ಮದ್ಯವಯಸ್ಸಿನ ಜೀವನದ ಸುತ್ತುವ ಕಥಾವಸ್ತು, ಈ ಚಿತ್ರಗಳು ಓಟಿಟಿಯಲ್ಲಿ ಲಭ್ಯ!

Published : Feb 25, 2024, 05:41 PM IST

ಈಗಿನ ಸಿನಿಮಾಗಳ ಕಥೆಗಳು ಕೇವಲ ಪ್ರೀತಿ ಅಥವಾ ಫ್ಯಾಮಿಲಿ ಡ್ರಾಮಾಕ್ಕೆ ಮಾತ್ರ ಸೀಮಿತವಾಗಿಲ್ಲ. ಹದಿಹರೆಯದ ಸಮಸ್ಯೆಗಳಿಂದ ಹಿಡಿದು ಮಧ್ಯವಯಸ್ಕರ ತುಮಲಗಳು ಮತ್ತು ವಯೋವೃದ್ಧರ ಮನಸ್ಥಿತಿಯವರೆಗೆ ವಿಭಿನ್ನ ಕಥಾವಸ್ತುಗಳನ್ನು ಹೊಂದಿರುತ್ತವೆ. ಅದರಲ್ಲೂ  ಈ ದಿನಗಳಲ್ಲಿ 40 ವರ್ಷದ ನಂತರದ ಜೀವನದ ಬಗ್ಗೆಯ ಕಥೆಗಳನ್ನು ಹೊಂದಿರುವ ಸಿನಿಮಾಗಳು ಸಾಕಷ್ಷು ಸದ್ದು ಮಾಡುತ್ತಿವೆ. ಇಂಗ್ಲೀಷ್‌ ವಿಂಗ್ಲಿಷ್‌, ಪಿಕು, ಡಿಯರ್‌ ಜಿಂದಗಿ , ಥ್ರೀ ಅಫ್‌ ಅಸ್‌ ಈ ಪಟ್ಟಿಯಲ್ಲಿರುವ ಕೆಲವು ಟಾಪ್‌ ಸಿನಿಮಾಗಳಾಗಿವೆ.

PREV
110
 ಮದ್ಯವಯಸ್ಸಿನ ಜೀವನದ ಸುತ್ತುವ ಕಥಾವಸ್ತು, ಈ ಚಿತ್ರಗಳು ಓಟಿಟಿಯಲ್ಲಿ ಲಭ್ಯ!
Three of Us

ಥ್ರೀ ಆಫ್ ಅಸ್:
ನರಗಳಿಗೆ ಸಂಬಂಧಿಸಿದ ಖಾಯಿಲೆಯಿಂದ ನೆನಪು ಕಳೆದುಕೊಳ್ಳುತ್ತಿರುವ ಮಹಿಳೆ ತನ್ನ ಹಿಂದಿನ ನೆನಪನ್ನು ಮರುಶೋಧಿಸುವ ಕಥೆಯೇ ಥ್ರೀ ಆಫ್ ಅಸ್ ಸಿನಿಮಾ. ಇದು Netflix ನಲ್ಲಿದೆ.

210
Piku

ಪಿಕು:
ಪಿಕು ಪ್ರಾಥಮಿಕವಾಗಿ ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಿರ್ವಹಿಸಿದ ತಂದೆ ಮತ್ತು ಮಗಳ ನಡುವಿನ ಸಂಬಂಧದ ಮೇಲೆ ಕೇಂದ್ರೀಕರಿಸುತ್ತದೆ. ಈ ಚಲನಚಿತ್ರವು ಸೋನಿ ಲೈವ್‌ನಲ್ಲಿ ಲಭ್ಯವಿದೆ.

  

310

ಡಿಯರ್‌ ಜಿಂದಗಿ:
ಡಿಯರ್‌ ಜಿಂದಗಿ ಸಿನಿಮಾ ಒಂದು ಯುವತಿ ಮತ್ತುಅವಳ ಥೆರೆಪಿಸ್ಟ್ ಅವರ ಸ್ವಯಂ ಅನ್ವೇಷಣೆಯ ಪ್ರಯಾಣವನ್ನು ಪ್ರಾರಂಭಿಸುವ ಸುತ್ತುವ ಕಥೆ. ಇದು ನೆಟ್‌ಫ್ಲಿಕ್ಸ್‌ನಲ್ಲಿದೆ

