ಸಲ್ಮಾನ್ ಸೊನಾಕ್ಷಿಯನ್ನು ಮದ್ವೆಯಾದ್ರಂತೆ, ಈ ಸುಳ್ಳು ಸುದ್ದಿ ವೈರಲ್ ಆಗಿದ್ದೇಕೆ?

Suvarna News   | Asianet News
Published : Mar 02, 2022, 07:01 PM ISTUpdated : Mar 02, 2022, 07:05 PM IST

ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ (Salman Khan) ಬಾಲಿವುಡ್‌ನ ಮೊಸ್ಟ್‌ ಎಲಿಜಬಲ್‌ ಬ್ಯಾಚುಲರ್‌. 56 ವರ್ಷವಾದರೂ ಇನ್ನೂ ಸಿಂಗಲ್‌ ಆಗಿರುವ ಸಲ್ಲೂ ಬಾಯ್‌ ಮದುವೆಗೆ ಬಗ್ಗೆ  ಎಲ್ಲರೂ ಕಾತುರರಾಗಿದ್ದಾರೆ. ಇದುವರೆಗೆ ಹಲವು ಆಫೇರ್‌ಗಳನ್ನು ಹೊಂದಿದ್ದರುವ ನಟ ವರನಾಗುವುದನ್ನು ನೋಡಲು ಫ್ಯಾನ್ಸ್‌ ಕಾಯುತ್ತಿದ್ದಾರೆ. ಈ ನಡುವೆ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ (Sonakshi Sinha) ವಧು-ವರರಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸಖತ್‌ ವೈರಲ್ ಆಗುತ್ತಿದೆ. ಸಲ್ಮಾನ್‌ ಮದುವೆಯ ಫೋಟೋ ಅಭಿಮಾನಿಗಳಿಗೆ (Fans) ಶಾಕ್‌ ನೀಡಿದೆ. ಬಾಲಿವುಡ್ ಹಿರಿಯ ನಟ ಶತ್ರುಘ್ನಾ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ (Sonakshi Sinha)  ಜೊತೆ ರಹಸ್ಯವಾಗಿ  ಮದುವೆಯಾದರಾ ಸಲ್ಮಾನ್‌ ಎಂದು ಕೇಳುತ್ತಿದ್ದಾರೆ. 

PREV
16
ಸಲ್ಮಾನ್ ಸೊನಾಕ್ಷಿಯನ್ನು ಮದ್ವೆಯಾದ್ರಂತೆ, ಈ ಸುಳ್ಳು ಸುದ್ದಿ ವೈರಲ್ ಆಗಿದ್ದೇಕೆ?

ಈ ಫೋಟೋವನ್ನು ನೋಡಿದ ಅನೇಕ ಅಭಿಮಾನಿಗಳು ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಅವರನ್ನು ಅಭಿನಂದಿಸಿದ್ದಾರೆ. ಫೋಟೋದಲ್ಲಿ, ಸಲ್ಮಾನ್ ಖಾನ್ ಸೋನಾಕ್ಷಿ ಸಿನ್ಹಾ ಅವರಿಗೆ ನಿಶ್ಚಿತಾರ್ಥದ ಉಂಗುರವನ್ನು ತೊಡಿಸುತ್ತಿರುವುದು ಕಾಣಬಹುದು.ಅಷ್ಟಕ್ಕೂ ಇವರಿಬ್ಬರು ನಟಿಸಿರುವ ಚಿತ್ರಗಳಲ್ಲಿ ಇಂಥ ಸೀನ್ಸ್ ಇಲ್ಲ. ಆದರೂ, ಇಂಥ ಫೋಟೋಗಳು ಎಲ್ಲಿಂದ ವೈರಲ್ ಆದವು?

26

ಸೋಷಿಯಲ್ ಮೀಡಾಯದಲ್ಲಿ ಸುದ್ದು ಮಾಡುತ್ತಿರುವ ಈ ಫೋಟೋದಲ್ಲಿ ಸಲ್ಮಾನ್‌ ಖಾನ್  ಮದು ಮಗನ ಬಟ್ಟೆಯಲ್ಲಿದ್ದಾರೆ. ಸೋನಾಕ್ಷಿ ಸಿನ್ಹಾ ಮದುಮಗಳ ಅಲಂಕಾರದಲ್ಲಿದ್ದಾರೆ. ಸೋನಾಕ್ಷಿ ಸಿನ್ಹಾ ಕೂಡ ಕೆಂಪು ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. 

