ಕೃತಿ ಖರ್ಬಂದಾ ಅವರು ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ. ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ಅವರು ತೆಲುಗು ಚಿತ್ರ ಬೋನಿ ಮತ್ತು ಚಿರು ಚಿತ್ರದ ನಂತರ ಕನ್ನಡಲ್ಲಿ ಯಶ್ ಜೊತೆ ಗೂಗ್ಲಿ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು.
ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದರೂ, ಯಶ್ ಜೊತೆಯ ಗೂಗ್ಲಿ ಸಿನಿಮಾದಿಂದ ಕೃತಿ ಖರ್ಬಂದಾ ಎಲ್ಲರ ಗಮನ ಸೆಳೆದಿದ್ದಾರೆ.
ಬಾಲಿವುಡ್‌ನಲ್ಲೂ ತಮ್ಮ ಚಾಫು ಮೂಡಿಸಿತ್ತಿರುವ ಕೃತಿ ಖರ್ಬಂದಾ ಈಗ ಪರ್ಸನಲ್ ಲೈಫ್ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ವಿವಿಧ ಸಂದರ್ಭಗಳಲ್ಲಿ ಪುಲ್ಕಿಟ್ ಸಾಮ್ರಾಟ್ ಜೊತೆ ಕಾಣಿಸಿಕೊಂಡ ಇವರು ಈ ಹಿಂದೆ ಅವರು ಹಾಲಿಡೇ ಒಟ್ಟಿಗೆ ತೆರಳಿದ್ದರು.
Kriti Kharbanda
ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಕೃತಿ ಡೇಟಿಂಗ್ ವಿಚಾರವೇನು ಗುಟ್ಟಾಗಿ ಉಳಿದಿಲ್ಲ. ರಿಲೆಷನಿಇಶಿಪ್‌ನಲ್ಲಿರುವ ಈ ಜೋಡಿ ಸದ್ಯದಲ್ಲಿಯೇ ಮದುವೆಯಾಗುತ್ತಿದ್ದಾರೆ ಎಂದು ವರದಿಗಳು ಹರಿದಾಡುತ್ತಿದೆ.
ವರದಿಗಳ ಪ್ರಕಾರ, ಈ ಜೋಡಿ ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಬಯಸಿದ್ದರಿಂದ ಕೃತಿ ಪುಲ್ಕಿತ್ ಅವರ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಕೃತಿ ಕೂಡ ಒಮ್ಮೆ ತನ್ನ ಪ್ರೀತಿ ಮತ್ತು ಮದುವೆಯ ಬಗ್ಗೆ ತನ್ನ ಆಲೋಚನೆಗಳ ಬಗ್ಗೆ ಮಾತನಾಡುತ್ತಾ, ತಾವು ಲವ್ ಮ್ಯಾರೇಜ್ ಆಗುವ ಸುಳಿವು ನೀಡಿದ್ದರು.