ಈ ಚಿತ್ರ ಬಿಡುಗಡೆಯಾದಾಗ ಒಂದೂ ಟಿಕೆಟ್ ಸೇಲ್ ಆಗ್ಲಿಲ್ಲ.. ಆಮೇಲ್ನೋಡಿ ಎಂಥಾ ಹಿಟ್ ಆಯ್ತಂದ್ರೆ..!

First Published | Jun 20, 2024, 1:48 PM IST

ಇಂಥದ್ದೆಲ್ಲ ಮ್ಯಾಜಿಕ್ ಅಪರೂಪಕ್ಕೆ ಆಗ್ತಿರುತ್ತೆ. ಈ ಬಾಲಿವುಡ್ ಕಾಮಿಡಿ ಚಿತ್ರ ಬಿಡುಗಡೆಯಾದ ದಿನ ಒಂದೂ ಟಿಕೆಟ್ ಮಾರಾಟವಾಗಲಿಲ್ಲ. ಆದ್ರೆ, ನಂತರದಲ್ಲಿ ಬಾಕ್ಸಾಫೀಸಲ್ಲೂ ಹಿಟ್, ಇಂದಿಗೂ ಜನ ನೆನೆಸಿಕೊಳ್ಳೋ ಚಿತ್ರವಾಯಿತು.

ಈಗೆಲ್ಲ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆ ಆಗ್ತಿದ್ದಂಗೇ ಟಿಕೆಟ್ ಮುಂಗಡ ಕಾಯ್ದಿರಿಸಲಾಗುತ್ತದೆ. ಅದರ ಆದಾರದ ಮೇಲೆ ಚಿತ್ರದ ಯಶಸ್ಸನ್ನು ಮೊದಲೇ ನಿರ್ಧರಿಸಲಾಗುತ್ತದೆ. ಉತ್ತಮವಾದ ಆರಂಭ ಎಂದರೆ ಉತ್ತಮ ಸಕ್ಸಸ್ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲ ಚಿತ್ರಗಳು ಕೆಟ್ಟ ಆರಂಭವನ್ನು ಹೊಂದಿದರೂ ನಂತರದಲ್ಲಿ ಜನ ಅದನ್ನು ಮೆಚ್ಚಿ ಮಾತಾಡುತ್ತಾರೆ, ಮತ್ತೆ ಅವುಗಳು ಬಾಕ್ಸಾಫೀಸಲ್ಲಿ ನಾಗಾಲೋಟ ಆರಂಭಿಸುತ್ತವೆ.

ಇಂಥದೊಂದು ಚಿತ್ರದ ಕತೆ ಇದು. ಈ ಚಿತ್ರ ತೆರೆ ಕಂಡ ದಿನ ಶೂನ್ಯ ಟಿಕೆಟ್ ಮಾರಾಟವಾದ ಚಿತ್ರ ಎಂದರೆ ಅಚ್ಚರಿಯಾದೀತು. ಆದರೆ, ಅಂದು ಹಾಗೇ ಆಗಿತ್ತು. ಚಿತ್ರದಲ್ಲಿ ದೊಡ್ಡ ದೊಡ್ಡ ನಟರಿದ್ದರೂ ಆರಂಭದ ದಿನ ಟಿಕೆಟ್ ಮಾರಾಟವಾಗಲಿಲ್ಲ. ಆದರೆ, ನಂತರದಲ್ಲಿ ಇದು ಹಣ ಮಾಡುತ್ತಲೇ ಸಾಗಿತು. ಇದೇ 2000ನೇ ಇಸವಿಯಲ್ಲಿ ಬಿಡುಗಡೆಯಾದ ಫಿರ್ ಹೇರಾ ಫೇರಿ. 

Tap to resize

ಬಾಲಿವುಡ್‌ನ ಕಲ್ಟ್ ಕಾಮಿಡಿಗಳಲ್ಲೊಂದು ಎನಿಸಿರುವ ಹೇರಾ ಫೇರಿಯನ್ನು ಕೇವಲ 6 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು ಮತ್ತು ಇದು ವಿಶ್ವಾದ್ಯಂತ ರೂ 70 ಕೋಟಿ ಗಳಿಸಿತು. ಆದರೆ, ಇದು ಆರಂಭದ ದಿನ ಮಾತ್ರ ಒಂದೂ ಟಿಕೆಟ್ ಮಾರಾಟವಾಗದೆ ನಿರ್ಮಾಪಕರು, ನಿರ್ದೇಶಕರು ಹಾಗೂ ಅಭಿನಯಿಸಿದ ನಟರಿಗೆ ದೊಡ್ಡ ತಲೆನೋವು ತಂದಿತ್ತು. 

ಪ್ರಿಯದರ್ಶನ್ ನಿರ್ದೇಶಿಸಿದ, ಹೇರಾ ಫೆರಿ ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ಹಾಸ್ಯಚಿತ್ರಗಳಲ್ಲಿ ಒಂದಾಗಿದೆ. ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅಭಿನಯದ ಚಿತ್ರಕ್ಕೆ ಪ್ರಾರಂಭವು ಚೆನ್ನಾಗಿರಲಿಲ್ಲ. ಮೊದಲ ದಿನದ ಮೊದಲ ಎರಡು ಪ್ರದರ್ಶನಗಳಿಗೆ ಒಬ್ಬರೂ ಬರಲಿಲ್ಲ. 

ಆ ದಿನ ಸಂಜೆ 6 ಗಂಟೆಯ ನಂತರ ಚಿತ್ರ ವೇಗ ಪಡೆಯಿತು. ಆವೇಗವು ಉಳಿದುಕೊಂಡಿತು ಮತ್ತು ಚಲನಚಿತ್ರವು ಹಣ ಗಳಿಸುತ್ತಲೇ ಸಾಗಿತು. 
 

