ಪತ್ನಿ - ಮಗಳನ್ನು ತುಂಬಾ ಮಿಸ್‌ ಮಾಡಿಕೊಳ್ತಿದ್ದಾರೆ ರಣಬೀರ್‌: ಹಾಗಾದ್ರೆ ಎಲ್ಲಿದ್ದಾರೆ ಆಲಿಯಾ?

First Published | Mar 4, 2023, 6:09 PM IST

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ತಮ್ಮ ಮುಂಬರುವ ರೊಮ್ಯಾಂಟಿಕ್  ಕಾಮಿಡಿ ತು ಜೂಟಿ ಮೇ ಮಕ್ಕಾರ್‌ (Tu Jhoothi Main Makkaaar)  ಮೂಲಕ ಮತ್ತೆ ಬೆಳ್ಳಿ ಪರದೆಯ ಮೇಲೆ ಮರಳಲು ಸಿದ್ಧರಾಗಿದ್ದಾರೆ.   ಲುವ್ ರಂಜನ್ ಅವರ ಬಹುನಿರೀಕ್ಷಿತ ಯೋಜನೆಯು ಮಾರ್ಚ್ 8, ಬುಧವಾರ ಹೋಲಿಯ ವಿಶೇಷ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.  ರಣಬೀರ್ ಕಪೂರ್ ಪ್ರಸ್ತುತ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಈ ಸಿನಿಮಾದ ಪ್ರಚಾರ ಪ್ರವಾಸದಲ್ಲಿ ನಿರತರಾಗಿದ್ದಾರೆ.

ರಣಬೀರ್ ಕಪೂರ್ ಅವರು ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ಪ್ರಚಾರ ಕಾರ್ಯಕ್ರಮವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತೆರೆದಿಟ್ಟರು

ನಟ  ತಮ್ಮ ಪತ್ನಿ ಆಲಿಯಾ ಭಟ್ ಮತ್ತು ಅವರ   ಮಗಳು ರಾಹಾ  ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Tap to resize

ಏಕೆಂದರೆ ನಟಿ ಪ್ರಸ್ತುತ ಕಾಶ್ಮೀರದಲ್ಲಿ ತಮ್ಮ ಬಹುನಿರೀಕ್ಷಿತ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕಾಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಆಲಿಯಾ ತನ್ನೊಂದಿಗೆ ರಾಹಾರನ್ನು ಕಾಶ್ಮೀರಕ್ಕೆ ಕರೆದೊಯ್ದಿದ್ದಾರೆ ಎಂದು ಅವರು ಹೇಳಿದರು. 

'ದುರದೃಷ್ಟವಶಾತ್, ಆಲಿಯಾ ಕಾಶ್ಮೀರದಲ್ಲಿ ಶೂಟಿಂಗ್ ಮಾಡುತ್ತಿದ್ದಾಳೆ ಮತ್ತು ರಾಹಾಳನ್ನು ಅವಳೊಂದಿಗೆ ಕರೆದೊಯ್ದಿದ್ದಾಳೆ. ನಾನು  ಇಬ್ಬರನ್ನೂ  ತುಂಬಾ  ಮಿಸ್‌ ಮಾಡುತ್ತಿದ್ದೇನೆ' ಎಂದು ಡಾಟಿಂಗ್ ಫಾದರ್‌  ಮತ್ತು ಪ್ರೀತಿಯ ಪತಿ ರಣಬೀರ್‌  ಮಾಧ್ಯಮಗಳೊಂದಿಗಿನ ಚಾಟ್‌ನಲ್ಲಿ ಹೇಳಿದರು.

ರಣಬೀರ್ ಕಪೂರ್ ಅವರು ನಿರ್ದೇಶಕ ಲುವ್ ರಂಜನ್ ಅವರೊಂದಿಗೆ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ, ತು  ಜೂಟಿ  ಮೇ ಮಕ್ಕಾರ್‌ ಸಿನಿಮಾಕ್ಕಾಗಿ ಕೈಜೋಡಿಸುತ್ತಿದ್ದಾರೆ. ಇದರಲ್ಲಿ ನಟಿ  ಶ್ರದ್ಧಾ ಕಪೂರ್ ಅವರು ನಾಯಕಿಯಾಗಿ  ನಟಿಸಿದ್ದಾರೆ.

ranbir kapoor and alia bhatt

ಇದರ ನಂತರ, ರಣಬೀರ್‌  ಅನಿಮಲ್‌ನಲ್ಲಿ  ಕಾಣಿಸಿಕೊಳ್ಳಲಿದ್ದಾರೆ, ಮುಂಬರುವ ಆಕ್ಷನ್ ಥ್ರಿಲ್ಲರ್ ಇದನ್ನು ಕಬೀರ್ ಸಿಂಗ್ ಖ್ಯಾತಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ  ನಿರ್ದೇಶನ ಮಾಡುತ್ತಿದ್ದಾರೆ. ನೆಕ್ಸ್ಟ್‌, ಬ್ರಹ್ಮಾಸ್ತ್ರದ ಎರಡನೇ ಭಾಗಕ್ಕಾಗಿ ಅಯಾನ್ ಮುಖರ್ಜಿ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ.

Alia Bhatt

ಮತ್ತೊಂದೆಡೆ ಆಲಿಯಾ ಭಟ್   ಕರಣ್ ಜೋಹರ್ ನಿರ್ದೇಶಿಸಿದ ಮುಂಬರುವ ರೊಮ್ಯಾಂಟಿಕ್ ಹಾಸ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರ ಈ ಚಿತ್ರವು ಈ ವರ್ಷದ ಜುಲೈನಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.

alia bhatt

ನಂತರ, ಅವರು   ಫರ್ಹಾನ್ ಅಖ್ತರ್ ನಿರ್ದೇಶನದ ಜಿಲೆ ಜರಾದ  ಶೂಟಿಂಗ್  ಸ್ಟಾರ್ಟ್ ಮಾಡುತ್ತಾರೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!