ, ಆದರೆ ಹೆಣ್ಣುಮಕ್ಕಳು ಹಾಗಿದ್ದರೆ ಸಮಾಜ ಬೇರೆಯದೇ ದೃಷ್ಟಿಯಲ್ಲಿ ನೋಡುತ್ತದೆ. ಇದನ್ನು ಎದುರಿಸುವ ಶಕ್ತಿ ನನಗೆ ನನ್ನ ತಂದೆಯಿಂದಲೇ ಸಿಕ್ಕಿದೆ" ಎಂದು ಅವರು ಹೇಳಿದ್ದಾರೆ.

78

ಆ ಟ್ಯಾಟೂ ಹಿಂದೆ ಇತ್ತು ಒಂದು 'ಸಿಹಿ ಸುಳ್ಳು'!

ತನ್ನ ತಂದೆಯ ಕೈಬರಹದಲ್ಲೇ ಟ್ಯಾಟೂ ಇರಬೇಕೆಂದು ಬಯಸಿದ್ದ ಪ್ರಿಯಾಂಕಾ, ಅದಕ್ಕಾಗಿ ಅಪ್ಪನಿಗೆ ಒಂದು ಸುಳ್ಳು ಹೇಳಿದ್ದರಂತೆ! "ನನ್ನ ಮ್ಯೂಸಿಕ್ ಆಲ್ಬಂನ ಕವರ್ ಪೇಜ್‌ಗಾಗಿ ನಿಮ್ಮ ಕೈಬರಹ ಬೇಕು ಎಂದು ಹೇಳಿ ಅವರಿಂದ ಬರೆಸಿಕೊಂಡೆ. ಅದೇ ಇಂದು ನನ್ನ ಕೈ ಮೇಲೆ ಶಾಶ್ವತವಾಗಿ ಅಚ್ಚೊತ್ತಿದೆ" ಎಂದು ಆ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

88

ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಅಶೋಕ್ ಚೋಪ್ರಾ ಅವರು 2013 ರಲ್ಲಿ ಕ್ಯಾನ್ಸರ್‌ನಿಂದಾಗಿ ಇಹಲೋಕ ತ್ಯಜಿಸಿದರು. ಅಪ್ಪ ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ಪ್ರಿಯಾಂಕಾ, ಇಂದು ಜಾಗತಿಕ ಮಟ್ಟದಲ್ಲಿ ತಂದೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories