58 ನೇ ವಯಸ್ಸಲ್ಲಿ 2ನೇ ಬಾರಿ ಮದುವೆಯಾದ ರೋನಿತ್ ರಾಯ್…. ಫೋಟೋಸ್ ವೈರಲ್

Published : Feb 25, 2024, 04:15 PM IST

ಸಿನಿಮಾ ಮತ್ತು ಸೀರಿಯಲ್ ನಲ್ಲಿ ಗುರುತಿಸಿಕೊಂಡ ನಟ  ರೋನಿತ್ ರಾಯ್ ಕಳೆದ ಡಿಸೆಂಬರ್ ನಲ್ಲಿ ಎರಡನೇ ಬಾರಿ ಮದುವೆಯಾಗಿ ಸುದ್ದಿಯಾಗಿದ್ದರು. ಈ ಜೋಡಿಗಳ ಮದುವೆ ಫೋಟೋ ನಿಮಗಾಗಿ.   

PREV
17
58 ನೇ ವಯಸ್ಸಲ್ಲಿ 2ನೇ ಬಾರಿ ಮದುವೆಯಾದ ರೋನಿತ್ ರಾಯ್…. ಫೋಟೋಸ್ ವೈರಲ್

ಹಿಂದಿ ಟೆಲಿವಿಶನ್ ಇಂಡಸ್ಟ್ರಿ ಮತ್ತು ಬಾಲಿವುಡ್ ಸಿನಿಮಾ ಲೋಕದಲ್ಲಿ ಮಿಂಚಿದ ನಟ ರೋನಿತ್ ರಾಯ್ (Ronit Roy) ತಮ್ಮ 58ನೇ ವಯಸ್ಸಿನಲ್ಲಿ ಎರಡನೇ ಬಾರಿ ಮದುವೆಯಾಗುವ ಮೂಲಕ ಸದ್ದು ಮಾಡಿದ್ದಾರೆ. 
 

27

ಕಳೆದ ವರ್ಷ ಡಿಸೆಂಬರ್ 25 ರಂದು ನಟ ರೋನಿತ್ ರಾಯ್ ತಮ್ಮ ಪತ್ನಿ ನೀಲಮ್ ಜೊತೆ ತಮ್ಮ 20ನೇ ವಿವಾಹ ವಾರ್ಷಿಕೋತ್ಸವದ (20th wedding anniversary) ಸಂದರ್ಭದಲ್ಲಿ ಎರಡನೇ ಬಾರಿಗೆ ಮದುವೆಯಾಗುವ ಮೂಲಕ ಚರ್ಚೆಯಲ್ಲಿದ್ದರು. ಇದೀಗ ಮತ್ತೆ ಈ ಜೋಡಿಗಳ ಫೋಟೋ ವೈರಲ್ ಆಗಿದೆ. 
 

37

ರೋನಿತ್ ಮತ್ತು ನೀಲಮ್ ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ತಮ್ಮ ಟೀನೇಜ್ ಮಕ್ಕಳು ಮತ್ತು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇವರ ಮದುವೆ ವಿಡಿಯೋ ಮತ್ತು ಫೋಟೋಗಳು ಸಹ ವೈರಲ್ ಆಗಿದ್ದವು. 
 

47

ಎರಡನೇ ಬಾರಿ ಪತ್ನಿಯನ್ನು ಮದುವೆಯಾಗಿರುವ (second time marriage) ರೋನಿತ್ ನಿನ್ನೊಂದಿಗೆ ಎರಡನೇ ಬಾರಿ ಏನೂ ಸಾವಿರ ಸಲ ಮದುವೆಯಾಗೋದಕ್ಕೂ ನಾನು ರೆಡಿಯಾಗಿದ್ದೇನೆ ಎಂದು ಹೇಳಿದ್ದರು. 

57

ರೋನಿತ್ ರಾಯ್ ಮತ್ತು ನೀಲಮ್ 2003ರಲ್ಲಿ ಮೊದಲ ಬಾರಿಗೆ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದರು. ಇದೀಗ 2023ರ ಡಿಸೆಂಬರ್ ನಲ್ಲಿ ತಮ್ಮ 20 ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗೋವಾದ ತಮ್ಮ ಫಾರ್ಮ್ ಹೌಸ್ ನಲ್ಲಿ ಎರಡನೇ ಬಾರಿ ಸಪ್ತಪದಿ ತುಳಿದರು. 
 

67

ರಾನಿತ್ ರಾಯ್ ಕಸೌಟಿ ಝಿಂದಗೀ  ಕೆ, ಕ್ಯೂಕಿ ಸಾಸ್ ಬಿ ಕಭೀ ಬಹೂ ಥೀ ಸೇರಿ 30 ಕ್ಕೂ ಹೆಚ್ಚು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಹಿಂದಿ, ತೆಲುಗು, ಬಂಗಾಳಿ ಸಿನಿಮಾಗಳಲ್ಲಿ ಹಾಗೂ ವೆಬ್ ಸೀರೀಸ್ ಗಳಲ್ಲೂ ಇವರು ನಟಿಸಿದ್ದಾರೆ. 
 

77

ರೋನಿತ್ ರಾಯ್ ಪತ್ನಿ ನೀಲಮ್ ಸಿಂಗ್ (Neelam Singh) ಸಹ ನಟಿ ಹಾಗೂ ಮಾಡೆಲ್ ಆಗಿದ್ದು ಈ ಮುದ್ದಾದ ದಂಪತಿಗೆ ಅಡೋರ್ ಎನ್ನುವ ಮಗಳು ಮತ್ತು ಅಗಸ್ತ್ಯ ಎನ್ನುವ ಮಗ ಕೂಡ ಇದ್ದಾರೆ. 
 

Read more Photos on
click me!

Recommended Stories