ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ ಧರಿಸಿದ್ದ ಒಡವೆ ಬೆಲೆ ಕೋಟಿಗಳಲ್ಲಿ!

Published : Jun 20, 2024, 12:37 PM ISTUpdated : Jun 20, 2024, 02:44 PM IST

ಕಲ್ಕಿ 2898 AD ಪ್ರೀ-ರಿಲೀಸ್ ಈವೆಂಟ್‌ನಲ್ಲಿ ದೀಪಿಕಾ ಪಡುಕೋಣೆ ಜಗತ್ಸುಂದರಿಯಂತೆ ಕಂಗೊಳಿಸಿದ್ದು ಸುಳ್ಳಲ್ಲ. ಕಪ್ಪು ಬಣ್ಣದ ಗೌನ್, ಒಂದು ಬ್ರೇಸ್‌ಲೆಟ್ ಮತ್ತು ಹೀಲ್ಸ್ ಇಷ್ಟರಲ್ಲಿ ಸಿಂಪಲ್ ಆಗಿ ರೆಡಿಯಾಗಿದ್ದ ದೀಪಿಕಾ ಧರಿಸಿದ್ದ ಬಟ್ಟೆ ಮತ್ತು ಬ್ರೇಸ್‌ಲೆಟ್ ಬೆಲೆ ಕೇಳಿದ್ರೆ ಹೌಹಾರ್ತೀರಿ.

PREV
19
ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ ಧರಿಸಿದ್ದ ಒಡವೆ ಬೆಲೆ ಕೋಟಿಗಳಲ್ಲಿ!

ಕಲ್ಕಿ 2898 AD ಪ್ರೀ-ರಿಲೀಸ್ ಈವೆಂಟ್‌ಗಾಗಿ ಕಪ್ಪು ಬಣ್ಣದ ಗೌನ್‌ನೊಂದಿಗೆ ರೆಡಿಯಾಗಿದ್ದ ದೀಪಿಕಾ ಪಡುಕೋಣೆಯ ಚಿತ್ರಗಳು ಎಂದಿನಂತೆ ವೈರಲ್ ಆಗಿವೆ. ಆಕೆಯ ಸೌಂದರ್ಯ ಈ ಪ್ರಗ್ನೆನ್ಸಿ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿದೆ.

29
Deepika Padukone

ಕಾರ್ಯಕ್ರಮದ ದೀಪಿಕಾ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಆಕೆಯ ಬೇಬಿ ಬಂಪ್, ಮಗು ಹೆಣ್ಣೋ ಗಂಡೋ, ಇಂಥ ಸಂದರ್ಭದಲ್ಲಿ ನಟಿ ಧರಿಸಿರುವ ಹೀಲ್ಸ್ ಬಗ್ಗೆ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

39

ಇವೆಲ್ಲದರೊಂದಿಗೆ ಮತ್ತೊಂದು ವಿಷಯ ಇದೀಗ ನೆಟ್ಟಿಗರ ಗಮನ ಸೆಳೆದಿರುವುದಷ್ಟೇ ಅಲ್ಲ, ಅವರನ್ನು ಅವಾಕ್ಕಾಗಿಸಿದೆ- ಅದೇ ನಟಿ ಧರಿಸಿದ ಬಟ್ಟೆ ಮತ್ತು ಒಡವೆಗಳ ದರ.

49

ಹೌದು, ದೀಪಿಕಾ ಚಿತ್ರದ ಪ್ರಮೋಶನ್ ಕಾರ್ಯಕ್ರಮಕ್ಕಾಗಿ ಧರಿಸಿದ್ದು ಕಪ್ಪು ಬಣ್ಣದ ಗೌನ್, ಬ್ರೇಸ್‌ಲೆಟ್ ಮತ್ತು ಹೈ ಹೀಲ್ಸ್. ಸಹಜವಾಗಿ ಸರಳವಾಗಿ ಕಾಣುವಂಥ ಉಡುಗೆ. ಆದರೆ, ಇದರ ಬೆಲೆ ಮಾತ್ರ ಸರಳವಾಗಿಲ್ಲ. 

59

ದೀಪಿಕಾ ಪಡುಕೋಣೆ ಉಡುಗೆ ವೆಚ್ಚ
ಲೋವೆ ಅಧಿಕೃತ ವೆಬ್‌ಸೈಟ್‌ನಲ್ಲಿ ಹತ್ತಿಯ ಅನಗ್ರಾಮ್ ಪೆಬಲ್ ಡ್ರೆಸ್‌ನ ಬೆಲೆ ಬರೋಬ್ಬರಿ ₹114,000 ಆಗಿದೆ.

69

ಇನ್ನು ದೀಪಿಕಾ ಕೈಲಿ ಹೊಳೆಯುತ್ತಿರುವುದು ಕಾರ್ಟಿಯರ್ ಬಳೆಗಳಾಗಿದ್ದು, ಈ ಚಿನ್ನ ಮಿಶ್ರಿತ ವಜ್ರದ ಆಭರಣದ ಬೆಲೆ 1.16 ಕೋಟಿ ರೂ. ಆಗಿದೆ! 

79

ಹೌದು,ನೀವು ಓದಿದ್ದು ಸರಿಯಾಗಿದೆ- ದೀಪಿಕಾ ಕೈಲಿ 3 ಬಳೆಗಳಿದ್ದು,  ಪ್ಯಾಂಥೆರೆ ಡಿ ಕಾರ್ಟಿಯರ್ ಬಳೆ  53, 50,000 ರೂ. ಮೌಲ್ಯದ್ದಾಗಿದೆ. ಮಧ್ಯದ ಬಳೆ 43,20,000 ರೂ.ಗಳ ಬೆಲೆಯೊಂದಿಗೆ ಬರುತ್ತದೆ.
ಮೂರನೇ ಬಳೆಯ ಬೆಲೆ  19,40,000 ರೂ. ಆಗಿದೆ. ಅಲ್ಲಿಗೆ ಈ ಬಳೆಗಳ ಒಟ್ಟು ಮೌಲ್ಯ 1.16 ಕೋಟಿ ರೂ. 

89

ಇನ್ನು ದೀಪಿಕಾ ಧರಿಸಿರುವ ಉಂಗುರಗಳು ಮತ್ತು ಕಿವಿಯೋಲೆಗಳು ಕೂಡಾ ಕಾರ್ಟಿಯರ್‌ದ್ದೇ ಆಗಿದ್ದು, ಅವುಗಳ ಬೆಲೆಯೂ ಹಲವಾರು ಲಕ್ಷಗಳಾಗಿರುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ದೀಪಿಕಾಳ ಹೀಲ್ಸ್ ಬೆಲೆ 41500 ರೂಪಾಯಿಗಳು.

99

ದೀಪಿಕಾ ಪಡುಕೋಣೆ, ಪ್ರಭಾಸ್, ಅಮಿತಾಬ್ ಬಚ್ಚನ್ ಅಭಿನಯದ ಕಲ್ಕಿ 2898 ಎಡಿ ಚಿತ್ರದ ಟ್ರೇಲರ್ ಬಹು ನಿರೀಕ್ಷೆ ಹುಟ್ಟಿಸಿದ್ದು, ಚಿತ್ರವು ಜೂ.27ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. 

Read more Photos on
click me!

Recommended Stories