Bollywood Love Story: ದಿಶಾ ಪಟಾನಿ ಜೊತೆ ಟೈಗರ್ ಶ್ರಾಫ್ ಪ್ರೇಮ್ ಕಹಾನಿ!

Suvarna News   | Asianet News
Published : Mar 02, 2022, 07:18 PM IST

ಬಾಲಿವುಡ್ ನಟರಾದ ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ ಪಟಾನಿ (Disha Patani) ಕೆಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳಿವೆ. ಅವರು ಆಗಾಗ್ಗೆ ಒಟ್ಟಿಗೆ ಗುರುತಿಸಲ್ಪಡುತ್ತಾರೆ, ಪರಸ್ಪರ ಒಟ್ಟಿಗೆ ಸಮಯ ಕಳೆಯುತ್ತಾರೆ. ಆದರೆ ಈ ವರಗೂ ಇಬ್ಬರೂ ಈ ಬಗ್ಗೆ ಮೌನ ಮುರಿದಿಲ್ಲ. ಇಲ್ಲಿದೆ ಈ ರೂಮರ್ಡ್‌ ಜೋಡಿಯ ಲವ್‌ ಸ್ಟೋರಿ ವಿವರ.

PREV
17
Bollywood Love Story: ದಿಶಾ ಪಟಾನಿ ಜೊತೆ ಟೈಗರ್ ಶ್ರಾಫ್  ಪ್ರೇಮ್ ಕಹಾನಿ!

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಆಗೊಮ್ಮೆ ಈಗೊಮ್ಮೆ ಒಟ್ಟಿಗೆ ಸಿಕ್ರೇಟ್‌ ಆಗಿ ವೆಕೇಷನ್‌ (Vacation) ಎಂಜಾಯ್‌ ಮಾಡುವ ಸುದ್ದಿಗಳು ಬಂದಿವೆ. ಅಷ್ಟೇ ಅಲ್ಲ  ಅವರು ಡಿನ್ನರ್ ಡೇಟ್‌ಗಳಲ್ಲಿ (Dinner Dates) ಪಾರ್ಟಿಗಳು, ಚಲನಚಿತ್ರ ಪ್ರದರ್ಶನಗಳು ಮತ್ತು ಹಲವು ಕಡೆ ಇಬ್ಬರೂ ಒಟ್ಟಿಗೆ ಹೋಗುವುದನ್ನು ಸಹ ಕಾಣಬಹುದು. ಅವರು ಬಾಲಿವುಡ್‌ನ  ಮೋಸ್ಟ್‌ ರೂಮರ್ಡ್‌ (Most Rumored couple of Bollywood) ಜೋಡಿಗಳಲ್ಲಿ ಒಬ್ಬರು. 


 

27

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ (Dish Patani) ಅವರು ಯಾವಾಗಲೂ 'ಒಳ್ಳೆಯ ಸ್ನೇಹಿತರು' (Best Friends) ಎಂದು ಹೇಳಿದ್ದಾರೆ. ಆದಾಗ್ಯೂ, ಗಾಸಿಪ್‌ಗಳು (Gossips)  ಅವರು ಕೇವಲ ಸ್ನೇಹಿತರಾಗುವುದಕ್ಕಿಂತ ಹೆಚ್ಚಿನವರು ಎಂದು ಹೇಳುತ್ತವೆ. ಅವರ ಫ್ಯಾನ್ಸ್‌ (Fans) ಮತ್ತು ಫಾಲೋವರ್ಸ್‌ (Followers) ಸಹ ಇಬ್ಬರಿಬ್ಬರ  ನಡುವೆ ಫ್ರೆಂಡ್‌ಶಿಪ್‌ಗಿಂತ ಹೆಚ್ಚಿನದು ನಡೆಯುತ್ತಿದೆ ಎಂದು ನಂಬುತ್ತಾರೆ.


 

37

ಮಾಲ್ಡೀವ್ಸ್‌ (Maldives) ಹಾಲಿಡೇಯಾಗಿರಲಿ ಅಥವಾ ಮುಂಬೈನಲ್ಲಿ (Mumbai) ಡಿನ್ನರ್‌ ಡೇಟ್‌ಗಳಾಗಿರಲಿ ಅಥವಾ ಚಲನಚಿತ್ರ ಪ್ರದರ್ಶನಗಳಿರಲಿ, ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಪರಸ್ಪರ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಮತ್ತು ಜೊತೆಯಾಗಿ ಸಮಯ ಕಳೆಯುವುದನ್ನು ಹೆಚ್ಚಾಗಿ ಕಾಣಬಹುದು. ಇದು ರೂಮರ್‌ಗಳಿಗೆ (Rumor) ತುಪ್ಪ ಸುರಿದ ಹಾಗೇ ಆಗಿದೆ.