90ರ ದಶಕದಲ್ಲಿ, ಅಕ್ಷಯ್ ಕುಮಾರ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಆಕ್ಷನ್ ತಾರೆಗಳಲ್ಲಿ ಒಬ್ಬರಾಗಿದ್ದರು. ಕಿಲಾಡಿ ಚಿತ್ರಗಳ ಯಶಸ್ಸಿನ ಮೇಲೆ ಸವಾರಿ ಮಾಡಿದ ಅವರು ಬ್ಯಾಂಕಿಂಗ್ ಸ್ಟಾರ್ ಆಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಆದರೆ ದಶಕದ ಅಂತ್ಯದ ವೇಳೆಗೆ, ಅಕ್ಷಯ್ ಅವರ ಸ್ಟಾರ್‌ಡಮ್ ಮೇಲೆ ಪರಿಣಾಮ ಬೀರುವ ಫ್ಲಾಪ್‌ಗಳ ಸರಮಾಲೆಯನ್ನು ಕಂಡರು.

1999 ರ ಹೊತ್ತಿಗೆ, ಅವರು ಇಂಟರ್ನ್ಯಾಷನಲ್ ಕಿಲಾಡಿ ಮತ್ತು ಸಂಘರ್ಷದಂತಹ ದೊಡ್ಡ ಚಲನಚಿತ್ರಗಳ ವೈಫಲ್ಯದಿಂದ ತತ್ತರಿಸಿದ್ದರು. ಆದರೆ ನಂತರ, ಅವರ ವೃತ್ತಿಜೀವನದ ಯಶಸ್ಸನ್ನು ಉಳಿಸಿಕೊಟ್ಟಿದ್ದು ಹೆರಾ ಫೆರಿ.
 

ಚಿತ್ರದ ಯಶಸ್ಸು ಅಕ್ಷಯ್ ಹೆಚ್ಚು ಹಾಸ್ಯವನ್ನು ಮಾಡಲು ಕಾರಣವಾಯಿತು, ಮುಂದಿನ ದಶಕದಲ್ಲಿ ಮುಜ್ಸೆ ಶಾದಿ ಕರೋಗಿ, ಗರಂ ಮಸಾಲಾ, ಆವಾರಾ ಪಾಗಲ್ ದೀವಾನಾ, ಮತ್ತು ಭಾಗಂ ಭಾಗ್ ಮುಂತಾದ ಹಿಟ್‌ಗಳೊಂದಿಗೆ ಅವರು ತಮ್ಮದೇ ಆದ ಪ್ರಕಾರವನ್ನು ಮಾಡಿದರು. ಅವರು 2007-19ರಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ನಟರಾಗಿದ್ದರು.

ಪರೇಶ್ ರಾವಲ್ ಕೂಡ 80 ಮತ್ತು 90ರ ದಶಕದಲ್ಲಿ ಋಣಾತ್ಮಕ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದರು, ಆದರೆ ಹೇರಾ ಫೇರಿಯ ಮೂಲಕ 45ನೇ ವಯಸ್ಸಿನಲ್ಲಿ ಅವರ ಪ್ರಗತಿಯನ್ನು ಕಂಡುಕೊಂಡರು. ಇದು ಚಲನಚಿತ್ರಗಳಲ್ಲಿನ ಹಾಸ್ಯ ಪ್ರಕಾರದಲ್ಲಿ ಅವರಿಗೆ ಹಲವಾರು ಪಾತ್ರಗಳನ್ನು ಗಳಿಸಿಕೊಟ್ಟಿತು.

ಅವರ ಪಾಗಲ್ ದೀವಾನಾ ಹಂಗಾಮಾ, ಗೋಲ್ಮಾಲ್: ಫನ್ ಅನ್‌ಲಿಮಿಟೆಡ್, ಚುಪ್ ಚುಪ್ ಕೆ, ಭೂಲ್ ಭುಲೈಯಾ, ಮತ್ತು ವೆಲ್ಕಂಗಳಲ್ಲಿ ಹಾಸ್ಯನಟರಾಗಿಯೇ ಗೆಲ್ಲುತ್ತಾ ಹೋದರು. ನಂತರ ಅವರು OMG ಮತ್ತು ಸಂಜು ಚಿತ್ರಗಳಲ್ಲಿ ಗಂಭೀರ ಪಾತ್ರಗಳೊಂದಿಗೂ ಮೆಚ್ಚುಗೆ ಗಳಿಸಿದರು.
 

2006ರಲ್ಲಿ ಇದರ ಮುಂದಿನ ಭಾಗವಾಗಿ ಫಿರ್ ಹೆರಾ ಫೆರಿ ಬಂತು. ಇದೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿತು. ನಂತರ ಹೆರಾ ಫೆರಿ 3ಯನ್ನು  2014 ರಲ್ಲಿ ಚಿತ್ರೀಕರಣ ಆರಂಭಿಸಿದರೂ ಕಾರಣಾಂತರಗಿಂದ ಅದು ನಿಂತು ಹೋಯಿತು. ಆದರೆ, ಈ ವರ್ಷ ಅಕ್ಷಯ್, ಸುನೀಲ್, ಪರೇಶ್ ಒಟ್ಟಾಗಿ ನಟಿಸಿದ ಈ 3ನೇ ಭಾಗದ ಚಿತ್ರ ಬಿಡುಗಡೆಯಾಗಲಿದೆ.
 

Latest Videos

click me!