ಆಲಿಯಾ ಭಟ್ ಶೈಕ್ಷಣಿಕ ಅರ್ಹತೆ ಬಗ್ಗೆ ವ್ಯಂಗವಾಡಿದ ಸೋನಾಕ್ಷಿ ಸಿನ್ಹಾ!

First Published | Mar 4, 2023, 6:03 PM IST

ಸಿನಿಮಾ ರಂಗದಲ್ಲಿ ಸ್ಟಾರ್ಸ್‌ ನಡುವೆ ಜಗಳ, ವ್ಯಂಗ, ಕೋಲ್ಡ್‌ ವಾರ್‌ಗಳು ಸಾಮಾನ್ಯ. ಹಲವು ಬಾರಿ ಪರಸ್ಪರ ಒಬ್ಬರಿಗೊಬ್ಬರು ಕಿಡಿಕಾರಿದ ಅಥವಾ ಅರೋಪ ಮಾಡಿದ ಹಲವು ಉದಾರಹಣೆಗಳಿವೆ. ಇದೇ ರೀತಿ ಸೋನಾಕ್ಷಿ ಸಿನ್ಹಾ(Sonakshi Sinha) ಆಲಿಯಾ ಭಟ್‌ (Alia Bhatt) ಅವರ ಬಗ್ಗೆ ವ್ಯಂಗವಾಡಿದ ಹಳೆ ವೀಡಿಯೋವೊಂದು ವೈರಲ್‌ ಆಗುತ್ತಿದೆ. ಆಲಿಯಾರ ಶಿಕ್ಷಣದ ಬಗ್ಗೆ ಸೋನಾಕ್ಷಿ ಅವರು ಏನು ಕಾಮೆಂಟ್‌ ಮಾಡಿದ್ದರು ಗೊತ್ತಾ?

ಸೋನಾಕ್ಷಿ ಮತ್ತು ಆಲಿಯಾ ಅವರು 2019 ರಲ್ಲಿ ಬಿಡುಗಡೆಯಾದ ಕಲಾಂಕ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಕಲಾಂಕ್ ಸಿನಿಮಾದ ಪ್ರಚಾರ ಸಮಯದಲ್ಲಿ, ಈ ನಟಿಯರ ನಡುವಿನ ವಿಶೇಷ ಬಂಧವು ಸ್ಪಷ್ಟವಾಗಿತ್ತು. ಅಲಿಯಾಳನ್ನು ಹೊಗಳುವ ಯಾವ  ಅವಕಾಶವನ್ನು ಸೋನಾಕ್ಷಿ ಅವರು ಬಿಡಲಿಲ್ಲ.

ಆದರೆ ಇವರಿಬ್ಬರ ನಡುವಿನ ಬಾಂಡಿಗ್‌ ಯಾವಾಗಲೂ ಹೀಗೆ ಸೌಹಾರ್ದಯುತವಾಗಿರಲಿಲ್ಲ. ಒಮ್ಮೆ ಸೋನಾಕ್ಷಿ ನ್ಯಾಷನಲ್‌ ಟಿವಿ  ಚಾನೆಲ್‌ನಲ್ಲಿ  ಆಲಿಯಾ ಭಟ್ ಅವರ ಶಿಕ್ಷಣವನ್ನು ಪೂರ್ಣಗೊಳಿಸಲು ಸಲಹೆ ನೀಡಿದ್ದರು.

Tap to resize

ವಾಸ್ತವವಾಗಿ ಕಾಪಿ ವಿಥ್‌ ಕರಣ್ ಸೀಸನ್ 4ರಲ್ಲಿ  ಸೋನಾಕ್ಷಿ ಸಿನ್ಹಾ ನಟ ಶಾಹಿದ್ ಕಪೂರ್ ಅವರೊಂದಿಗೆ ಆಗಮಿಸಿದ್ದರು. ರ್ಯಾಪಿಡ್‌ ಫೈರ್‌ ರೌಂಡ್‌ ಸಮಯದಲ್ಲಿ, ಸೋನಾಕ್ಷಿ ಆಲಿಯಾ ಭಟ್  ಓದಿನ ಬಗ್ಗೆ ವ್ಯಂಗವಾಡಿದ್ದರು

ತನ್ನ ಸಹ ನಟಿಯರು ಚಲನಚಿತ್ರೋದ್ಯಮದಲ್ಲಿ ಇಲ್ಲದಿದ್ದರೆ ಏನು ಮಾಡಬೇಕೆಂಬುದನ್ನು ಕೇಳಿದಾಗ. ಆಲಿಯಾ ಹೆಸರನ್ನು ಕೇಳಿದ ತಕ್ಷಣ 'ಆಲಿಯಾ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಬೇಕು ಎಂದು ಸೋನಾಕ್ಷಿ ಎಂದು ಹೇಳಿದರು. ಇದರಲ್ಲಿ ವ್ಯಂಗ ಸ್ಪಷ್ಟವಾಗಿ ಕಾಣುತ್ತಿತ್ತು. 

ಆದರೆ ನಂತರ ಈ ನಟಿಯರು ಪರಸ್ಪರ ಅತ್ಮೀಯ ಬಾಂಡಿಗ್‌  ಹಂಚಿಕೊಳ್ಳುತ್ತಾರೆ ಮತ್ತು ಈಗ ಖಂಡಿತವಾಗಿಯೂ  ಇಬ್ಬರ ನಡುವೆ ಯಾವುದೇ  ಕೆಟ್ಟ ಮನಸ್ತಾಪವನ್ನು ಹೊಂದಿಲ್ಲ.

Alia Bhatt, Sonakshi Sinha

ಕೆಲಸದ ಮುಂಭಾಗದಲ್ಲಿ, ಆಲಿಯಾ ಭಟ್ ರಾಕಿ ಔರ್ ರಾಣಿ ಕಿ ಪ್ರೀಮಿ ಕಹಾನಿಯಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಸೋನಾಕ್ಷಿ ಸಿನ್ಹಾ ಕೊನೆಯ ಬಾರಿಗೆ ಡಬಲ್ ಎಕ್ಸ್‌ಎಲ್‌ನಲ್ಲಿ ಕಾಣಿಸಿಕೊಂಡರು ಮತ್ತು ಅವರ ಅಭಿನಯಕ್ಕಾಗಿ ಪ್ರಶಂಸೆಗಳನ್ನು ಪಡೆದರು

Latest Videos

click me!