ನನಗೆ ನನ್ನ ಗಂಡನ ಮೇಲೆ ಅವಲಂಬಿತವಾಗಿ ಬದುಕುವುದು ಇಷ್ಟ. ಅವರಿಗಾಗಿ ಅಡುಗೆ ಮಾಡುವುದು, ಹಣಕ್ಕಾಗಿ ಅವರನ್ನು ಅವಲಂಬಿಸುವುದು ನನ್ನ 'ಫ್ಯಾಂಟಸಿ' ಎಂದು ನಟಿ ಸ್ವಾಸಿಕಾ ವಿಜಯ್ ಹೇಳಿದ್ದಾರೆ. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಟಿವಿ ಸೀರಿಯಲ್‌ಗಳ ಮೂಲಕ ಮೀಡಿಯಾ ಜಗತ್ತಿಗೆ ಕಾಲಿಟ್ಟ ಸ್ವಾಸಿಕಾ, ನಂತರ ಸಿನಿಮಾದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡರು. ಇತ್ತೀಚೆಗೆ ಇವರ ಮದುವೆಯಾಗಿತ್ತು. ಆಗ, ಪ್ರತಿದಿನ ಬೆಳಿಗ್ಗೆ ಗಂಡನ ಕಾಲಿಗೆ ನಮಸ್ಕರಿಸುವುದಾಗಿ ಹೇಳಿದ್ದು ಮಲಯಾಳಂನಲ್ಲಿ ಭಾರಿ ಟ್ರೋಲ್‌ಗೆ ಕಾರಣವಾಗಿತ್ತು. ಈಗ, ತಮಿಳು ಸಂದರ್ಶನವೊಂದರಲ್ಲಿ ಗಂಡನ ಬಗ್ಗೆ ಅವರು ನೀಡಿರುವ ಹೇಳಿಕೆ ಮತ್ತೆ ಚರ್ಚೆಗೆ ಬಂದಿದೆ.
24
ಗಂಡನಿಗೆ ಫೋನ್ ಬಿಲ್ ಕಟ್ಟು ಎಂದು ಹೇಳ್ತೀನಿ
ಮಲಯಾಳಂ ಸಂದರ್ಶನಗಳಲ್ಲಿ ಈ ರೀತಿ ಹೇಳಿ ನಾನು ಸಾಕಷ್ಟು ಟ್ರೋಲ್ ಆಗಿದ್ದೇನೆ. ಈಗ ತಮಿಳಿನಲ್ಲೂ ಹೇಳಿ ಟ್ರೋಲ್ ಆಗೋಣ ಅಂದ್ಕೊಂಡಿದ್ದೀನಿ. ನಾನು ಮನೆಯಲ್ಲಿದ್ದರೆ, ನನ್ನ ಗಂಡನಿಗೆ ನಾನೇ ಅಡುಗೆ ಮಾಡಿ, ಪಾತ್ರೆ ತೊಳೆದು, ಆಮೇಲೆ ಊಟ ಮಾಡುವುದು ನನಗೆ ತುಂಬಾ ಇಷ್ಟ. ನನ್ನ ಬಳಿ ಬ್ಯಾಂಕ್ ಬ್ಯಾಲೆನ್ಸ್ ಇದೆ. ಆದರೂ, ನನ್ನ ಫೋನ್ ಬಿಲ್ ಕಟ್ಟಲು ಗಂಡನಿಗೇ ಹೇಳುತ್ತೇನೆ.
34
ಹಣ ಇದ್ದರೂ ಗಂಡನ ಬಳಿ ಕೇಳ್ತೀನಿ
ನನಗೆ ಹಣ ಬೇಕೆಂದರೂ ಅವರ ಬಳಿಯೇ ಕೇಳುತ್ತೇನೆ. ನನ್ನ ಬಳಿ ಹಣವಿದ್ದರೂ, ಕಳುಹಿಸಲು ಹೇಳುತ್ತೇನೆ. ಬಹುಶಃ ಇದೆಲ್ಲಾ ನನ್ನ ಫ್ಯಾಂಟಸಿ ಇರಬಹುದು. ಆದರೆ ನನಗೆ ಇದು ಇಷ್ಟವಾಗಿದೆ. ಎಲ್ಲರೂ ಹೀಗೆ ಬದುಕಬೇಕು ಎಂದು ನಾನು ಹೇಳುವುದಿಲ್ಲ. 9ನೇ ವಯಸ್ಸಿನಿಂದ ದುಡಿಯಲು ಆರಂಭಿಸಿದೆ. ಈಗ ಅದೆಲ್ಲಾ ಬೋರ್ ಹೊಡೆಯುತ್ತಿದೆ. ನನಗೆ ಏನಾದರೂ ಬೇಕೆಂದರೆ ಗಂಡನ ಬಳಿಯೇ ಕೇಳುತ್ತೇನೆ. ಗಂಡನ ಮೇಲೆ ಅವಲಂಬಿತವಾಗಿರುವುದು ನನಗೆ ಖುಷಿ ಕೊಡುತ್ತಿದೆ. ಆ ಫ್ಯಾಂಟಸಿಯನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ," ಎಂದು ಸ್ವಾಸಿಕಾ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆದ ನಂತರ, ಹಲವರು ಕಾಮೆಂಟ್ ಮಾಡಿದ್ದಾರೆ. ತಮಿಳುನಾಡಿನ ಅಭಿಮಾನಿಗಳು, 'ಇದರಲ್ಲಿ ಟ್ರೋಲ್ ಮಾಡಲು ಏನಿದೆ? ಹಲವು ಮಹಿಳೆಯರಿಗೆ ಇದೆಲ್ಲಾ ಇಷ್ಟವಾಗುತ್ತದೆ' ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಇದನ್ನು ನೋಡಿದ ಮಲಯಾಳಂ ಅಭಿಮಾನಿಗಳು, 'ಮಲಯಾಳಂ ಸಂದರ್ಶನದಲ್ಲಿ ಅವರು ಹೀಗೆ ಹೇಳಿರಲಿಲ್ಲ. ಅದಕ್ಕಾಗಿಯೇ ಅವರನ್ನು ಎಲ್ಲರೂ ಟ್ರೋಲ್ ಮಾಡಿದ್ದು. ಈಗ ಕಥೆ ಬದಲಿಸಿ ಹೀಗೆ ಮಾತನಾಡುತ್ತಿದ್ದಾರೆ', 'ಆಗ ಹೇಳಿದ್ದು ಇದಲ್ಲ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.