410

ಇಂಗ್ಲೀಷ್ ವಿಂಗ್ಲಿಷ್:
ಇಂಗ್ಲಿಷ್ ವಿಂಗ್ಲಿಷ್ ಸಿನಿಮಾವು ಇಂಗ್ಲಿಷ್ ಕಲಿತು ತನ್ನಲ್ಲಿ ಆತ್ಮವಿಶ್ವಾಸವನ್ನುಗಳಿಸುವ ಮಹಿಳೆಯ ಸ್ವಯಂ ಅನ್ವೇಷಣೆ ಮತ್ತು ಸಬಲೀಕರಣದ ಪ್ರಯಾಣವನ್ನು ಅನುಸರಿಸುತ್ತದೆ. ಇದು jiocinema ನಲ್ಲಿದೆ.
  

510

ಲಂಚ್‌ ಬಾಕ್ಸ್:
ಲಂಚ್ ಬಾಕ್ಸ್ ಒಂದು ಅನನ್ಯ ಮತ್ತು ಹೃದಯವನ್ನು ಬೆಚ್ಚಗಾಗುವ ಅಸಂಭವ ಸ್ನೇಹದ ಕಥೆಯಾಗಿದ್ದು, ಅದು ಊಟದ ಪೆಟ್ಟಿಗೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಅರಳುತ್ತದೆ. ಈ ಸಿನಿಮಾ ಪ್ರೈಮ್‌ ವೀಡಿಯೋದಲ್ಲಿ ಲಭ್ಯ

610

ನಿಲ್ ಬಟ್ಟಿಯೇ ಸನ್ನಾಟ:
ನಿಲ್ ಬಟ್ಟಿಯೆ ಸನ್ನಾಟವು ಶಿಕ್ಷಕಿನಾಗುವ ಕನಸು ಕಾಣುತ್ತಿರುವ ಒಂಟಿ ತಾಯಿಯ ಹೃದಯ ಸ್ಪರ್ಶಿ ಕಥೆ. ಇದು ಜಿಯೋ ಸಿನಿಮಾದಲ್ಲಿದೆ
  

710

102 ನಾಟ್‌ಔಟ್‌:
102 ನಾಟ್ ಔಟ್ 102 ವರ್ಷದ ತಂದೆ ಮತ್ತು 75 ವರ್ಷದ  ಅವರ ಮಗನ  ಸಂಬಂಧವನ್ನು ಅನ್ವೇಷಿಸುವ ಹಾಸ್ಯ ನಾಟಕ. ಇದು ಪ್ರೈಮ್ ವಿಡಿಯೋದಲ್ಲಿದೆ.

 

810

ಬಾಗ್ಬಾನ್:
ಬಾಗ್ಬಾನ್ ತಮ್ಮ ಮಕ್ಕಳಿಂದ ತ್ಯಜಿಸಲ್ಪಟ್ಟ ವೃದ್ಧ ದಂಪತಿ ಕಥೆಯನ್ನು ಚಿತ್ರಿಸುತ್ತದೆ.  ಈ ಸಿನಿಮಾ Disney+ hotStarನಲ್ಲಿ ಸ್ಟ್ರೀಮ್‌ ಆಗುತ್ತಿದೆ.
 

910

ಚೀನಿ ಕಮ್:
ಚೀನಿ ಕಮ್ 64 ವರ್ಷದ ಬಾಣಸಿಗ 34 ವರ್ಷದ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಪ್ರೀತಿ, ವಯೋಮಾನ ಮತ್ತು ಸಾಮಾಜಿಕ ಮಾನದಂಡಗಳನ್ನು ಅನ್ವೇಷಿಸುವ ಸುತ್ತ ಸುತ್ತುತ್ತದೆ,. zee5 ನಲ್ಲಿ ಲಭ್ಯವಿದೆ.

1010

ಫೈಂಡಿಗ್‌ ಫ್ಯಾನಿ:
ಫೈಡಿಂಗ್ ಫ್ಯಾನಿ ತನ್ನ ಕಳೆದ ಪ್ರೀತಿಯನ್ನು ಹುಡುಕಲು ರೋಡ್‌ ಟ್ರಿಪ್‌ ಕೈಗೊಳ್ಳುವ ವಿಧವೆಯ ಒಂದು ಹಾಸ್ಯಮಯ ಚಿತ್ರ. ಈ ಚಿತ್ರವು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories