ಈಕೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಪಾಕಿಸ್ತಾನದ ಮೊದಲ ಮಾಡೆಲ್

First Published Feb 25, 2024, 5:15 PM IST

ಮಿಸ್ ಯೂನಿವರ್ಸ್ 2023 ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಪಾಕಿಸ್ತಾನಿ ಮಾಡೆಲ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎರಿಕಾ ರಾಬಿನ್ ಎದುರಿಸಿದ ಸವಾಲುಗಳೇನು?

ಈಕೆ ಎರಿಕಾ ರಾಬಿನ್. ಪಾಕಿಸ್ತಾನದಿಂದ ವಿಶ್ವ ಸುಂದರಿ ಸ್ಪರ್ಧೆಗೆ ಭಾಗವಹಿಸಿದ ಮೊದಲ ಮಾಡೆಲ್ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ.

ಎಲ್ ಸಾಲ್ವಡಾರ್‌ನಲ್ಲಿರುವ ಗಿಮ್ನಾಸಿಯೊ ನ್ಯಾಶನಲ್ ಜೋಸ್ ಅಡಾಲ್ಫೊ ಪಿನೆಡಾದಲ್ಲಿ ನವೆಂಬರ್ 18, 2023 ರಂದು ನಡೆದ 72 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಎರಿಕಾ ಪಾಕಿಸ್ತಾನವನ್ನು ಪ್ರತಿನಿಧಿಸಿದರು.

80 ಮಾಡೆಲ್‌ಗಳ ನಡುವೆ ಟಾಪ್ 20 ಸ್ಪರ್ಧಿಗಳ ಪಟ್ಟಿಗೆ ಪ್ರವೇಶಿಸುವ ಮೂಲಕ ಎರಿಕಾ ರಾಬಿನ್ ಸಾಕಷ್ಟು ಹೆಡ್ಲೈನ್‌ಗಳಲ್ಲಿ ಮಿಂಚಿದರು.

ಮಿಸ್ ಯೂನಿವರ್ಸ್‌ನ ಟಾಪ್ 10 ರೊಳಗೆ ಬರಲು ಎರಿಕಾಗೆ ಸಾಧ್ಯವಾಗದಿದ್ದರೂ, ಅವರು 2023 ರ ಸ್ಪರ್ಧೆಯಲ್ಲಿ ತಮ್ಮ ಭಾಗವಹಿಸುವಿಕೆಯಿಂದಲೇ ಪಾಕಿಸ್ತಾನದ ಪ್ರತಿಯೊಂದು ಮಾಡೆಲ್‌ಗೆ ಭಾರಿ ಉತ್ತೇಜನವನ್ನು ನೀಡಿದ್ದಾರೆ.

ಪ್ರಸಿದ್ಧ ಪಾಕಿಸ್ತಾನಿ ಮಾಡೆಲ್, ಎರಿಕಾ ರಾಬಿನ್ ನವೆಂಬರ್ 8, 1998 ರಂದು ಕರಾಚಿಯಲ್ಲಿ ಜನಿಸಿದರು. ಬಹು ವರದಿಗಳ ಪ್ರಕಾರ, ಎರಿಕಾಳ ತಂದೆಯ ಹೆಸರು ಮರಿಯನ್ ರಾಬಿನ್ ಮತ್ತು ಆಕೆಯ ತಾಯಿಯ ಹೆಸರು ಶಬಾನಾ ವೆರೋನಿಕಾ. 

ಕರಾಚಿಯ ಸೇಂಟ್ ಪ್ಯಾಟ್ರಿಕ್ಸ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲೆಯನ್ನು ಪೂರ್ಣಗೊಳಿಸಿದ ಎರಿಕಾ, ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.

ಮಿಸ್ ಯೂನಿವರ್ಸ್ 2023 ಸ್ಪರ್ಧೆಯಲ್ಲಿ ಎರಿಕಾ ಪಾಕಿಸ್ತಾನವನ್ನು ಪ್ರತಿನಿಧಿಸಿದಾಗಿನಿಂದ ಅನೇಕ ಜನರು ಅವಳ ಧರ್ಮದ ಬಗ್ಗೆ ಹುಡುಕುತ್ತಿದ್ದಾರೆ. ವರದಿಯಂತೆ ಆಕೆ ಕ್ರಿಶ್ಚಿಯನ್ ಎನ್ನಲಾಗಿದೆ.

2020 ರಲ್ಲಿ ಎರಿಕಾ ರಾಬಿನ್ ವೃತ್ತಿಪರ ಮಾಡೆಲ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಬಟ್ಟೆ ಬ್ರಾಂಡ್‌ಗಳೊಂದಿಗೆ ಪ್ರಧಾನವಾಗಿ ಕೆಲಸ ಮಾಡಿದರು.

ಶೀಘ್ರದಲ್ಲೇ ಕೆಲವು ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡರು ಮತ್ತು ಕಡಿಮೆ ಸಮಯದಲ್ಲಿ, ಎರಿಕಾ ಪಾಕಿಸ್ತಾನದ ಮಾಡೆಲಿಂಗ್ ಉದ್ಯಮದಲ್ಲಿ ಹೆಸರುವಾಸಿಯಾದರು.

ಮಿಸ್ ಯೂನಿವರ್ಸ್ ಪಾಕಿಸ್ತಾನ್ 2023 ಸ್ಪರ್ಧೆಯು ಮೊದಲ ಬಾರಿಗೆ ದುಬೈನಲ್ಲಿ ಸೆಪ್ಟೆಂಬರ್ 12, 2023 ರಂದು ನಡೆಯಿತು ಮತ್ತು ಎರಿಕಾ ರಾಬಿನ್ ಪ್ರಶಸ್ತಿಯನ್ನು ಗೆದ್ದರು. ಈ ಸಂದರ್ಭದಲ್ಲಿ ಆಕೆ, 'ಮಾಧ್ಯಮಗಳು ಮಾತನಾಡದಂತಹ ಸುಂದರವಾದ ಸಂಸ್ಕೃತಿಯನ್ನು ಪಾಕಿಸ್ತಾನಿಯರು ಹೊಂದಿದ್ದೇವೆ. ಪಾಕಿಸ್ತಾನಿ ಜನರು ತುಂಬಾ ಕರುಣಾಮಯಿ, ಉದಾರ ಮತ್ತು ಆತಿಥ್ಯವನ್ನು ಹೊಂದಿದ್ದಾರೆ' ಎಂದಿದ್ದರು.

click me!