36

ಫೊಟೋ ನೋಡಿದರೆ ಸೋನಾಕ್ಷಿ ಸಿನ್ಹಾ ಜೊತೆ ರಹಸ್ಯವಾಗಿ ಸಲ್ಮಾನ್‌ ಮದುವೆಯಾದರಾ ಎಂದು ಡೌಟ್‌ ಬರುವುದು ಸುಳ್ಳಲ್ಲ. ಸುಳ್ಳು ಎಂದೆನಿಸುವುದೇ ಇಲ್ಲ. ಆದರೆ ಇದು ಸತ್ಯ ಅಲ್ಲ. ಸಲ್ಮಾನ್-ಸೋನಾಕ್ಷಿ ನಿಶ್ಚಿತಾರ್ಥದ ಈ ಫೋಟೋವನ್ನು ಮಾರ್ಫ್ ಮಾಡಲಾಗಿದೆ. ಈ ಫೊಟೋವನ್ನು ಅಭಿಮಾನಿಯೊಬ್ಬರು ಎಡಿಟ್ ಮಾಡಿದ್ದಾರೆ. 

46

ಕೆಲವು ತಿಂಗಳ ಹಿಂದೆ, ಅನಿಲ್ ಕಪೂರ್‌ಗೆ (Anil Kapoor)  ಅರ್ಬಾಜ್ ಖಾನ್ (ArabhaZ Kahn) ಅವರ ಟಾಕ್ ಶೋ (Talk Show) ಪಿಂಚ್‌ನಲ್ಲಿ  ಸಲ್ಮಾನ್ ಮದುವೆಯಾಗುವುದು ಯಾವಾಗ ಎಂದು ಕೇಳಿದಾಗ 'ನೀವೇ ಸಲ್ಮಾನ್ ಸಹೋದರ, ಆಗ ನನಗೆ ಕೇಳುತ್ತೀರಿ? ಮನೆಯಲ್ಲಿ ಮಾತುಕತೆ ನಡೆಯುತ್ತಿಲ್ವಾ?' ಎಂದು ಅರ್ಬಾಜ್‌ಗೆ ಮರು ಪ್ರಶ್ನೆ ಕೇಳಿದ್ದರು. ಅದಕ್ಕೆ 'ನಾವು ಸುಸ್ತಾಗಿದ್ದೇವೆ' ಎಂದು ಅರ್ಬಾಜ್‌ ಉತ್ತರಿಸಿದ್ದಾರೆ . 

56

ಶತ್ರುಘ್ನ ಸಿನ್ಹಾ ಅವರ ಮಗಳು ಸೋನಾಕ್ಷಿ ಸಿನ್ಹಾ ಒಮ್ಮೆ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೋಹೈಲ್ ಖಾನ್  (Sohail Khan) ಅವರ ಮೈದುನ (Brother In Law)  ಬಂಟಿ ಸಚ್ದೇವ್ ಅವರೊಂದಿಗೆ ಡೇಟಿಂಗ್ (Dating) ನಡೆಸಿದ್ದರು. ಆದರೆ, ಈಗ ಅವರು ಬೇರ್ಪಟ್ಟಿದ್ದಾರೆ. 

66

ಕೆಲವು ದಿನಗಳ ಹಿಂದೆ, ಸೋನಾಕ್ಷಿ ಸಿನ್ಹಾ ಅವರು ನಟ ಜಹೀರ್ ಇಕ್ಬಾಲ್ ಅವರೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದನ್ನು ನೋಡಿದ ನಂತರ ಜನರು ಸೋನಾಕ್ಷಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಯೋಚಿಸಲು ಪ್ರಾರಂಭಿಸಿದರು. ಜಹೀರ್ ಇಕ್ಬಾಲ್ (Zahir Iqbal) ಅವರ ಚೊಚ್ಚಲ ಚಿತ್ರ ನೋಟ್‌ಬುಕ್ (Notebook) ಸಮಯದಿಂದಲೂ ಸೋನಾಕ್ಷಿ ಸಿನ್ಹಾ ಅವರೊಂದಿಗೆ ಸಂಬಂಧ (Relatinship) ಹೊಂದಿದ್ದಾರೆ ಎಂಬ ವರದಿಗಳು ಬಂದಿವೆ.

Read more Photos on
click me!

Recommended Stories