47

ಅವರ ಡಿನ್ನರ್‌ ಡೇಟ್‌ಗಳ ಬಗ್ಗೆ ಹೇಳುವುದಾದರೆ, ಆರಂಭಿಕ ದಿನಗಳಲ್ಲಿ, ಟೈಗರ್ ಶ್ರಾಫ್ ಅವರು ಊಟಕ್ಕೆ ಹೋದಾಗಲೆಲ್ಲಾ ಬಿಲ್ ಅನ್ನು ಪಾವತಿಸುತ್ತಿದ್ದರು. ಆದರೆ, ದಿಶಾ ಪಟಾನಿಗೆ ಇದು ಇಷ್ಟವಾಗದ ಕಾರಣ, ಅವರು ಬಿಲ್ ಪಾವತಿಸಲು ಪ್ರಾರಂಭಿಸಿದರಂತೆ ಎಂಬೊಂದು ಸುದ್ದಿ ಇದೆ. 

57

ಟೈಗರ್ ಶ್ರಾಫ್ ಅವರ ತಂದೆ ಜಾಕಿ ಶ್ರಾಫ್ ಕೂಡ ಒಮ್ಮೆ ತಮ್ಮ ಮಗ ಮತ್ತು ದಿಶಾ ಪಟಾನಿಯ ಸಂಬಂಧದ ಬಗ್ಗೆ ಮಾತನಾಡಿದ್ದರು. ಅವರಿಬ್ಬರು ಒಳ್ಳೆಯ ಸ್ನೇಹಿತರೇ ಹೊರತು ಬೇರೇನೂ ಅಲ್ಲ ಎಂದು ಅವರು ಹೇಳಿದ್ದಾರೆ. ತಾಯಿ ಆಯೇಶಾ ಮತ್ತು ಸಹೋದರಿ ಕೃಷ್ಣಾ ಸೇರಿದಂತೆ ಟೈಗರ್ ಕುಟುಂಬದೊಂದಿಗೆ ದಿಶಾ ಉತ್ತಮ ಬಾಂಧವ್ಯವನ್ನು (Bonding) ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

67

ದಿಶಾ ಪಟಾನಿ ಕೂಡ ಒಮ್ಮೆ ಟೈಗರ್‌ ತಾಯಿ  ಆಯೇಷಾರೊಂದಿಗೆ ಊಟಕ್ಕೆ ಸಹ  ಹೋಗಿದ್ದರು. ಇಂಡಸ್ಟ್ರಿಯಲ್ಲಿ ಟೈಗರ್ ಶ್ರಾಫ್ ಬಿಟ್ಟರೆ ಬೇರೆ ಯಾರೂ ಫ್ರೆಂಡ್ ಇಲ್ಲ ಮತ್ತು  ಶ್ರಾಫ್‌ಗೆ ನಾನು ತುಂಬಾ ಹತ್ತಿರವಾಗಿದ್ದೇನೆ' ಎಂದು ದಿಶಾ ಒಮ್ಮೆ ಹೇಳಿದ್ದರು.

77

ಒಟ್ಟಿನಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿದರೂ ಆಪಾರ ಆಸ್ತಿ ಗಳಿಸಿರುವ ಟೈಗರ್ ಶ್ರಾಫ್ ಹಾಗೂ ಧೋನಿ, ಆ್ಯನ್ ಅನ್ ಟೋಲ್ಡ್ ಸ್ಟೋರಿ ಮೂಲಕ ಬಾಲಿವುಡ್ ಪ್ರವೇಶಿಸಿದ ದಿಶಾ ಪಟಾಣಿ ಬಗ್ಗೆ ಗಾಸಿಪ್ ಹಬ್ಬುತ್ತಲೇ ಇರುತ್ತದೆ. ಬಾಲಿವುಡ್‌ನಲ್ಲಿ ಇವೆಲ್ಲಾ ಕಾಮನ್ ಬಿಡಿ. ಆದರೆ, ಬಹಳ ವರ್ಷಗಳಿಂದ ಈ ಜೋಡಿ ಡೇಡಿಂಗ್ ಮಾಡುತ್ತಿರುವುದು ವಿಶೇಷ. ಅದು ಬಾಲಿವುಡ್‌ ಮಟ್ಟಿಗೆ ಸ್ವಲ್ಪ ಹೊಸತೇ ಎನ್ನಬಹುದು. ಆಗಾಗ ತಮ್ಮ ಪ್ರೇಮಿಯನ್ನು ಬದಲಾಯಿಸುವ ಮಂದಿಗೆ ಹೋಲಿಸಿದಲ್ಲಿ ಇವರದ್ದು ಸ್ವಲ್ಪ ವಿಶೇಷ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

Read more Photos on
click me!

Recommended Stories